- ಒಂದು ತಿಂಗಳು ವಸೂಲಾತಿಯೂ ಇಲ್ಲ..ಸಾಲವು ಇಲ್ಲ
- ಸಂಸ್ಥೆಗಳಿಗೆ ಸಚಿವ ಈಶ್ವರಪ್ಪ ಖಡಕ್ ವಾರ್ನಿಂಗ್
- ಆದೇಶವನ್ನೇ ಪ್ರಕಟಿಸಿದ ಉಡುಪಿ ಡಿಸಿ ಜಗದೀಶ್
- ಸರಕಾರ 3 ತಿಂಗಳ ವಿಸ್ತರಣೆ ಆದೇಶ ಏಕೆ ಮಾಡಿಲ್ಲ?
ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡಿ ಅಭಿಯಾನ!
ಶಿವಮೊಗ್ಗ/ಉಡುಪಿ: ಕರೋನಾ ಲಾಕ್ ಡೌನ್ ಆಗಿ ಒಂದು ತಿಂಗಳು ಮುಗಿದಿದೆ. ಇನ್ನು ಒಂದು ತಿಂಗಳು ಲಾಕ್ ಆಗುವ ಎಲ್ಲಾ ಲಕ್ಷಣಗಳಿವೆ. ಬಡವರು, ಕೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳು ದುಡ್ಡಿನ ಮುಖ ನೋಡದೆ ತುತ್ತು ಹೊತ್ತು ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಸರಕಾರ ಎಲ್ಲಾ ವ್ಯವಹಾರಕ್ಕೆ ನಿಷೇಧ ಮಾಡಿದೆ. ಆದ್ರೆ ಸಾಲ ಮಾಡಿದ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ. ಈ ನಡುವೆ ಖಾಸಗಿ ಫೈನಾನ್ಸ್, ಸಂಘ ಸಂಸ್ಥೆ, ಬ್ಯಾಂಕ್ಗಳಿಂದ ಪಡೆದ ಸಾಲದ ಕಂತು ತೀರಿಸಲಾಗದೆ ಕೋಟಿ ಕೋಟಿ ಜನ ಪರದಾಟ ನಡೆಸುತ್ತಿದ್ದಾರೆ. ಈ ವೇಳೆ ಸರಕಾರ ಮಧ್ಯ ಪ್ರವೇಶ ಮಾಡಿ ಮೇ, ಜೂನ್, ಜುಲೈ ಮೂರು ತಿಂಗಳು ಕಂತು ವಿಸ್ತರಣೆ(ಮುಂದೂಡಿಕೆ) ಮಾಡಿಸಬೇಕು. ಜೊತೆಗೆ ಕಡಿಮೆ ಬಡ್ಡಿ ಹಾಕಲು ತಕ್ಷಣ ಹಣಕಾಸು ಇಲಾಖೆ ಮುಂದಾಗಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ವಸೂಲಿಗೆ ಬಂದ್ರೆ ಹುಷಾರ್!: ಮೈಕ್ರೋ ಫೈನಾನ್ಸ್ ನವರು ಸಾಲ ವಸೂಲಿಗೆ ಇಳಿಯುವ ಹಾಗಿಲ್ಲ. ಮೈಕ್ರೋ ಫೈನಾನ್ಸ್ ನಿಂದ ಸಾಲ ವಸೂಲಿಗೆ ಮುಂದಾದರೆ ಅಂತಹವರ ವಿರುದ್ಧ ದೂರುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಸಾಲ ಪಡೆಯುವ ಹಾಗಿಲ್ಲ ಹಾಗೂ ಸಾಲ ವಸೂಲಿನೂ ಮಾಡುವ ಹಾಗಿಲ್ಲ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಉಡುಪಿ ಡಿಸಿ ಆದೇಶ: ಕರೋನಾ ತುರ್ತು ಸಂದರ್ಭದಲ್ಲಿ ಯಾವುದೇ ಮೈಕ್ರೋಫೈನಾನ್ಸ್, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿದಾರರು, ಮನೆ ಮನೆಗೆ ಭೇಟಿ ನೀಡುವುದನ್ನು ಜೂನ್ 6ರವರೆಗೆ ನಿರ್ಬಂಧಿಸಲಾಗಿದೆ. ಒಂದು ವೇಳೆ ಲಾಕ್ ಡೌನ್ ಮುಂದುವರಿದರೆ ಅಲ್ಲಿಯವರೆಗೆ ವಸೂಲಿ ಮಾಡುವ ಹಾಗಿಲ್ಲ. ಸಾಲ ಮರು ಪಾವತಿ ಮಾಡಲು ಒತ್ತಡ ಹೇರುವಂತಿಲ್ಲ, ಅಲ್ಲದೇ ಸಾಲ ಮರುಪಾವತಿ ಮಾಡಲು ಒತ್ತಡ ಹೇರಿದ್ದಲ್ಲಿ , ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆಯಿಂದ ಯಾವುದೇ ಗೊಂದಲ, ಸಂಘರ್ಷ ಉಂಟಾಗದoತೆ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಈ ಮೂಲಕ ಉಡುಪಿ ಡಿಸಿ ಮಾದರಿಯಾಗಿದ್ದಾರೆ.