ಆವಿಷ್ಕಾರ್ ಸೌಹಾರ್ದ ಸಹಕಾರಿಯ ಮಹಾ ಸಭೆ
– ತೀರ್ಥಹಳ್ಳಿಯಲ್ಲಿ 2024 ವಾರ್ಷಿಕ ಸರ್ವಸದಸ್ಯರ ಸಭೆ
– ರಾಜ್ಯದ ವಿವಿಧ ಭಾಗದಿಂದ ಬಂದ ಷೇರುದಾರರು
NAMMUR EXPRESS NEWS
ತೀರ್ಥಹಳ್ಳಿ: ಆವಿಷ್ಕಾರ್ ಸೌಹಾರ್ದ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ತೀರ್ಥಹಳ್ಳಿ 8ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ ಅಧ್ಯಕ್ಷ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಸೊಪ್ಪುಗುಡ್ಡೆಯಲ್ಲಿರುವ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನೆರವೇರಿತು.
ಚಿಕ್ಕಮಗಳೂರು,ಹೊಸಪೇಟೆ,ತೀರ್ಥಹಳ್ಳಿ ಭಾಗದಿಂದ ಷೇರುದಾರರು ಆಗಮಿಸಿದ್ದರು. ಸೌಹಾರ್ದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು.
ಅಧ್ಯಕ್ಷರು ಅನಿಲ್ ಕುಮಾರ್,ಉಪಾಧ್ಯಕ್ಷರು ಎಸ್ ಆರ್ ವೆಂಕಟೇಶ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಸಿ,ರಾಜ್ಯ ನಿರ್ದೇಶಕರಾದ ಎಮ್ ಬಸವರಾಜ್, ಜ್ಯೋತಿ ಆರ್ ದಿಲೀಪ್, ನಯನ ಜೆ ಶೆಟ್ಟಿ, ಸಿ ರವಿ, ಎಮ್. ಸೋಮಶೇಕರಪ್ಪ, ಬಿ ನರಸಿಂಹಮೂರ್ತಿ, ಕೆ ಮಂಜುನಾಥ ಗುಪ್ತ, ಕೆ. ಟಿ ಶ್ರೀನಿವಾಸ್, ಡಿ ವೀರಭದ್ರಪ್ಪ, ಲಿಂಗರಾಜು ಜಿ, ರಮೇಶ್ ಡಿ ಪುಟ್ನಳ್ಳಿ, ವೃತ್ತಿಪರ ನಿರ್ದೇಶಕರಾದ ವಿಠಲ್ ಕೆ.ಜಿ ಸೇರಿದಂತೆ 14 ಜನ ನಿರ್ದೇಶಕರು 2 ವೃತ್ತಿ ಪರ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.