- ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಕರೋನಾ ಎಷ್ಟು?
- ತೀರ್ಥಹಳ್ಳಿಯಲ್ಲಿ 8ರಿಂದ 11ಕ್ಕೆ ಅವಕಾಶ?
NAMMUR EXPRESS
ಮಲೆನಾಡು: ಕರೋನಾ ನಡುವೆ ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡನ್ನು ಪ್ರವೇಶಿಸಿರುವ ನೈಋತ್ಯ ಮುಂಗಾರು ಜೂನ್ 5ರಂದು ಉತ್ತರ ಒಳನಾಡಿನ ಪ್ರದೇಶ ತಲುಪಲಿದೆ.ಆ ಮೂಲಕ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಡಿಕೆಯಂತೆ ಜೂನ್ 1ರಂದೇ ರಾಜ್ಯ ಪ್ರವೇಶಿಸಬೇಕಿದ್ದ, ಮುಂಗಾರು ಮಾರುತಗಳು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗವನ್ನು ಪ್ರವೇಶಿಸಿದೆ. ಶನಿವಾರ ಉತ್ತರ ಒಳನಾಡನ್ನು ಹಾದು ಹೋಗುವ ಮೂಲಕ ಈ ಮಾರುಗಳು ಇಡೀ ರಾಜ್ಯವನ್ನು ಆವರಿಸಲಿವೆ.
ಶಿವಮೊಗ್ಗ ಜಿಲ್ಲೆ ಕೇಸ್: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 697 ಮಂದಿಗೆ ಕರೋನಾ ಬಂದಿದೆ. 8 ಜನ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ 269, ಭದ್ರಾವತಿ 155, ತೀರ್ಥಹಳ್ಳಿ 30, ಶಿಕಾರಿಪುರ 90, ಸಾಗರ 45, ಹೊಸನಗರ 33, ಸೊರಬ 54, ಇತರೆ ಜಿಲ್ಲೆ 21 ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರಲ್ಲಿ 85, ಕಡೂರು 84, ತರೀಕೆರೆ 116, ಎನ್. ಆರ್. ಪುರ 12, ಮೂಡಿಗೆರೆ 50, ಕೊಪ್ಪ 9, ಶೃಂಗೇರಿ 22.
ಶಿವಮೊಗ್ಗದಲ್ಲಿ ಜೂ.14ರವರೆಗೆ ಲಾಕ್ ಮುಂದುವರಿದಿದೆ. ದಿನಸಿ ಚಿಲ್ಲರೆ ಅಂಗಡಿಗಳು ಬೆಳಿಗ್ಗೆ 6 ರಿಂದ 8 ರ ವರೆಗೆ ತೆರೆಯಲಿದ್ದು ಹೋಲ್ ಸೇಲ್ ದಿನಸಿ ಅಂಗಡಿಗಳಿಗೆ ಬುಧವಾರ ಮತ್ತು ಶನಿವಾರ ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ.
ತೀರ್ಥಹಳ್ಳಿಯಲ್ಲಿ ಬೆಳಿಗ್ಗೆ 8ರಿಂದ 11ರವರೆಗೆ ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿಯಾಗುವ ಸಾಧ್ಯತೆ ಇದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.