- ಒಳ್ಳೆ ಉದ್ದೇಶಕ್ಕಿಂತ ಕೆಟ್ಟದಾಗೋದೇ ಹೆಚ್ಚು
- ಮೊಬೈಲ್ ಗೀಳಿನಿಂದ ಮಕ್ಕಳ ಭವಿಷ್ಯಕ್ಕೆ ಪೆಟ್ಟು
ಬೆಂಗಳೂರು: ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಸರಕಾರಕ್ಕೆ ಸವಾಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಗುತ್ತಿಲ್ಲ. ಪರೀಕ್ಷೆ ನಡೆಸಲು ಕಷ್ಟ. ಈ ನಡುವೆ
ಸರಕಾರ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಶಾಲಾ ಮಕ್ಕಳಿಗೆ ಉಚಿತ ‘ಸ್ಮಾರ್ಟ್ ಫೋನ್’ ವಿತರಣೆಯ ಕುರಿತು ಚಿಂತನೆ ನಡೆಸಿದೆ. ಆದರೆ ಈ ಯೋಜನೆ ಸರಕಾರದ ಲೆಕ್ಕದಲ್ಲಿ ಒಳ್ಳೆಯದು. ಆದ್ರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಟ್ಟದು ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ಆನ್ಲೈನ್ ಕ್ಲಾಸ್ನಿಂದ ಯಾವ ಮಕ್ಕಳು ಕೂಡ ವಂಚಿತರಾಗಬಾರದು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದೆ, ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಬಡ ಮಕ್ಕಳ ನೆರವಿಗೆ ಸರ್ಕಾರ ಬರಲಿದೆ ಎಂದಿದ್ದಾರೆ. ಆದರೆ ಈ ನಿರ್ಧಾರವನ್ನು ಮತ್ತಷ್ಟು ಪರಿಶೀಲನೆ ಮಾಡುವುದು ಒಳಿತು.
ಏಕೆ ಈ ಯೋಜನೆ?: ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗಿಂತ ಹೆಚ್ಚಾಗಿ ಆನ್ಲೈನ್ ತರಗತಿಗಳೇ ನಡೆದಿವೆ. ಅದ್ರಲ್ಲೂ ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತದೆ ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಉಚಿತವಾಗಿ ಸ್ಮಾರ್ಟ್ ಫೋನ್ ಒದಗಿಸುವ ಚಿಂತನೆ ನಡೆದಿದೆ. ಆದರೆ ಈ ಮಕ್ಕಳು ಮೊಬೈಲ್ ಅನ್ನು ಶಿಕ್ಷಣಕ್ಕೆ ಮಾತ್ರ ಬಳಸುವುದು ಡೌಟು.
ಆನ್ಲೈನ್ ಶಿಕ್ಷಣದ ಎಫೆಕ್ಟ್!: ಆನ್ಲೈನ್ ಶಿಕ್ಷಣದಿಂದ ಎಲ್ಲಾ ಮಕ್ಕಳ ಕೈಗೆ ಮೊಬೈಲ್ ಬಂದಿದೆ. ಆದರೆ ಅದು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಒಂದು ವರ್ಷ ವ್ಯರ್ಥವಾದರೆ ತೊಂದರೆ ಇಲ್ಲ. ಆದರೆ ಮೊಬೈಲ್ ಇಂದ ಶೇ.60ರಷ್ಟು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಒಂದು ಬಾರಿ ಮೊಬೈಲ್ ಚಟಕ್ಕೆ ಬಿದ್ದರೆ ಗೇಮ್ಸ್, ವೀಡಿಯೋಸ್, ಸಾಮಾಜಿಕ ಜಾಲತಾಣದ ಗೀಳು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ತೊಂದರೆ ಮಾಡಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಮೊಬೈಲ್ ಚಟದಿಂದ ಮಕ್ಕಳ ಸ್ವಂತಿಕೆ, ಕ್ರಿಯಾಶೀಲತೆ, ಬುದ್ದಿವಂತಿಕೆ, ಸ್ವ ಚಿಂತನೆ, ಮಾನಸಿಕ ಸ್ಟೈರ್ಯ, ಧೈರ್ಯ, ಸಂಸ್ಕಾರ, ಮಾನವೀಯತೆ ಸಂಪೂರ್ಣ ಮರೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಡಿಗ್ರಿ ವಿದ್ಯಾರ್ಥಿಗಳಿಗೆ ಸರಕಾರ ನೀಡಿದ್ದ ಲ್ಯಾಪ್ ಟಾಪ್ ಕೂಡ ಬರಿ ಸಿನಿಮಾ ನೋಡಲು ಬಳಕೆಯಾಗುತ್ತಿದೆ.