- ಕರೋನಾ ಸೇವೆಗೆ ಸತೀಶ್ ಶೆಟ್ಟಿ, ಶ್ರೀಪತಿ ಹೊಸ ಪ್ಲಾನ್
- ನೂರಾರು ಜನರಿಗೆ ಆನ್ಲೈನ್ ಸೇವೆ: ಜನರ ಮೆಚ್ಚುಗೆ
NAMMUR EXPRESS
ತೀರ್ಥಹಳ್ಳಿ: ಸರಕಾರ ಕರೋನಾ ತುರ್ತು ವೇಳೆ ಘೋಷಣೆ ಮಾಡಿರುವ ಹಲವು ಅನುದಾನ, ಸಹಾಯ ಧನ ಪಡೆಯಲು ಗ್ರಾಮೀಣ ಭಾಗದ ಜನ ಮತ್ತು ಅವಿದ್ಯಾವಂತರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡ ತೀರ್ಥಹಳ್ಳಿಯ ಯುವ ಉದ್ಯಮಿಗಳಾದ ಸತೀಶ್ ಶೆಟ್ಟಿ(sms), ಶ್ರೀಪತಿ ಮತ್ತು ತಂಡ ಎಲ್ಲಾ ಜನತೆಗೆ ಉಚಿತ ಆನ್ಲೈನ್ ಸೇವೆ ನೀಡುತ್ತಿದೆ.
ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣ ಸಮೀಪದ ಕಾರ್ ನಿಲ್ದಾಣದಲ್ಲಿ ತೆರೆಯಲಾಗಿರುವ ಆನ್ಲೈನ್ ಸೆಂಟರ್ ಅಲ್ಲಿ ಸರಕಾರದ ಸೇವಾ ಸಿಂಧು ಪೋರ್ಟಲ್ ಅಡಿ ಬರುವ ಎಲ್ಲಾ ಸೇವೆಗಳನ್ನು ಉಚಿತವಾಗಿ ನೋಂದಣಿ ಮಾಡಿಕೊಡಲಾಗುತ್ತಿದೆ.
ಆಟೋ, ಟ್ಯಾಕ್ಸಿ ಚಾಲಕರ ಸಹಾಯ ಧನ, ತರಕಾರಿ ಮಾರಾಟಗಾರರು, ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿ ಸರಕಾರ ಘೋಷಣೆ ಮಾಡಿರುವ ಎಲ್ಲಾ ಜನತೆಗೆ ಆನ್ಲೈನ್ ಮೂಲಕ ಅರ್ಜಿ ಹಾಕುವ ಕೆಲಸವನ್ನು ಈ ಯುವಕರು ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಜ್ಞಾನವನ್ನು ಕರೋನಾ ಸೇವೆಗೆ ಬಳಸಿದ್ದಾರೆ.
ಪ್ರತಿ ದಿನ ಹತ್ತಾರು ಮಂದಿಯ ಅರ್ಜಿ ತುಂಬಿಕೊಡುತ್ತಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೆ ಸೇವೆ ನೀಡುತ್ತೇವೆ. ನಮಗೆ ಈ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಮುಂದೆಯೂ ಜನರ ಕಷ್ಟಕ್ಕೆ ಜೊತೆಯಾಗುತ್ತೇವೆ ಎನ್ನುತ್ತಾರೆ ಸತೀಶ್ ಮತ್ತು ಶ್ರೀಪತಿ.
ಪ್ರಮುಖ ಯುವ ನಾಯಕರಾದ ಜೈಕರ್ ಶೆಟ್ಟಿ, ನಾಗಣ್ಣ, ಅಸಿಫ್ ಇವರಿಗೆ ಸಾತ್ ನೀಡಿದ್ದಾರೆ. ಆದರ್ಶ ಹುಂಚದ ಕಟ್ಟೆ ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.