ಅರಣ್ಯದ ಮರಗಳನ್ನೇ ಕದ್ದ ಅರಣ್ಯ ಅಧಿಕಾರಿ!?
– ಅಕ್ರಮ ಕಡಿತಲೆ ಮಾಡಿ ಸ್ವಂತಕ್ಕೆ ಬಳಸಿಕೊಂಡ ವನಪಾಲಕ!?
– ಆಗುಂಬೆ ವಲಯದ ವನಪಾಲಕರೊಬ್ಬರ ಗೋಲ್ಮಾಲ್!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ಶೀರೂರು ಗ್ರಾಮದ ಮಜರೆ ಪಡುವಳ್ಳಿ ವ್ಯಾಪ್ತಿಯಲ್ಲಿ ಸ.ನಂ. 118 ಅರಣ್ಯ ಇಲಾಖೆ ಭೂಮಿಯಲ್ಲಿ ಬೆಳೆದು ನಿಂತಿದ್ದ ಸುಮಾರು 200-250 ವರ್ಷಗಳಷ್ಟು ಹಳೆಯದಾದ ಭಾರೀ ಗಾತ್ರದ ಹಲಸಿನ ಮರವನ್ನು ಆಗುಂಬೆ ವಲಯದ ವನಪಾಲಕರೊಬ್ಬರು ಮರ ಕೊಯ್ಯುವ ಕೆಲಸ ಮಾಡುವ ಕಮ್ಮರಡಿ ಕಡೆಯ ಮರಕೆಲಸಗಾರರನ್ನು ಸೇರಿಸಿಕೊಂಡು ನಾಲ್ಕು ದಿನಗಳಿಂದ ಸತತವಾಗಿ ಈ ಹಲಸಿನ ಮರವನ್ನು ಕಡಿತಲೆ ಮಾಡಿ ಕೊಯ್ತ ಮಾಡಿಸಿದ್ದಾರೆ.
ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ತನ್ನ ಕಡೆಯ ಜನಗಳನ್ನು ಕರೆದುಕೊಂಡು ರಾತ್ರಿ ವೇಳೆ ಮನೆಗಳಿಗೆ ಬಂದು ಈ ವಿಚಾರವನ್ನು ಹೊರಗಡೆ ಸುದ್ದಿ ಮಾಡಿದರೆ, “ನಿಮ್ಮನ್ನೆಲ್ಲಾ ಏನಾದರೂ ಮಾಡಿ ಸಿಲುಕಿಸಿ ಅರಣ್ಯ ಕೇಸು ಹಾಕಿಸಿ ಒಳಗೆ ಹಾಕಿಸುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾರೆ.
ಕೊಯ್ತ ಮಾಡಿದ ಸ್ಥಳದಲ್ಲಿ ಬಿದ್ದಿರುವ ಮರದ ಪುಡಿಗಳು ಈ ಅಕ್ರಮ ಕಡಿತಲೆಗೆ ಸಾಕ್ಷಿಯಾಗಿರುತ್ತವೆ. ಸುಮಾರು 30 ರಿಂದ 40 ಲಕ್ಷ ಬೆಲೆಬಾಳುವ ಮರವನ್ನು ಅಕ್ರಮ ಕಡಿತಲೆ ಮಾಡಿ ಕೊಯ್ತ ಮಾಡಿ ನಾಟಾ ತುಂಡುಗಳನ್ನು ಮುಚ್ಚಿ ಹಾಕಿದ್ದಾರೆ.
ವನಪಾಲಕರು ಶಿವಮೊಗ್ಗದಲ್ಲಿ ಮನೆ ಕಟ್ಟಿಸುತ್ತಿದ್ದು ಈ ನಾಟಾವನ್ನು ಇವರ ಮನೆಗೆ ಬಳಸುವ ಉದ್ದೇಶ ಹೊಂದಿದ್ದಾರೆ. ಇದಕ್ಕೂ ಮುನ್ನು ನಮ್ಮ ಪಡುವಳ್ಳಿ ಒ.ಎಫ್.ಸಿ. ವ್ಯಾಪ್ತಿಯಲ್ಲಿ ಬೆಲೆಬಾಳುವ ದಷ್ಟಪುಷ್ಟವಾಗಿ ಬೆಳೆದಿದ್ದ ಸುಮಾರು 8-10 ಮರಗಳನ್ನು ಇದೇ ರೀತಿ ಅಕ್ರಮ ಕಡಿತಲೆ ಮಾಡಿ ಸಾಗಿಸಿದ್ದಾರೆ. ಕೂಡಲೇ ಸರ್ಕಾರ, ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ವೀಕ್ಷಿಸಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹಣ ಕಳವು, ಆರೋಪಿ ಬಂಧನ!
ಶಿವಮೊಗ್ಗ: ಸಾಗರ ನಗರದ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಸ್ ನಿಲ್ದಾಣದಲ್ಲಿ ಹಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಪರಶುರಾಮ ಬಂಧಿತ ಆರೋಪಿ. ಇತ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತ ನಿಂತಿದ್ದ ಪರಮೇಶ್ವರ್ ಎಂಬ ವ್ಯಕ್ತಿಯ ಬ್ಯಾಗಿನಲ್ಲಿದ್ದ 1 ಲಕ್ಷ ರೂ. ನಗದನ್ನು ಎಗರಿಸಿದ್ದ. ಈ ಬಗ್ಗೆ ಪರಮೇಶ್ವರ್ ಸಾಗರ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇತನಿಂದ 1 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.