- ಎಲ್ಲಾ ಕಡೆ ಸಾವಿನ ಸಂಖ್ಯೆ ಹೆಚ್ಚಾಯ್ತು
- ಕರೋನಾಗೆ 27 ಸಾವಿರ ಮಂದಿ ಸಾವು
- ಗ್ಯಾಂಗ್ ರೇಪ್ ಆರೋಪಿಗಳಿಗೆ ಶೂಟ್ ಔಟ್
- ಕರೋನಾಕ್ಕೆ ಮಕ್ಕಳ ಬಲಿ ಶುರು..ಎಚ್ಚರ..!
- ಪಾದರಕ್ಷೆ, ಬಟ್ಟೆ ದರ ಏರಿಕೆ ಶಾಕ್..?
ಬೆಂಗಳೂರು: ರಾಜ್ಯದಲ್ಲಿ ಬ್ಲಾಕ್ ಫಂಗಸ್ ಮತ್ತೆ ಸದ್ದು ಮಾಡಿದೆ. ಪ್ರತಿ ದಿನ ನೂರಾರು ಬಲಿ ಪಡೆದುಕೊಳ್ಳುತ್ತಿದೆ. ಒಂದು ಕಡೆ ಕರೋನಾ ಜನರ ಜೀವ ಮತ್ತು ಬದುಕು ಸಂಪೂರ್ಣ ಬಲಿ ಪಡೆದಿದೆ. ಲಸಿಕೆ, ಆಮ್ಲಜನಕ, ವೆಂಟಿಲೇಟರ್ ಎಲ್ಲಿಯೂ ಸಿಗುತ್ತಿಲ್ಲ. ಈ ನಡುವೆ ಬ್ಲಾಕ್ ಫಂಗಸ್ ಔಷಧಿ ಆಂಪೋಟೆರಿಸಿನ್ ಸಿಗುತ್ತಿಲ್ಲ. ಕರ್ನಾಟಕದಲ್ಲಿ 600 ಕೇಸುಗಳಿದ್ದು, 42000 ವಯಲ್ಸ್ ಔಷಧಿ ಬೇಕು. ಕನಿಷ್ಠ 36000 ವಯಲ್ಸ್ ಆದರೂ ಬೇಕು. ಆದ್ರೆ ಕೇಂದ್ರ ಸರಕಾರ 5170 ವಯಲ್ಸ್ ನೀಡಿದೆ.
ಪ್ರತಿ ಜಿಲ್ಲೆಯಲ್ಲೂ ಬ್ಲಾಕ್ ಫಂಗಸ್ ಜನರ ಬಲಿ ಪಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಿ ಮೂವರು ಸಾವನ್ನು ಕಂಡಿದ್ದಾರೆ. ಔಷಧ ಉತ್ಪಾದನೆಗೆ ಸರಕಾರ, ಕಂಪನಿಗಳು ಮುಂದಾಗಿ ಜನರ ಜೀವ ಉಳಿಸಬೇಕಿದೆ.
ರಾಜ್ಯಕ್ಕೆ ಕಂಟಕ!: ರಾಜ್ಯದಲ್ಲಿ 25 ಲಕ್ಷ ಕರೋನಾ ಕೇಸ್ ದಾಖಲಾಗಿದ್ದು,ರಾಜ್ಯಕ್ಕೆ ಕಂಟಕ ಎದುರಾಗಿದೆ. ರಾಜ್ಯದಲ್ಲಿ 27000 ಮರಣ ಆಗಿದೆ. ಕಳೆದ ವಾರ ಬೆಂಗಳೂರಲ್ಲಿ ಕೊಂಚ ಕಡಿಮೆಯಾಗಿದ್ದ ಕರೋನಾ ಮತ್ತೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಕರೋನಾ ರಾಕ್ಷಸ ಅಟ್ಟಹಾಸ ಮೆರೆಯುತ್ತಿದೆ.
ರಾಜಧಾನಿಯಲ್ಲಿ ನಿರ್ಭಯಾ ರೀತಿಯ ಗ್ಯಾಂಗ್ ರೇಪ್: ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ವಿಕೃತಿ ಮರೆದ ಘಟನೆ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ. ಈ ನಡುವೆ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಸ್ಥಳ ಮಹಜರು ಮಾಡುವಾಗ ಆರೋಪಿಗಳು ಪೋಲೀಸರ ಮೇಲೆ ಹಲ್ಲೆ ಮಾಡುವ ಯತ್ನ ಮಾಡಿದ್ದು ಇಬ್ಬರ ಮೇಲೆ ಶೂಟ್ ಔಟ್ ಮಾಡಲಾಗಿದೆ.
ಏನಿದು ಕೇಸ್?: ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಕ್ಕಳಿಗೂ ಬಂತು ಕರೋನಾ!: ಒಂಬತ್ತು ದಿನ ಮತ್ತು ಆರು ತಿಂಗಳು ಕಂದಮ್ಮ ಸೇರಿದಂತೆ ಮೂರು ನವಜಾತ ಶಿಶುಗಳಿಗೆ ಕರೋನಾ ಸೋಂಕು ತಗುಲಿದೆ ಎಂದು ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆ ಮಾಹಿತಿ ನೀಡಿದೆ. ನವಜಾತ ಶಿಶುಗಳ ಜೊತೆ ಐವರು ಮಕ್ಕಳು ಸಹ ಕೊರೊನಾಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಂಬತ್ತು ದಿನಗಳ ನವಜಾತ ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಎಚ್ಎಫ್ಎನ್ಸಿ ಬೆಡ್ ನಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಶಿಶು ಆರೋಗ್ಯವಾಗಿದೆ. ಈಗ ಶಿಶು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದೆ. ಪೋಷಕರೇ ಮಕ್ಕಳ ಬಗ್ಗೆ ಎಚ್ಚರ ವಹಿಸಿ. ಹೊರಗಡೆ ಬಿಡಬೇಡಿ..ಮನೆಯವರ ಬೇಜವಾಬ್ದಾರಿ ಮಾಡಬೇಡಿ. ಹಿರಿಯರು, ಮಕ್ಕಳ ಬಗ್ಗೆ ಎಚ್ಚರ ವಹಿಸಿ..!.
ಕೇಂದ್ರ ಸರಕಾರ ಪಾದರಕ್ಷೆ, ಬಟ್ಟೆ ಮೇಲೆ ಜಿಎಸ್ಟಿ ಹೆಚ್ಚಳ ಮಾಡಲು ನಿರ್ಧಾರ ಮಾಡಿದೆ. ಕರೋನಾ ಚಿಕಿತ್ಸೆ, ವಸ್ತುಗಳ ಮೇಲೆ ದರ ಕಡಿಮೆ ಮಾಡುವ ಸಾಧ್ಯತೆ ಇದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “ಓಂಒಒUಖ ಇಘಿPಖಇSS” ಫೇಸ್ಬುಕ್ ಮತ್ತು ಯೂಟ್ಯೂಬ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.
ಕರೋನಾ ನಿಯಂತ್ರಣ ಫೇಲ್!…ಸರಕಾರದ ತಪ್ಪೋ..ಜನರದ್ದೋ..ನಿರೀಕ್ಷಿಸಿ…ಮಾಧ್ಯಮ ಜಗತ್ತಲ್ಲಿ ಯಾರೂ ಮಾಡದ ರಿಯಲ್ ಸ್ಟೋರಿ..ನಮ್ಮೂರ್ ಎಕ್ಸ್ಪ್ರೆಸ್ ಅಲ್ಲಿ ಮಾತ್ರ..!