- ತೀರ್ಥಹಳ್ಳಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿಗೆ ಲಸಿಕೆ
- ಎಲ್ಲಾ ಸರಕಾರಿ ನೌಕರರಿಗೆ ಸಿಗಲಿ ಲಸಿಕೆ
- ಅಂಚೆ ಸಿಬ್ಬಂದಿಗೆ ತಿಂಡಿ ಬಡಿಸಿದ ಕಿಮ್ಮನೆ!
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಅಂಚೆ ಕಚೇರಿ ಸಿಬ್ಬಂದಿಗೆ ಇತ್ತೀಚಿಗೆ ತೀರ್ಥಹಳ್ಳಿಯ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಕರೋನಾ ಲಸಿಕೆ ಹಾಕಲಾಯಿತು. ಜೊತೆಗೆ ವಿಕಲ ಚೇತನರಿಗೂ ಲಸಿಕೆ ಹಾಕಲಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲಾ ಹಳ್ಳಿಗಳಿಗೆ ಅಂಚೆ, ದಾಖಲಾತಿ ತಲುಪಿಸುವ ಕೆಲಸ ಮಾಡುತ್ತಿರುವ ಅಂಚೆ ನೌಕರರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅಧ್ಯತೆ ಮೇಲೆ ಲಸಿಕೆ ನೀಡಲಾಗಿದೆ. ಪೋಸ್ಟ್ ಮಾಸ್ಟರ್ ವಾಣಿ, ಸಹಾಯಕರಾದ ಅಶೋಕ್ ಕುಮಾರ್, ದಿನೇಶ್, ಶಿವಮೊಗ್ಗ ಅಂಚೆ ಹಿರಿಯ ಸಹಾಯಕ ಅಧಿಕಾರಿ ನಾಗರಾಜ್ ಇದ್ದರು.
ಅಂಚೆ ನೌಕರರಿಗೆ ಬಡಿಸಿದ ಕಿಮ್ಮನೆ!: ಬೆಳಗ್ಗೆಯೇ ಲಸಿಕೆ ಪಡೆಯಲು ಬಂದ ನೌಕರರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಉಪಹಾರ ಬಡಿಸಿದರು. “ಸರ್ವ ಜನೋ ಸುಖಿನೋ ಭವಂತು” ಸಂಘಟನೆ ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಉಚಿತ ಊಟ ಉಪಹಾರ ಮಾಡಿದ್ದು, ಈ ಸಿಬ್ಬಂದಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ನಾಯಕರಾದ ಮುಡುಬ ರಾಘವೇಂದ್ರ, ಅಮರನಾಥ ಶೆಟ್ಟಿ, ಪ್ರಶಾಂತ್ ಸಾಲಿಯಾನ್, ಶಬರೀಶ್, ಶ್ರೇಯಸ್, ಸಚಿನ, ಸನಾವುಲ್ಲ, ಹರೀಶ್ ಸೀಬಿನಕೆರೆ, ಆಸೀಫ್ ಸೀಬಿನಕೆರೆ, ಪ್ರಸನ್ನ, ಶ್ರೀಕಾಂತ್ ಬೆಟ್ಟಮಕ್ಕಿ ಇತರರು ಇದ್ದರು.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.