- ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ದುರಂತದ ಸಾವು
- ಮೈಮೇಲೆ ಬಿದ್ದ ಇಲಿ: ಹೆದರಿ ಹೃದಯಾಘಾತ
- ಸಮಾಜ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಶಕುಂತಲಾ
NAMMUR EXPRESS
ತೀರ್ಥಹಳ್ಳಿ: ಮನೆಯ ಮಹಡಿಯ ಮೇಲಿಂದ ಇಲಿಯೊಂದು ಮೈಮೇಲೆ ಬಿದ್ದು ಕಚ್ಚಿದ ಕಾರಣ ಗಾಬರಿಗೊಂಡ ಪರಿಣಾಮ ಮಹಿಳೆಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಬುಧವಾರ ನಡೆದಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುರುವಳ್ಳಿ ಬೊಮ್ಮಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯಲ್ಲಿ ವಾಸವಾಗಿದ್ದ ಶಕುಂತಲಾ( 52) ಎಂಬಾಕೆ ಬೆಳಿಗ್ಗೆ ಮನೆಯಲ್ಲಿ ಇದ್ದಾಗ ಇಲಿಯೊಂದು ಮಹಡಿಯಿಂದ ಮೈ ಮೇಲೆ ಬಿದ್ದು ಕಚ್ಚಿದೆ. ಇದರಿಂದ ಗಾಬರಿಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತೀರ್ಥಹಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸದಸ್ಯೆಯಾಗಿದ್ದು, ತಮ್ಮ ಮೃದು ಸ್ವಭಾವದಿಂದ ಜನಮನ್ನಣೆ ಗಳಿಸಿದ್ದರು. ಸಾಮಾಜಿಕ ಕಳಕಳಿಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರು ಕಾರು ಚಾಲಕರಾಗಿರುವ ಚಂದ್ರಕಾಂತ್ರವರ ಸಹೋದರಿಯಾಗಿದ್ದು ಓರ್ವ ಪುತ್ರ ಹಾಗೂ ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕರವೇ ನಾಯಕರ ಕಂಬನಿ: ಕರವೇ ಜಿಲ್ಲಾಧ್ಯಕ್ಷರಾದ ಪಟೇಲ್ ವೆಂಕಟೇಶ್ ಹೆಗ್ಡೆ, ತಾಲೂಕು ಅಧ್ಯಕ್ಷ ಸುರೇಂದ್ರ ಯಡೂರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಎಲ್ಲಾ ಕರವೇ ಮುಖಂಡರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಕಂಬನಿ ಮಿಡಿದಿದ್ದಾರೆ.