- ಸಾವಿರಾರು ಮಂದಿಗೆ ಪ್ರತಿ ದಿನ ಊಟ ಉಪಹಾರ
- ಎಲ್ಲಾ ಸಾಮಾಜಿಕ ಸೇವೆಗಳಲ್ಲಿ ವೇದಿಕೆ ಕೆಲಸ
- ಹಿರಿ, ಕಿರಿ ನಾಯಕರ, ಕಾರ್ಯಕರ್ತರ ಸಾರಥ್ಯ
NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಸೇವೆಯಲ್ಲಿ ಕಳೆದ ವರ್ಷದಿಂದ ಮುಂಚೂಣಿಯಲ್ಲಿರುವ ಸಂಸ್ಥೆ ಸಮಾನ ಮನಸ್ಕರ ವೇದಿಕೆ.
2020ರ ಲಾಕ್ ಡೌನ್ ವೇಳೆ ಶುರುವಾದ ಈ ವೇದಿಕೆ 25000ಕ್ಕೂ ಹೆಚ್ಚು ಮಂದಿಗೆ ಊಟ, ಕಿಟ್, ವಾಹನ, ಇತರೆ ಆರೋಗ್ಯ ಸೇವೆ ನೀಡಿತ್ತು. ಈ ವರ್ಷದ ಲಾಕ್ ಡೌನ್ ವೇಳೆಯೂ ಕಳೆದ 40 ದಿನದಿಂದ ಈ ವೇದಿಕೆ ಸೇವೆ ನೀಡುತ್ತಿದೆ. ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಎದುರು ಕ್ಯಾಂಟೀನ್ ಅಲ್ಲಿ ಉಚಿತ ಊಟ ನೀಡಲಾಗುತ್ತಿದೆ. ತೀರ್ಥಹಳ್ಳಿಯ ಜನಸ್ನೇಹಿ ನಾಯಕ ರಾಘವೇಂದ್ರ ಸೊಪ್ಪುಗುಡ್ಡೆ ಮತ್ತು ಸಂದೇಶ ಜವಳಿ, ರಾಘವೇಂದ್ರ ಬಾಳೆಬೈಲು ಸೇರಿದಂತೆ ಹಲವರು ನೇತೃತ್ವದಲ್ಲಿ ಈ ಸೇವೆ ನಡೆಯುತ್ತಿದೆ. ರೋಟರಿ, ಲಯನ್ಸ್, ಜೆಸಿ ಸೇರಿದಂತೆ ಹಲವಾರು ಸಂಘಟನೆ, ಸಂಸ್ಥೆಗಳು, ಉದ್ಯಮಿಗಳು, ದಾನಿಗಳು ಸಹಕಾರ ಮಾಡಿದ್ದಾರೆ. ಜಾತಿ, ಧರ್ಮ, ಪಕ್ಷಬೇಧ ಮರೆತು ಎಲ್ಲಾ ಸೇವಕರು ಸೇವೆ ಮಾಡುತ್ತಿದ್ದಾರೆ. ಸಮಾನ ಮನಸ್ಕ ವೇದಿಕೆ ಮತ್ತು ಅನ್ನ ದಾಸೋಹದ ಬಗ್ಗೆ ತೀರ್ಥಹಳ್ಳಿಯ ಪ್ರಮುಖ ನಾಯಕರು, ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಈ ವೀಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಎಲ್ಲಾ ಸೇವಕರು ಜತೆಯಲ್ಲಿದ್ದಾರೆ.