ಹರಿಯಾಣದಲ್ಲಿ ಕಮಲ ಕಿಲಕಿಲ!
* ತೀರ್ಥಹಳ್ಳಿಯಲ್ಲಿ ಕಾರ್ಯಕರ್ತರ ಭರ್ಜರಿ ವಿಜಯೋತ್ಸವ
* ಸತತ 3 ಬಾರಿ ಜಯ ಸಾಧಿಸಿದ ಬಿಜೆಪಿ: ಆರಗ ಸಂತಸ
NAMMUR EXPRESS NEWS
ತೀರ್ಥಹಳ್ಳಿ: ಭಾರತ ಜನತಾ ಪಾರ್ಟಿ ಬಿಜೆಪಿ ಹರಿಯಾಣದ ಗೆಲುವಿನ ಪ್ರಯುಕ್ತ ಕೊಪ್ಪ ಸರ್ಕಲ್ ನಲ್ಲಿ ಬಿಜೆಪಿ ಮುಖಂಡರು ಪಟಾಕಿ ಹೊಡೆದು, ವಿಜಯೋತ್ಸವ ಆಚರಣೆ ನಡೆಸಿದರು.
ವಿಜಯೋತ್ಸವದಲ್ಲಿ ಮಾಜಿ ಗೃಹ ಸಚಿವ, ಶಾಸಕರು ಆರಗ ಜ್ಞಾನೇಂದ್ರ ಮಾತನಾಡಿ ದೇಶದಲ್ಲಿ ಭಾರತ ಜನತಾ ಪಾರ್ಟಿ ಹರಿಯಾಣದಲ್ಲಿ ಮೂರನೇ ಬಾರಿ ವಿಜಯವನ್ನು ಸಾಧಿಸಿದೆ. ಜನರು ಆಶೀರ್ವಾದದ ಮೂಲಕ ದೇಶದ ಸಂಘಟನೆ ಮತ್ತು ಶಕ್ತಿ ಇಡಿ ಜಗತ್ತೇ ನೋಡುವ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿ ಗೆದ್ದೇ ಗೆಲ್ಲುವಂತೆ ಬೀಗುತ್ತಿದ್ದು,ಹಲವಾರು ಕಡೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಭೆ ನಡೆಸಿ ವಿವಿಧ ರೀತಿಯಲ್ಲಿ ಟೀಕೆಯನ್ನು ಮಾಡಿದ್ದರು.ಆದರೆ ಫಲಿತಾಂಶವು ಅವರಿಗೆ ಉತ್ತರವನ್ನು ನೀಡಿದೆ.
ಸಮೀಕ್ಷೆ ಪರಿಶೀಲನೆ ನೋಡಿ ಬೆಳಗ್ಗಿನ ಸಂದರ್ಭ ಆರಂಭದಲ್ಲಿ ಲೀಡ್ ಹೊಂದಿದ್ದ ಕಾಂಗ್ರೆಸ್ ಪಕ್ಷ, ಟನ್ ಗಟ್ಟಲೆ ಜಿಲೇಬಿಯನ್ನು ಹಂಚಿ ಸಂಭ್ರಮಾಚರಣೆಯನ್ನು ಆಚರಿಸಿ ತದನಂತರ ಫಲಿತಾಂಶದ ಸಂದರ್ಭದಲ್ಲಿ ಪಲಾಯನ ಮಾಡಿದ್ದಾರೆ.
ಇದೀಗ ಜಮ್ಮು ಕಾಶ್ಮೀರ ದಾಖಲೆಯನ್ನು ಸೃಷ್ಟಿಸಿದೆ. ಅದೇ ರೀತಿ ಪ್ರಜಾಪ್ರಭುತ್ವ ಸಂವಿಧಾನ ಗೆದ್ದಿದೆ. ಪ್ರಜಾಪ್ರಭುತ್ವದ ಬುನಾದಿ ಗಟ್ಟಿಗೊಳಿಸುವ ಕೆಲಸವನ್ನು ಮಹಾಜನತೆ ಮಾಡಿದೆ. ಇದೊಂದು ಬಿಜೆಪಿಗೆ ಹೆಮ್ಮೆಯ ಕ್ಷಣ ಎಂದು ಹೇಳಿದರು.
ಸಿಎಂ ವಿರುದ್ಧ ಭಾಷಣ: ರಾಜೀನಾಮೆಗೆ ಪಟ್ಟು
ಸಿ.ಎಂ ನಿಮ್ಮನ್ನು ಜನರು ತಿರಸ್ಕಾರ ಮಾಡಿದ್ದಾರೆ. ದಿನಾ ದಿನಾ ಮೂಡ ವಾಲ್ಮೀಕಿ ಹಗರಣದಿಂದ ಹಗುರವಾಗುತ್ತಿದ್ದೀರಾ, ಮಣ್ಣು ಪಾಲಾಗುತ್ತಿದ್ದೀರಿ ಹಾಗಾಗಿ ಮರ್ಯಾದೆಯಿಂದ ಗೌರವದಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಬಿಜೆಪಿ ತಾಲೂಕು, ಮಂಡಲದ ಅಧ್ಯಕ್ಷ ನವೀನ್ ಹೆದ್ದೂರು
ಮಾತನಾಡಿ ಸಹಜವಾಗಿ ಅಧಿಕಾರವನ್ನು ಅದೆಷ್ಟೇ ಚೆನ್ನಾಗಿ ನಿರ್ವಹಿಸಿದರೂ,ಜನರ ಮನಸ್ಸಿನಲ್ಲಿ ಅವಧಿ ಮುಗಿಯುವ ರೀತಿಯಲ್ಲಿ , ಬೇರೆಯವರ ಕಾರ್ಯವನ್ನು ಬೆಂಬಲಿಸುವ ಕ್ಷಣವಿದ್ದರೂ ಸತತ ಮೂರು ಬಾರಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಅಕ್ಟೋಬರ್ 7ರಂದು ನಡೆದ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಅಧಿಕಾರವನ್ನು ಪಡೆದುಕೊಳ್ಳುವ ಲಕ್ಷಣವಿದ್ದರೂ, ಬಿಜೆಪಿ ಭರ್ಜರಿ ಜಯವನ್ನು ಸಾಧಿಸಿದೆ ಎಂದು ಭಾರತ ಜನತಾ ಪಾರ್ಟಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರು ಚಂದವಳ್ಳಿ ಸೋಮಶೇಖರ್ , ಕೌನ್ಸಿಲರ್ ಸಂದೇಶ ಜವಳಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕುಕ್ಕೆ ಪ್ರಶಾಂತ್, ಪಟ್ಟಣ ಪಂಚಾಯತ್ ಸದಸ್ಯ ನವೀನ್ ಯತಿರಾಜ್, ಹಾಗೂ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.