- ಹಳ್ಳಿ ಹಳ್ಳಿಯಲ್ಲೂ ಹೆಚ್ಚಿದ ಕೇಸ್: ಜನರಲ್ಲಿ ಆತಂಕ
- ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯ
- ಕೆಟ್ಟ ಮೇಲೆ ಬುದ್ದಿ ಬಂತು: ಕ್ರಿಮಿನಾಶಕ ಸಿಂಪಡಣೆ
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ತಾಲೂಕಿನ ಪ್ರಮುಖ ಕೇಂದ್ರ ಕೋಣಂದೂರು ಕೂಡ ಸಂಪೂರ್ಣ ಲಾಕ್ ಡೌನ್ ಆಗಿದೆ. ಕೋಣಂದೂರು ಸುತ್ತಮುತ್ತ ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳಿವೆ. ಹೀಗಾಗಿ ತಾಲೂಕು ಆಡಳಿತ ಲಾಕ್ ಡೌನ್ ಘೋಷಣೆ ಆಗಿದೆ. ರಸ್ತೆಗೆ ಬೇಲಿ ಹಾಕಿದ್ದು ಪೊಲೀಸ್ ಪಹರೆ ಇದೆ. ಅನಗತ್ಯ ವಾಹನ ಮುಟ್ಟುಗೋಲು ಹಾಕಲಾಗುತ್ತದೆ.
ಕೋಣಂದೂರು ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲಿ ಕರೋನಾ ಸಂಖ್ಯೆ ದಿನೇ ದಿನೇ ಹೆಚ್ಚಿದೆ. ಬೆಂಗಳೂರು ಸೇರಿದಂತೆ ಹೊರ ಭಾಗಗಳಿಂದ ಕೋಣಂದೂರು ಸುತ್ತಮುತ್ತ 5 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಅವರನ್ನು ಕ್ವಾರೈನ್ಟೈನ್ ಮಾಡಿರಲಿಲ್ಲ. ಜೊತೆಗೆ ಜಾಗೃತಿ ಮೂಡಿಸುವಲ್ಲಿ ಕೋಣಂದೂರು ಗ್ರಾಮ ಪಂಚಾಯತ್ ವಿಫಲವಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕ್ರಿಮಿನಾಶಕ ಸಿಂಪಡಣೆ!: ಕೋಣಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರೋನಾ ಸೋಂಕು ತಡೆಯಲು ಕ್ರಿಮಿನಾಶಕ ಔಷಧಿ ಸಿಂಪಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಯೋಜನೆಗೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್, ಮಂಗಳ ಗೋಪಿ,ಎ.ಡಿ.ಸುಧಾಕರ್, ನೋಡೆಲ್ ಅಧಿಕಾರಿಯಾದ ಶಅಜಿತ್ ಕುಮಾರ್ ಭಾಗಿಯಾಗಿದ್ದರು. ಔಷಧಿ ಸಿಂಪಡಣೆ ಕಾರ್ಯವನ್ನು ಜಗದೀಶ್ ಮತ್ತು ತಂಡ ನೇರವೇರಿಸಿತು.