ತೀರ್ಥಹಳ್ಳಿ ಪಟ್ಟಣದಲ್ಲಿ ಗಾಂಧಿಗೆ ನಮನ!
– ಪಟ್ಟಣ ಪಂಚಾಯಿತಿ ಸಾರ್ವಜನಿಕ ಗಾಂಧಿ ಜಯಂತಿ ಆಚರಣೆ
– ವಾಕಿಂಗ್ ಬಡ್ಡಿಸ್ ವತಿಯಿಂದ ಪಟ್ಟಣ ಸ್ವಚ್ಛ
– ಸಹ್ಯಾದ್ರಿ ಪಿಯು ಕಾಲೇಜು ಮಕ್ಕಳ ಶ್ರಮದಾನ
– ಸ್ವಾತಂತ್ರ್ಯ ಹೋರಾಟದ ವೇಳೆ ತೀರ್ಥಹಳ್ಳಿಗೆ ಬಂದಿದ್ದರು ಗಾಂಧೀಜಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಸೇರಿ ತಾಲೂಕಿನಲ್ಲಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಪಟ್ಟಣ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿಯನ್ನು ಡಾ. ಬಿ. ಆರ್, ಅಂಬೇಡ್ಕರ್ ವೃತ್ತದಲ್ಲಿ ಪ್ರತಿಜ್ಞೆ ಸ್ವೀಕರದ ಮುಖೇನ ಆಚರಿಸಲಾಯಿತು.
ದೇಶ ನೈರ್ಮಲ್ಯ ಕಾರಣಕ್ಕೆ ಸ್ವಚ್ಛ ಆಂದೋಲನದಲ್ಲಿ ಎಲ್ಲರೂ ಸಹಭಾಗಿತ್ವ ವಹಿಸಿಕೊಳ್ಳಬೇಕು. ತೀರ್ಥಹಳ್ಳಿಯನ್ನು ಸುಂದರಪಟ್ಟಣ ಮಾಡುವ ಉದ್ದೇಶದಿಂದ ಸಾಕಷ್ಟು ಸಂಘ ಸಂಸ್ಥೆಗಳ ಆಹ್ವಾನ ಮಾಡಲಾಗಿದೆ ಎಂದು ನಿವೃತ್ತ ಪ್ರಾಂಶುಪಾಲರು ಡಿ.ಎಸ್.ಸೋಮಶೇಖರ್ ಗಾಂಧೀಜಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ಹಾರ್ದಿಕ ಶುಭಾಶಯವನ್ನು ನೀಡುವ ಮೂಲಕ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ತತ್ವ ದೇಶ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮ ಪಟ್ಟಣ ಪಂಚಾಯತ್ ಅಧ್ಯಕ್ಷರು ರಹಮತುಲ್ಲಾ ಅಸಾದಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷರು ಬಿ ಗಣಪತಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ರತ್ನಾಕರ್ ಶೆಟ್ಟಿ, ಸಂದೇಶ್ ಜವುಳಿ ವಿಹಂಗಮನಸ್ಯ ಮಾಲೀಕರು ಹಾಗೂ ಸಮಾಜಸೇವಕರು ಕೃಷಿಕರು ದಯಾನಂದ, ತೀರ್ಥಹಳ್ಳಿ ಚರ್ಚಿನ ಫಾದರ್ ವೀರೇಶ್ ಗಿಲ್ಬರ್ಟ್, ಗೀತಾ ರಮೇಶ್, ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ರಾಜ್ ಮಂಜುಳ ನಾಗೇಂದ್ರ ಹಾಗೂ ಪಟ್ಟಣ ಪಂಚಾಯತ್ ಎಲ್ಲಾ ಸದಸ್ಯರು,ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
* ತೀರ್ಥಹಳ್ಳಿಯಲ್ಲಿ ಗಾಂಧೀಜಿ!!
1927 ಆಗಸ್ಟ್ 17ರಂದು ಮಹಾತ್ಮ ಗಾಂಧೀಜಿಯವರು ತೀರ್ಥಹಳ್ಳಿಯನ್ನು ಭೇಟಿ ಮಾಡಿದ್ದರು. ಪೂರ್ವಭಾವಿಯಾಗಿ ದಾವಣಗೆರೆಗೆ ಭೇಟಿ ಮಾಡಿ ತೀರ್ಥಹಳ್ಳಿಗೆ ಬರುವ ರೀತಿ ಗಾಂಧೀಜಿಯವರಲ್ಲಿ ಪ್ರೇರಣೆಯನ್ನು ನೀಡುವ ರೀತಿ ವಿನಂತಿಸಿಕೊಂಡಿದ್ದು, ಇದಕ್ಕೆ ಗಾಂಧೀಜಿಯವರು ಸ್ಪಂದಿಸಿದ್ದರು. ಗಾಂಧೀಜಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಗಾಂಧೀಜಿಯವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಆರೋಗ್ಯ ಸೂಕ್ಷ್ಮವಾಗಿದ್ದರಿಂದ ಅಲ್ಲಿನ ಕಾರ್ಯಕರ್ತರು ಕಾರ್ಯಕ್ರಮ ರದ್ದು ಮಾಡಿದ್ದರು. ಆದರೆ ಗಾಂಧೀಜಿಯವರು ಪಣತೊಟ್ಟು ತೀರ್ಥಹಳ್ಳಿಯನ್ನು ಭೇಟಿ ಮಾಡಿ, ರಾಷ್ಟ್ರೀಯ ಧ್ಯೇಯವನ್ನು ಗಮನದಲ್ಲಿಟ್ಟುಕೊಂಡು ತೀರ್ಥಹಳ್ಳಿಯ ಹಾಗೂ ತೀರ್ಥಹಳ್ಳಿಯ ಮಹಾಜನತೆಯ ಉದ್ದೇಶಿಸಿ ಮಾತನಾಡಿದ್ದರು.
ಮೈದಾನ ಸ್ವಚ್ಛತೆ ಮಾಡಿದ ವಾಕಿಂಗ್ ಬಡ್ಡಿಸ್!
ತೀರ್ಥಹಳ್ಳಿಯ ವಾಕಿಂಗ್ ಬಡ್ಡಿಸ್ ತಂಡ ಅನಂತಮೂರ್ತಿ ಶಾಲಾ ಮೈದಾನ ಸ್ವಚ್ಛ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಣೆ ಮಾಡಿದರು.
ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ಪಟ್ಟಣ ಸ್ವಚ್ಛತೆ
ತೀರ್ಥಹಳ್ಳಿ ಪಟ್ಟಣದಲ್ಲಿ ತೀರ್ಥಹಳ್ಳಿ ಸಹ್ಯಾದ್ರಿ ಪಿಯು ಕಾಲೇಜು ಮತ್ತು ಶಾಲಾ ಮಕ್ಕಳಿಂದ ಪಟ್ಟಣದಲ್ಲಿ ಬಿದ್ದಿದ್ದ ಕಸವನ್ನು ಹೆರಕಲಾಯಿತು. ವಿದ್ಯಾರ್ಥಿಗಳು ಪಟ್ಟಣವನ್ನು ಸ್ವಚ್ಛತೆ ಮಾಡಿದರು