- ಇಂದು ಮಧ್ಯಾಹ್ನ ಸೂಪರ್ ಮೂನ್
- ನಿನ್ನೆ ಸೂರ್ಯನ ಸುತ್ತ ಮೂಡಿತ್ತು ಚಕ್ರ
- ಪ್ರಾಕೃತಿಕ ವಿಸ್ಮಯ: ಏನು ಹೇಳುತ್ತೆ ಇತಿಹಾಸ..?
ಬೆಂಗಳೂರು: ಮೇ 26ರ ವೈಶಾಖ ಹುಣ್ಣಿಮೆ ಬಹಳ ವಿಶೇಷವಾದ ಹುಣ್ಣಿಮೆ. ಅಂದು ಸೂಪರ್ ಮೂನ್ ಮತ್ತು ಚಂದ್ರಗ್ರಹಣ ನಡೆಯಲಿದೆ. ಆದರೆ ಈ ಚಂದ್ರ ಭಾರತದಲ್ಲಿ ಕಾಣುವುದಿಲ್ಲ.
2021ರಲ್ಲಿ 3 ಸೂಪರ್ ಮೂನ್ಗಳ ಗೋಚರವಾಗುತ್ತದೆ. ಈ ವರ್ಷ ಭೂಮಿಗೆ ಅತಿ ಹತ್ತಿರದಿಂದ ಗೋಚರವಾಗುವ ಗ್ರಹಣ ಮೇ 26ಕ್ಕೆ ಸಂಭವಿಸಲಿದೆ.
ಭೂಮಿಯ ಸುತ್ತ ದೀರ್ಘ ವೃತ್ತಾಕಾರದಲ್ಲಿ ಚಲಿಸುವ ಸಂದರ್ಭ ಭೂಮಿಗೆ ಅತಿ ಸಮೀಪ ಚಂದ್ರ ಬರುತ್ತಾನೆ. ಭೂಮಿ ಮತ್ತು ಚಂದ್ರನ ನಡುವೆ 3,84,000 ಸಾವಿರ ಕಿಲೋ ಮೀಟರ್ ಅಂತರವಿದೆ. ಭೂಮಿಗೆ ಚಂದ್ರ ಬಹಳ ಹತ್ತಿರ ಬರಲಿದ್ದಾನೆ. 3 ಲಕ್ಷ 57 ಸಾವಿರ ಕಿಲೋಮೀಟರ್ ಅಂತರದಲ್ಲಿ ಪರ್ಯಟನೆ ಮಾಡಲಿದ್ದಾನೆ. ಸುಮಾರು ಏಳು ಶೇಕಡದಷ್ಟು ಚಂದ್ರ ದೊಡ್ಡದಾಗಿ ಮೇಲೆ ನಿಂತು ನಮಗೆ ಕಾಣಲಿದ್ದಾನೆ.
ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಈ ಗ್ರಹಣ ನಡೆಯುತ್ತದೆ. ನಾವು ಭಾರತೀಯರು ಗ್ರಹಣವನ್ನು ನೋಡಲು ಸಾಧ್ಯವಿಲ್ಲ. ಭಾರತದ ಯಾವ ಭೂಪ್ರದೇಶದಲ್ಲಿಯೂ ಚಂದ್ರಗ್ರಹಣ ಗೋಚರಿಸುವುದಿಲ್ಲ ಎಂದು ಉಡುಪಿಯ ಪಿಪಿಸಿ ಕಾಲೇಜು ಖಗೋಳಶಾಸ್ತ್ರ ವಿಭಾಗ ಪ್ರಾಧ್ಯಾಪಕ ಅತುಲ್ ಭಟ್ ಮಾಹಿತಿ ನೀಡಿದ್ದಾರೆ.
ಸೂರ್ಯನ ಸುತ್ತ ರಿಂಗ್!: ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಸೋಮವಾರ ಸೂರ್ಯನ ಸುತ್ತ ಚಕ್ರ ಮೂಡುವ ಮೂಲಕ ವಿಸ್ಮಯಕ್ಕೆ ಕಾರಣವಾಗಿದೆ. ಸೂರ್ಯನ ಸುತ್ತ ಬಿಳಿ ಬಣ್ಣದ ಚಕ್ರ ಮೂಡಿತ್ತು. ಈ ಫೋಟೋಗಳು ವೈರಲ್ ಆಗಿವೆ.