ತೀರ್ಥಹಳ್ಳಿಯಲ್ಲಿ ಹಣ ಟ್ರಾನ್ಸ್ಫರ್ ಮಾಡದೆ ” ಡಿಜಿಟಲ್ ಮೋಸ”!
– ಸ್ಕ್ಯಾನ್ ಮಾಡಿ ಹಣ ಹಾಕಿದಂತೆ ನಾಟಕ: ಡಿಜಿಟಲ್ ವಂಚನೆ
– ಪೊಲೀಸ್ ಇಲಾಖೆ ಡಿಜಿಟಲ್ ವಂಚಕರ ಹಿಡಿಯದಿದ್ರೆ ಹೀಗೆ ಆಗುತ್ತೆ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಆನ್ಲೈನ್ ಸ್ಕ್ಯಾನ್ ಮಾಡುವ ಮೂಲಕ ಹಣ ಕೊಡುವುದಾಗಿ ನಂಬಿಸಿ 5000 ರೂ. ಹಣವನ್ನು ತೆಗೆದುಕೊಂಡು ಹೋಗಿ, ಹಣವನ್ನ ಟ್ರಾನ್ಸ್ಫರ್ ಮಾಡಿದ ರೀತಿಯಲ್ಲಿ ನಾಟಕ ಮಾಡಿ ವಂಚಿಸಿದ ಘಟನೆ ನಡೆದಿದೆ.
ಡಿಜಿಟಲ್ನಲ್ಲಿ ಮೋಸ ಮಾಡುತ್ತಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ತೀರ್ಥಹಳ್ಳಿ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ಮೊಬೈಲ್ ಅಂಗಡಿಯಲ್ಲಿ ಒಂದಕ್ಕೆ ತೆರಳಿದ ತಿಪ್ಪೇಸ್ವಾಮಿ ಎಂದು ಹೆಸರು ಬರುವ ಅನಾಮಿಕ ವ್ಯಕ್ತಿ ಹಣ ಕ್ಯಾಶ್ ಬೇಕು ಗೂಗಲ್ ಪೆ ಮಾಡುತ್ತೇನೆ ಎಂದು ಹಣವನ್ನ ಪಡೆದು ಮೊಬೈಲ್ ಮೂಲಕ ಅಕೌಂಟ್ ಯುಪಿಐ ಸ್ಕ್ಯಾನ್ ಮಾಡಿದ್ದಾನೆ. ಹಣ ಟ್ರಾನ್ಸ್ಫರ್ ಆಗಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಟ್ರಾನ್ಸ್ಫರ್ ಅಂತ ಡಿಸ್ಪ್ಲೇ ಕೂಡ ಬಂದಿದೆ. ಇದೇ ಕಾರಣಕ್ಕೆ ಹಣವನ್ನು ನೀಡಲಾಗಿದೆ. ಆದ್ರೆ ಹಣವನ್ನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡದೆ ಡಿಜಿಟಲ್ ಮೋಸವನ್ನು ಮಾಡಿದ್ದಾನೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸರಿಗೆ ಕೂಡ ದೂರನ್ನು ನೀಡುವ ಹಂತದಲ್ಲಿದೆ. ಈ ಬಗ್ಗೆ ಜನರು ಇದರ ಕಡೆ ಗಮನ ಹರಿಸಬೇಕಾಗಿದೆ.
ಟ್ರಾನ್ಸ್ಫರ್ ಮಾಡಿದ ನಂತರ ಮೊಬೈಲ್ ಗಳಿಗೆ ಮೆಸೇಜ್ ಬಂದರೆ ಹಣವನ್ನ ಕೊಡುವ ವ್ಯವಸ್ಥೆಯನ್ನು ಮಾಡಬೇಕು, ಇಲ್ಲವಾದರೆ ಗ್ರಾಹಕರು ಮೋಸ ಹೋಗುವ ಸಾಧ್ಯತೆ ಇದೆ ಎಂದು ನೋಂದವರು ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಡಿಜಿಟಲ್ ಮೋಸಗಳು ಹೆಚ್ಚಾಗುತ್ತಿದ್ದು ಇದರ ಕಡೆ ಜನ ಗಮನ ವಹಿಸಬೇಕಾಗಿದೆ.