- ಲಾಕ್ ಡೌನ್ ಭಯದಲ್ಲಿ ಖರೀದಿಗೆ ಮುಗಿ ಬಿದ್ದ ಜನ
- ಮಟನ್, ಮದ್ಯ, ತರಕಾರಿ ಅಂಗಡಿ ಮುಂದೆ ಕ್ಯೂ
- ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಜಾಮ್
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಸೀಲ್ ಡೌನ್ ಹಿನ್ನೆಲೆ ಮುಂಜಾನೆಯಿಂದಲೇ ಜನ ಬೀದಿಗೆ ಬಂದಿದ್ದಾರೆ. ಸುಮಾರು 10 ಸಾವಿರ ಮಂದಿ ಪೇಟೆಗೆ ಬಂದಿದ್ದು ಅಗತ್ಯ ವಸ್ತು ಖರೀದಿಗೆ ಮುಗಿ ಬಿದ್ದರು. ಈ ಕಾರಣ ಕರೋನಾ ಒಂದು ವಾರ ಹೆಚ್ಚಾಗುವ ಸಾಧ್ಯತೆ ಇದೆ.
2 ಕಿಮೀ ವ್ಯಾಪ್ತಿಯಲ್ಲಿ ಜನವೋ ಜನ!: ತೀರ್ಥಹಳ್ಳಿಯ ಕುರುವಳ್ಳಿ ಮಟನ್ ಅಂಗಡಿಯಿಂದ ಹಿಡಿದು ಕುಶಾವತಿ, ಬಾಳೆಬೈಲು ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಜನ, ವಾಹನಗಳಿಂದ ತುಂಬಿ ಹೋಗಿತ್ತು. ಪೊಲೀಸರು ಜಾಗೃತಿ ಮೂಡಿಸಿದರೂ ಕೇಳದ ಪರಿಸ್ಥಿತಿಯಲ್ಲಿ ಜನ ಇದ್ದರು.
ಮದ್ಯದ ಅಂಗಡಿ ಮುಂದೆ ಮದ್ಯ ಪ್ರಿಯರು ಮುಗಿ ಬಿದ್ದಿದ್ದರು. ಇನ್ನು ಮಟನ್, ಚಿಕನ್ ಅಂಗಡಿ ಕೂಡ ರಶ್ ಆಗಿದ್ದವು.
ಮೆಡಿಕಲ್, ತರಕಾರಿ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿದ್ರೆ ಸೂಪರ್ ಬಜಾರ್ ಕರೋನಾ ಹರಡುವ ಕೇಂದ್ರಗಳಾದವು.
ತೀರ್ಥಹಳ್ಳಿ ಮಾತ್ರವಲ್ಲದೆ ಕೋಣಂದೂರು, ಬೆಜ್ಜವಳ್ಳಿ, ಕಮ್ಮರಡಿ, ಕಟ್ಟೆಹಕ್ಕಲು, ಮಂಡಗದ್ದೆಯಲ್ಲೂ ಜನರ ಸಂಖ್ಯೆ ಹೆಚ್ಚಿತ್ತು. ಇದು ತಾಲೂಕು ಆಡಳಿತಕ್ಕೆ ತಲೆನೋವಾಯಿತು.