- ಮತ್ತೆ ಮರೆಯುತ್ತಾರಾ ಜನ ಕರೋನಾ ನಿಯಮ
- ಎಲ್ಲಿ ಎಷ್ಟೆಷ್ಟು ಕೇಸ್.. ಏನಾಗುತ್ತೆ ಬಂದ್..?
- ಕಳ್ಳರು ಕತ್ತು ಹಿಸುಕಿದ್ದ ಅಜ್ಜಿ ನಿಧನ
NAMMUR EXPRESS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ 494 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದ್ದು 9 ಮಂದಿ ನಿಧನರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5905 ಆಗಿದೆ. ಶಿವಮೊಗ್ಗದಲ್ಲಿ ಶೇ.13ರಷ್ಟು ಪಾಸಿಟಿವಿಟಿ ದರ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 888ಕ್ಕೇರಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ 27 ಮಂದಿಗೆ ಸೋಂಕು ಧೃಡಪಟ್ಟಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ತಿಳಿಸಿದೆ.
ಯಾವ ತಾಲೂಕು ಎಷ್ಟು?!: ಶಿವಮೊಗ್ಗ 17, ಭದ್ರಾವತಿ 112, ಶಿಕಾರಿಪುರ 52, ತೀರ್ಥಹಳ್ಳಿ 37, ಸೊರಬ 30, ಹೊಸನಗರ 32, ಸಾಗರ 47, ಇತರೆ ಜಿಲ್ಲೆ 14 ಕೇಸ್ ಇದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 339 ಮಂದಿಗೆ ಕರೋನಾ ಸೋಂಕು ತಗುಲಿದೆ.
ಚಿಕ್ಕಮಗಳೂರು 68, ಕಡೂರು 94, ತರೀಕೆರೆ 101, ಎನ್. ಆರ್. ಪುರ 12, ಮೂಡಿಗೆರೆ 32, ಕೊಪ್ಪ 15, ಶೃಂಗೇರಿ 17 ಪ್ರಕರಣಗಳಿವೆ. 669 ಮಂದಿ ಗುಣಮುಖರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ 20% ಇದ್ದು ಸಾವಿನ ಸಂಖ್ಯೆ ಕಡಿಮೆಯಾಗಿದೆ.
ಜಾಗೃತಿ ಮರೆತ ಜನ!: ಮಲೆನಾಡಲ್ಲಿ ಜನ ಕರೋನಾ ಕೇಕೆ ಹಾಕಿದರೂ ಕರೋನಾ ಜಾಗೃತಿ ಮರೆಯುತ್ತಿದ್ದಾರೆ. ದಯವಿಟ್ಟು ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಬೇಡಿ. ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿ.
ಕಳ್ಳರು ಕುತ್ತಿಗೆ ಹಿಸುಕಿದ್ದ ಅಜ್ಜಿ ನಿಧನ!: ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಸಾಲ್ಗಡಿ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ವಾಸವಾಗಿದ್ದ85 ವರ್ಷದ ವೃದ್ಧೆ ಭವಾನಿಯಮ್ಮ ಶಿವಮೊಗ್ಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳ್ಳರು ಹಣಕ್ಕಾಗಿ ಉಸಿರುಗಟ್ಟಿಸಿದ್ದರಿಂದ ಅಜ್ಜಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗುರುವಾರ ಬೆಳಗ್ಗಿನ ಜಾವ 5 ಗಂಟೆಗೆ ನಿಧನರಾಗಿದ್ದಾರೆ. ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಿದ್ದು ಮತ್ತೋರ್ವ ಆರೋಪಿ ನಾಪತ್ತೆಯಾಗಿದ್ದಾನೆ. ಈ ಹಿಂದೆ ಕಳ್ಳರು ಉಡುಪಿಯಲ್ಲಿ ದೇವಸ್ಥಾನದ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಜಾಮೀನಿನ ಮೇಲೆ ಹೊರಬಂದಿದ್ದರು ಎನ್ನಲಾಗಿದೆ.