ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘದ ವಾರ್ಷಿಕ ಸಭೆ
– ಸಂಘಟನೆ ಜತೆಗೆ ಸಮುದಾಯದ ಸೇವೆಗೆ ಬದ್ಧ ಎಂದ ನಿರ್ದೇಶಕರು
– ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಸಂಘದ ಬಗ್ಗೆ ಗಣ್ಯರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘ 2023-2024 ನೇ ಸಾಲಿನ ಪ್ರಥಮ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬಂಟರ ಭವನದಲ್ಲಿ ಬುಧವಾರ ನಡೆಯಿತು.
ಪ್ರಥಮ ವರ್ಷದ ಸರ್ವ ಸದಸ್ಯರ ಮಹಾಸಭೆ ಸಂಘದ ಅಧ್ಯಕ್ಷರಾದ ಡಾಕಮ್ಮ ಅಧ್ಯಕ್ಷತೆಯಲ್ಲಿ ಎಲ್ಲಾ ನಿರ್ದೇಶಕರು, ಸದಸ್ಯರ ಸಮ್ಮುಖದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಡಾ. ಆರ್.ಎಂ. ಮಂಜುನಾಥ ಗೌಡ, ಹೆಚ್.ಎನ್.ವಿಜಯದೇವ್, ಸಿರಿಬೈಲ್ ಧರ್ಮಶ್ ಭಾಗವಹಿಸಿ ಸಂಘದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥಗೌಡ ಮತ್ತು ಹಿರಿಯ ಸಹಕಾರಿ ವಿಜಯ್ ದೇವ್ ಅವರು ನೆರವೇರಿಸಿದರು. ಪ್ರಾಸ್ತಾವಿಕ ನುಡಿಗಳನ್ನು ನಿರ್ದೇಶಕರಾದ ಸುಜನೀ ಗೌಡ ಮಾಡಿದರು.
ಪ್ರಾರ್ಥನೆಯನ್ನು ಕಲಾವತಿ ರವಿ ಅವರು ನೆರವೇರಿಸಿದರು, ಸ್ವಾಗತವನ್ನು ಶೈಲಾ ಅಶ್ವತ್ ಮೂರ್ತಿ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಶೋಭಾ ಶ್ರೀಧರ್ ಖಜಾಂಚಿ ಚರ್ಚೆ ಮಾಡಿದರು.. ಈ ಕಾರ್ಯಕ್ರಮದಲ್ಲಿ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕೂಡ ಮಾಡಲಾಯಿತು. ನಿರ್ದೇಶಕರಾದ ಪ್ರೀತಿ ಗಿರೀಶ್ ನಿರೂಪಣೆ ಮಾಡಿದರು.
ಮೆಚ್ಚುಗೆ ವ್ಯಕ್ತಪಡಿಸಿದ ಡಾ. ಆರ್. ಎಂ
ಸಹಕಾರಿ ನಾಯಕರಾದ ಡಾ.ಆರ್.ಎಂ.ಮಂಜುನಾಥ ಗೌಡ, ಸಂಘದ ಸದಸ್ಯರಿಗೆ ಮತ್ತು ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸಮಾಜದ ಬಾಂಧವರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನ ಮಾಡಿ ನಾವು ನಿಮ್ಮ ಜೊತೆ ಇದ್ದೇವೆ. ತಾಲೂಕಿನಲ್ಲಿ ನಮ್ಮ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಹಾರೈಸಿದರು.
ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸಿರಿಬೈಲ್ ಧರ್ಮೇಶ್ ಇವರು ಮಾತನಾಡಿ ಸಂಘದ ಬೆಳವಣಿಗೆಯ ಕುರಿತು ಮಾತನಾಡಿದರು ತಾಲೂಕಿನ ಒಕ್ಕಲಿಗ ಸಮುದಾಯದ ಮಹಿಳೆಯರ ಸದಸ್ಯತ್ವದ ಸಂಖ್ಯೆ ಹೆಚ್ಚಿಸಬೇಕು ಹಾಗೂ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಬಗ್ಗೆ ಮಾತನಾಡಿದರು.
ಸಂಘ ಕಟ್ಟುವ ಕೆಲಸ ಸುಲಭವಾದುದಲ್ಲ: ಮಮತಾ ಸಾಯಿನಾಥ
ಮಹಿಳಾ ಸಹಕಾರಿ ನಾಯಕಿ ಮಮತಾ ಸಾಯಿನಾಥ ಅವರು ಮಾತನಾಡಿ, ಸಂಘ ಕಟ್ಟುವ ಕೆಲಸ ಸುಲಭವಾದುದಲ್ಲ ಅದಕ್ಕೆ ತುಂಬಾ ಶ್ರಮ ಬೇಕಾಗುತ್ತದೆ ಆ ಶ್ರಮ ಹೇಗಿದೆ ಎನ್ನುವುದಕ್ಕೆ ಇವತ್ತು ನೀವೆಲ್ಲಾ ಸೇರಿರುವುದೇ ಒಂದು ನಿರ್ದೇಶನವಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಮಹಿಳಾ ಒಕ್ಕಲಿಗರು ಇನ್ನೂ ಹೆಚ್ಚಿನ ಸದಸ್ಯತ್ವ ಪಡೆದು ಸಮಾಜದ ಸಮುದಾಯದ ಏಳಿಗೆಗೆ ಕಾರಣಿಕರ್ತರರಾಗಲಿ ಎಂದು ಎಲ್ಲಾ ಸಮುದಾಯದ ಮಹಿಳೆಯರಿಗೆ ಶುಭ ಹಾರೈಸಿದರು.
ಸಂಘ ಬೆಳೆದು ಬಂದ ಹಾದಿಯನ್ನು ನೆನಪಿಸಿದ ಡಾಕಮ್ಮ
ಡಾಕಮ್ಮ ಮಾತನಾಡಿ, ಅಧ್ಯಕ್ಷರಾಗಿ ಸಂಘ ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಂಡು ಎಲ್ಲಾ ನಿರ್ದೇಶಕರು ಮತ್ತು ಸಂಘದ ಸದಸ್ಯರು ನನ್ನನ್ನು ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು ಅದಕ್ಕೆ ನಾನು ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಮುದಾಯದಲ್ಲಿ ಮಹಿಳೆಯರು ಸೇರಿಸಿ 10 ಹಲವು ಕಾರ್ಯಕ್ರಮವನ್ನು ಮಾಡಿ ಸಮುದಾಯದ ಎಲ್ಲಾ ಮಹಿಳೆಯರನ್ನ ಒಂದುಗೂಡಿಸುವ ಪ್ರಯತ್ನ ನಮ್ಮದಾಗಿರುತ್ತದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ನೀಡಬೇಕು ಎಂದರು.
ಸಂಘ ಸದಾ ಕ್ರಿಯಾಶೀಲತೆಯಲ್ಲಿ ಇರಬೇಕಾದರೆ ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೋತ್ಸಾಹ ನೀಡಿ ಸಕಾಲದಲ್ಲಿ ಸೇರಬೇಕು ಎಂದರು. ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ನಿರ್ದೇಶಕರಾದ ವಿಶಾಲ ಪ್ರಪುಲ್ಲ ನೆರವೇರಿಸಿದರು. ನಿರೂಪಣೆಯನ್ನು ಅಕ್ಷತಾ ಸುರೇಶ್ ಅವರು ನೆರವೇರಿಸಿದರು.
ಸಂಘದ ಶೈಲಾ ಅಶ್ವತ್ ಮೂರ್ತಿ( ಉಪಾಧ್ಯಕ್ಷರು), ಸರಸ್ವತಿ ಸಂದೇಶ ಗೌಡ ( ಕಾರ್ಯದರ್ಶಿ), ಶೋಭಾ ಶ್ರೀಧರ್( ಖಜಾಂಚಿ), ಸಚಿತಾ ಜಯರಾಮ್ ( ಸಹ ಕಾರ್ಯದರ್ಶಿ ), ನಿರ್ದೇಶಕರಾದ ಸುಜಿನಿ ಗೌಡ, ದಾಕ್ಷಾಯಿಣಿ ವೆಂಕಟೇಶ್, ಪ್ರೀತಿ ಗಿರೀಶ್, ಸರೋಜ ಗೌಡ ಗಡಿಕಲ್, ಸಂಧ್ಯಾ ರಮೇಶ್, ವಿಶಾಲ ಪ್ರಪುಲ್ಲ ಚಂದ್ರ, ಶಕುಂತಲಾ ರಮೇಶ್ ಸೇರಿ ಎಲ್ಲರೂ ಹಾಜರಿದ್ದರು