- ಪಾನ್-ಆಧಾರ್ ಲಿಂಕ್: ಎಸ್ಬಿಐ ಹೊಸ ನಿಯಮ
- ಟ್ಯಾಕ್ಸ್ ಪಾವತಿಗೆ ಹೊಸ ವೆಬ್: ಸಂಪೂರ್ಣ ಮಾಹಿತಿ!
NAMMUR EXPRESS BUSINESS
ಬೆಂಗಳೂರು: ಕೆನರಾ ಬ್ಯಾಂಕ್-ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವ ಸೂಚನೆ ನೀಡಿದ್ದು, ಜುಲೈ 1ರಿಂದ ಸಂಸ್ಥೆಯ ಐಎಫ್ಎಸ್ಸಿ ಕೋಡ್ ಬದಲಾಗಲಿದೆ. ಹೊಸ ಕೋಡ್ ಬಗ್ಗೆ ಅಧಿಕೃತ ವೆಬ್ ತಾಣದಲ್ಲಿ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದೆ.
ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿರುವ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಮುಖ್ಯವಾಗಿ ಇಂಡಿಯ ಫೈನಾನ್ಶಿಯಲ್ ಸಿಸ್ಟಮ್ ಕೋಡ್(IFSC), swift ಕೋಡ್, ಚೆಕ್ ಬುಕ್ ಬಗ್ಗೆ ಗಮನ ಹರಿಸಿ, ಬದಲಾವಣೆ ಬಗ್ಗೆ ತಿಳಿದುಕೊಂಡು ವ್ಯವಹರಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ, ಹಳೆ ಚೆಕ್ ಬುಕ್, ಕೋಡ್ ಜುಲೈ 1ರಿಂದ ಕಾರ್ಯನಿರ್ವಹಿಸುವುದಿಲ್ಲ.
ಎಸ್ಬಿಐ ಕೂಡ ಹೊಸ ನಿಯಮ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಈ ತಿಂಗಳ ಅಂತ್ಯದ ವೇಳೆಗೆ ಅಂದರೆ ಜೂನ್ 30ರೊಳಗೆ ಆಧರ್ ಕಾರ್ಡ್ಗಳೊಂದಿಗೆ ತಮ್ಮ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಲಿಂಕ್ ನವೀಕರಿಸಲು ತಿಳಿಸಿದೆ.
ಪ್ಯಾನ್ ನಿಷ್ಕ್ರಿಯ ಅಥವಾ ನಿಷ್ಕ್ರಿಯಗೊಳಿಸಲಾಗುವುದು ಮತ್ತು ನಿರ್ದಿಷ್ಟ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂದು ಬ್ಯಾಂಕ್ ಹೇಳಿದೆ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕ 2021ರ ಮಾರ್ಚ್ 31 ಆಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆದಾಯ ತೆರಿಗೆ ಇಲಾಖೆ 2021ರ ಜೂನ್ 30ರವರೆಗೆ ವಿಸ್ತರಿಸಿದೆ.
ಆದಾಯ ತೆರಿಗೆಗೆ ಹೊಸ ವೆಬ್!: ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ 2.0, ಪೋರ್ಟಲ್ ಸೋಮವಾರದಿಂದ ಆರಂಭವಾಗಿದೆ. ಇದು ಆನ್ಲೈನ್ ರಿಟರ್ನ್ಸ್ ಮತ್ತು ತೆರಿಗೆ ಪಾವತಿಯನ್ನು ಸುಲಭಗೊಳಿಸುತ್ತದೆ. ಹಿಂದೆ ಇದ್ದ ‘http://incometaxindiaefiling.gov.in’ ಬದಲು www.incometax.gov.in ಸೈಟ್ ಆರಂಭವಾಗಿದ್ದು, ವಿವಿಧ ಭಾಷೆಗಳಲ್ಲಿ ಲಭ್ಯವಿದೆ.
ತೆರಿಗೆದಾರರು ಡಿಎಸ್ ಸಿ (ಡಿಜಿಟಲ್ ಸಹಿ ಪ್ರಮಾಣ ಪತ್ರ) ಹೊಸದಾದ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಯನ್ನು ಪ್ರಾಥಮಿಕ ಸಂಪರ್ಕದ ಅಡಿಯಲ್ಲಿ ಮರು ನೋಂದಣಿ ಮಾಡಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆ ಹೇಳಿದೆ. ವೈಯಕ್ತಿಕ, ಕಂಪನಿ, ಕಂಪನಿಯೇತರ ಹೀಗೆ ವಿಭಿನ್ನ ರೀತಿಯ ತೆರಿಗೆ ವೃತ್ತಿದಾರರಿಗೆ ಪ್ರತ್ಯೇಕವಾದ ಟ್ಯಾಬ್ ಗಳನ್ನು ಈ ಫೋರ್ಟಲ್ ಹೊಂದಿದೆ. ಆದಾಯ ತೆರಿಗೆ ರಿಟರ್ನ್ಸ್ ನೋಂದಣಿ, ಮರುಪಾವತಿ ಸ್ಥಿತಿ ಮತ್ತು ತೆರಿಗೆ ಸ್ಲ್ಯಾಬ್ಗಳ ಸೂಚನೆಗಳನ್ನು ಪರಿಶೀಲಿಸಲು ತೆರಿಗೆದಾರರಿಗೆ ಇದು ಡ್ರಾಪ್-ಡೌನ್ ಮೆನು ಹೊಂದಿದೆ.
ಐ-ಟಿ ಇ-ಫೈಲಿಂಗ್ ಪೋರ್ಟಲ್ನ 8.46 ಕೋಟಿಗೂ ಹೆಚ್ಚು ವೈಯಕ್ತಿಕ ನೋಂದಾಯಿತ ಬಳಕೆದಾರರಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಸುಮಾರು 3.13 ಕೋಟಿ ಐಟಿ ರಿಟರ್ನ್ಸ್ ಗಳನ್ನು ಇ- ಪರಿಶೀಲನೆ ಮಾಡಲಾಗಿದೆ. ಹೊಸ ಪೋರ್ಟಲ್ನಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಅರ್ಥಮಾಡಿಕೊಳ್ಳಲು ವಿವರವಾದ ಬಳಕೆದಾರರ ಕೈಪಿಡಿಗಳು, FAQ ಗಳು ಮತ್ತು ವೀಡಿಯೊಗಳನ್ನು ಸಹ ಹೊಂದಿದೆ. ಅಲ್ಲದೇ, ಮಾರ್ಗದರ್ಶಿ ಸಹಾಯಕ್ಕಾಗಿ ಚಾಟ್ಬಾಟ್ ಮತ್ತು ಸಹಾಯವಾಣಿ ಒದಗಿಸಲಾಗಿದೆ.
ನೋಂದಾಯಿತ ಬಳಕೆದಾರರು ಒಮ್ಮೆ ಪೋರ್ಟಲ್ಗೆ ಲಾಗ್ ಇನ್ ಮಾಡಿದ ನಂತರ, ಡ್ಯಾಶ್ಬೋರ್ಡ್ ಇ-ಪ್ರೊಸೀಡಿಂಗ್ಗಳ ವಿವರಗಳು, ಏನಾದರೂ ಬೇಡಿಕೆಗಳಿದ್ದರೆ ಅದಕ್ಕೆ ಪ್ರತಿಕ್ರಿಯೆಗಳನ್ನು ತೋರಿಸುತ್ತದೆ. ‘ಪೆಂಡಿಂಗ್ ಆಕ್ಸನ್’ ಟ್ಯಾಬ್ ಅಡಿಯಲ್ಲಿ ವಾರ್ಷಿಕ ಮಾಹಿತಿ ಹೇಳುತ್ತದೆ. ಕುಂದುಕೊರತೆ ಮೆನು ತೆರಿಗೆದಾರರಿಗೆ ಯಾವುದೇ ಕುಂದುಕೊರತೆಗಳನ್ನು ಸಲ್ಲಿಸಲು ಮತ್ತು ಹಿಂದೆ ಸಲ್ಲಿಸಿದವುಗಳನ್ನು ವೀಕ್ಷಿಸಲು ಅನುಮತಿಸುತ್ತದೆ.
‘ಮೈ ಪ್ರೊಫೈಲ್ ಮೆನು’ವಿನಲ್ಲಿ ತೆರಿಗೆದಾರರು, ತಮ್ಮ ವೈಯಕ್ತಿಕ ಮಾಹಿತಿಯನ್ನು ನೋಡಬಹುದು, ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೆ, ತೆರಿಗೆ ಪಾವತಿದಾರರು ತೆರಿಗೆ-ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯ ಮಾಡಲು ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಮರುಪಾವತಿ ಕುರಿತ ದೂರುಗಳನ್ನು ಸಲ್ಲಿಸಲು ಇ-ಫಿಲ್ಲಿಂಗ್ ಪೋರ್ಟಲ್ ಬಳಸಿಕೊಳ್ಳಬಹುದಾಗಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.