ಕೊಪ್ಪದಲ್ಲಿ ಸಾಲ ಬಾಧೆಗೆ ರೈತ ಬಲಿ!
* ಜೀವನಕ್ಕಾಗಿ ಸ್ವಲ್ಪ ಒತ್ತುವರಿ ಮಾಡಿದ್ದ ರೈತ: ನೊಂದು ಆತ್ಮಹತ್ಯೆ
* ಮನೆಯ ಬಳಿಯೇ ನೇಣಿಗೆ ಕೊರಳೊಡ್ಡಿದ ರೈತ!
NAMMUR EXPRESS NEWS
ಕೊಪ್ಪ: ಸಾಲ ಬಾಧೆ ಮತ್ತು ಒತ್ತುವರಿ ತೆರವಿನ ಆತಂಕದಿಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲ್ಲೂಕಿನ ಮೇಗುಂದಾ ಹೋಬಳಿಯ ಮೇಗೂರಿನಲ್ಲಿ ನಡೆದಿದೆ.
ಕರುಣಾಕರ ಆತ್ಮಹತ್ಯೆಗೆ ಶರಣಾದ ರೈತ. ರೈತ ಕರುಣಾಕರ ರವರು ಜೀವನ ನಿರ್ವಹಣೆಗಾಗಿ ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿಕೊಂಡಿದ್ದರು, ಸ್ಥಳೀಯ ಸೊಸೈಟಿ,ಬ್ಯಾಂಕ್ ಮತ್ತು ಒಂದಷ್ಟು ಕೈಸಾಲ ಸಹ ಮಾಡಿಕೊಂಡಿದ್ದ ರೈತ
ಮಗಳ ಮದುವೆ ಸಹ ಮಾಡಬೇಕಾಗಿತ್ತು, ಇವರ ಬದುಕಿಗೆ ಜಮೀನಿನಿಂದ ಬರುತಿದ್ದ ಅಲ್ಪಸ್ವಲ್ಪ ಆದಾಯದವೇ ಆಧಾರವಾಗಿತ್ತು ಎನ್ನಲಾಗಿದೆ.ಆದರೆ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಾದ್ಯಂತ ಕೇಳುತ್ತಿದ್ದ ಒತ್ತುವರಿ ತೆರವು ವಿಷಯದ ಸುದ್ದಿ ಕೇಳಿ ಚಿಂತಿತರಾಗಿದ್ದರು, ತಾನು ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿದ್ದರಿಂದ ಸದ್ಯದಲ್ಲೇ ಆ ಒತ್ತುವರಿ ತೆರವು ಮಾಡೇ ಮಾಡುತ್ತಾರೆ, ಮಗಳ ಮದುವೆ ಆಗಿಲ್ಲ, ಸಾಲ ತೀರಿಸಲು ಬೇರೆ ದಾರಿ ಇಲ್ಲಾ ಎಂದೆಲ್ಲಾ ಕುಟುಂಬಸ್ಥರು ಹಾಗೂ ಸ್ಥಳೀಯರ ಬಳಿ ನೋವು ಹೇಳಿಕೊಂಡಿದ್ದರು.
ತುಂಬಾ ಚಿಂತಿತರಾಗಿದ್ದ ಕರುಣಾಕರ ಸೋಮವಾರ ದಿನ ಮನೆಯ ಹತ್ತಿರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.