- ಶಿವಮೊಗ್ಗದಿಂದ ಕಳ್ಳತನಕ್ಕೆ ತೀರ್ಥಹಳ್ಳಿಗೆ ಬಂದರು
- ವೃದ್ದೆ ಸ್ಥಿತಿ ಗಂಭೀರ: ಓರ್ವನನ್ನು ಹಿಡಿದ ಸ್ಥಳೀಯರು
- ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಬಳಿ ಘಟನೆ
- ಮದ್ಯ ಮಾರಾಟ ಮಾಡುತ್ತಿದ್ದಳೇ ಅಜ್ಜಿ..?
NAMMUR EXPRESS
ತೀರ್ಥಹಳ್ಳಿ: ಅಂಚೆ ಕಚೇರಿಯಿಂದ ಬರುತ್ತಿದ್ದ ವೇಳೆ ಮನೆಯ ಬಳಿ ಬೈಕಲ್ಲಿ ಬಂದ ಕಳ್ಳರಿಬ್ಬರು ಆಕೆಯ ಕತ್ತು ಹಿಸುಕಿ ಹಣ ಕಸಿದು ಪರಾರಿಯಾಗುವ ಯತ್ನ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಬಳಿ ಗಣಪತಿಕಟ್ಟೆ ಎಂಬಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಅಜ್ಜಿ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಕಟ್ಟೆಹಕ್ಲು ಗಣಪತಿ ದೇವಸ್ಥಾನದ ಎದುರು ವಾಸವಾಗಿರುವ ವೃದ್ಧೆ ಭವಾನಿಯಮ್ಮ(85) ಅಂಚೆ ಕಛೇರಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ ಇಬ್ಬರು ಕಳ್ಳರು ಬೈಕ್ನಲ್ಲಿ ಇಬ್ಬರು ಅಡ್ಡಹಾಕಿ ಕುತ್ತಿಗೆ ಹಿಸುಕಿದ್ದಾರೆ. ಈ ವೇಳೆ ಸ್ಥಳೀಯರು ನೋಡಿ ಕೂಗಿಕೊಂಡಾಗ ಓರ್ವ ಬೈಕಲ್ಲಿ ಪರಾರಿಯಾಗಿದ್ದಾನೆ. ಇನ್ನೋರ್ವ ಓಡಿ ಹೋಗಿದ್ದು, ಹೆರಂಬಾಪುರ ಬಳಿ ಸ್ಥಳೀಯರು ಸೇರಿ ಚೇಸ್ ಮಾಡಿ ಹಿಡಿದಿದ್ದಾರೆ. ಸಿಕ್ಕಿಬಿದ್ದ ಕಳ್ಳ ನಿತಿನ್ (36) ಶಿವಮೊಗ್ಗದ ಗೋಪಾಳದವನು. ಇನ್ನೊರ್ವ ಎಲ್ಲಿಯವನು ಎಂದು ತನಿಖೆ ನಡೆಯುತ್ತಿದೆ. ಇವರು ಮಂಗಳವಾರವೇ ತೀರ್ಥಹಳ್ಳಿಗೆ ಬಂದಿದ್ದರು. ಮೃಗವಧೆ ಬಳಿ ರಾತ್ರಿ ಮಲಗಿದ್ದರು ಎನ್ನಲಾಗಿದೆ.
ಘಟನೆಯಿಂದ ಗಂಭೀರ ಗಾಯಗೊಂಡ ಭವಾನಿ ಅವರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಈ ಕಳ್ಳರು ಕಟ್ಟಹಕ್ಕಲಿಗೆ ಮದ್ಯ ಸೇವಿಸಲು ಬಂದಿದ್ದರು ಎನ್ನಲಾಗಿದೆ. ಇನ್ನೊಂದು ಮಾಹಿತಿ ಪ್ರಕಾರ ವೃದ್ದೆ ಮದ್ಯ ಮಾರಾಟ ಮಾಡುತ್ತಿದ್ದಳು ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಎಚ್ಚರ ಎಚ್ಚರ!: ಒಂಟಿ ಮನೆಗಳು, ಒಂಟಿ ಜನರ ಮೇಲೆ ಕಳ್ಳರು ಕಣ್ಣಿಡಲು ಶುರು ಮಾಡಿದ್ದಾರೆ. ಎಲ್ಲರೂ ಎಚ್ಚರ ವಹಿಸಬೇಕಿದೆ. ಪೊಲೀಸ್ ಇಲಾಖೆ ಕೂಡ ಗಮನಿಸಬೇಕಿದೆ. ಕರೋನಾ ಹಿನ್ನಲೆ ಕೆಲಸ ಇಲ್ಲ. ನಿರುದ್ಯೋಗ ಹೆಚ್ಚಿದೆ. ಇನ್ನು ಕಳ್ಳತನ, ದರೋಡೆ ಹೆಚ್ಚುವ ಸಾಧ್ಯತೆ ಇದೆ. ತಕ್ಷಣ ಸರಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡಬೇಕಿದೆ.
ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.