ಚಿಕ್ಕಮಗಳೂರು ಸಮಾಜ ಕಲ್ಯಾಣ ಇಲಾಖೆ ಕಛೇರಿ ಮೇಲೆ ಲೋಕಾಯುಕ್ತ ದಾಳಿ..!!
* ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಎ. ಕಾಂತರಾಜ್ ಲೋಕಾಯುಕ್ತ ಬಲೆಗೆ
* 10 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ
NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಇಲಾಖೆ ವತಿಯಿಂದ ನೀಡುವ ಕಿರುಸಾಲಕ್ಕೆ 10 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆದಿದೆ.
ದಾಳಿ ಸಮಯದಲ್ಲಿ ಲಂಚ ಪಡೆಯುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಎ. ಕಾಂತರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
1 ಲಕ್ಷಕ್ಕೆ 50 ರೂ. ಸಾವಿರ ಸಬ್ಸಿಡಿ, 50 ಸಾವಿರ ರೂ. ಲೋನ್ ಸ್ಯಾಂಕ್ಷನ್ ಮಾಡಲು 10 ಸಾವಿರ ರೂ. ಲಂಚ ಪಡೆಯುವಾಗ
ಲೋಕಾಯುಕ್ತ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.