- ಇಂದು ಸಿಎಂ ಸಭೆ: ಬಹುತೇಕ ನಿರ್ಧಾರ
- ಸಿಬಿಎಸ್ಸಿ 12 ಪರೀಕ್ಷೆ ರದ್ದು ಬಳಿಕ ರಾಜ್ಯದಲ್ಲಿ ಏನು?
- ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಗೊಂದಲ!
ಬೆಂಗಳೂರು: ರಾಜ್ಯದಲ್ಲಿ ಜೂ.15ರವರೆಗೆ ಲಾಕ್ ಡೌನ್ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಕರೋನಾ ಕೊಂಚ ಹಿಡಿತಕ್ಕೆ ಬಂದಿದೆ. ಆದ್ರೆ ಏಕಾಏಕಿ ಮತ್ತೆ ಜನರು ಹೊರಬಂದರೆ ಮತ್ತೆ ಕರೋನಾ ಏರಿಕೆ ಆಗುವ ಸಾಧ್ಯತೆ ಹಿನ್ನೆಲೆ ಸರಕಾರ ಜೂ.15ರವರೆಗೆ ಲಾಕ್ ಮುಂದುವರಿಸಲು ನಿರ್ಧಾರ ಮಾಡಲಿದೆ ಎನ್ನಲಾಗಿದೆ.
ಇತ್ತ ಸಿಎಂ ಬುಧವಾರ ಸರಣಿ ಸಭೆ ನಡೆಸಿ ತೀರ್ಮಾನಕ್ಕೆ ಬರಲಿದ್ದಾರೆ.
ಪರೀಕ್ಷೆ ಗೊಂದಲ: ಪ್ರಧಾನಿ ಮೋದಿ ಅವರು ಕೇಂದ್ರ ಮಟ್ಟದಲ್ಲಿ ಸಿಬಿಎಸ್ಸಿ, ಐಸಿಎಸ್ಸಿ 12 ಪಿಯು ಪರೀಕ್ಷೆ ರದ್ದು ಮಾಡಿ ಆದೇಶ ಮಾಡಿದ ಹಿನ್ನೆಲೆ ರಾಜ್ಯದಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಏನಾಗಲಿದೆ ಎಂಬ ಗೊಂದಲ ಮೂಡಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಇನ್ನೆರಡು ದಿನದಲ್ಲಿ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
ಮಕ್ಕಳ ಮೇಲೆ ಕರೋನಾ? !: ರಾಜ್ಯದಲ್ಲಿ 3 ಲಕ್ಷ ಸಕ್ರಿಯ ಪ್ರಕರಣಗಳ ನಡುವೆ ಮಕ್ಕಳ ಮೇಲೆ ಕರೋನಾ ಅಟ್ಯಾಕ್ ಶುರು ಮಾಡಿದೆ. ಮಹಾರಾಷ್ಟ್ರದಲ್ಲಿ ಮಕ್ಕಳಲ್ಲಿ ಕರೋನಾ ಈಗಾಗಲೇ ದಾಳಿ ಮಾಡಿದೆ. ರಾಜ್ಯದಲ್ಲೂ ಪ್ರತಿ ದಿನ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಹಲವು ಮಕ್ಕಳು ಸಾವನ್ನು ಕಂಡಿವೆ. ಮಕ್ಕಳ ಬಗ್ಗೆ ಜಾಗೃತಿ ಇರಲಿ..!