- ತರಕಾರಿ ಮೂಟೆಯಲ್ಲಿ ಗೋ ಮಾಂಸ ಸಾಗಣೆ
- ಶಿವಮೊಗ್ಗದಿಂದ ಮಂಗಳೂರಿಗೆ ಮಾಂಸ ಸಾಗಣೆ
- ಆಗುಂಬೆ ತಪಾಸಣಾ ಕೇಂದ್ರದಲ್ಲಿ ಇಬ್ಬರ ಬಂಧನ
- ಹಿಂದೂ ಪರ ಸಂಘಟನೆಗಳಿಗೆ ಸಿಕ್ಕ ಜಯ!
- ಜಮೀನು ಗಲಾಟೆ: ಓರ್ವ ರೈತ ಆತ್ಮಹತ್ಯೆ..!
NAMMUR EXPRESS
ತೀರ್ಥಹಳ್ಳಿ: ಮಲೆನಾಡಲ್ಲಿ ಗೋ ಮಾಂಸ ದಂಧೆ ಇದೀಗ ಸಂಪೂರ್ಣ ಹೆಚ್ಚಾಗಿದ್ದು, ಇದೀಗ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಇಲಾಖೆ ತಪಾಸಣಾ ಕೇಂದ್ರದ ಬಳಿ ತರಕಾರಿ ಪಿಕ್ ಅಪ್ ಅಲ್ಲಿ 4 ಕ್ವಿಂಟಲ್ ಮಾಂಸ ಸಿಕ್ಕಿ ಬಿದ್ದಿದೆ.
ಸ್ಥಳೀಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುವ ವೇಳೆ ಪಿಕಪ್ ವಾಹನದಲ್ಲಿ ಶಿವಮೊಗ್ಗದಿಂದ ಮಂಗಳೂರಿಗೆ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಏನಿದು ಘಟನೆ?: ಶಿವಮೊಗ್ಗದಿಂದ ಮಂಗಳೂರಿಗೆ ತರಕಾರಿ ಹೊಡೆಯುವ ಪಿಕ್ ಅಪ್ ವಾಹನದಲ್ಲಿ ತರಕಾರಿ ಚೀಲದ ಜತೆಗೆ ಮಾಂಸ ಸಾಗಣೆ ಮಾಡಲಾಗುತ್ತಿತ್ತು.
ಇರ್ಷಾದ್ ಬಿನ್ ಮುಸ್ತಾಫಾ ಕಂಕನಾಡಿ ಹಾಗೂ ದೇರಳಕಟ್ಟೆಯ ಇಮ್ತಿಯಾಜ್ ಬಿನ್ ಹಸನಬ್ಬ ಬಂಧಿತ ಆರೋಪಿಗಳು. ಸಿಕ್ಕಿ ಬಿದ್ದ ಆರೋಪಿಗಳಿಂದ ಸುಮಾರು 4 ಕ್ವಿಂಟಾಲ್ ಗೊಮಾಂಸ ವಶಪಡಿಸಿಕೊಳ್ಳಲಾಗಿದೆ.
ಸಂಘಟನೆಗಳಿಂದ ಕಾರ್ಯಾಚರಣೆ! ತೀರ್ಥಹಳ್ಳಿಯ ವಿಶ್ವಹಿಂದೂ ಪರಿಷತ್ ಹಾಗೂ ತೀರ್ಥಹಳ್ಳಿ ಭಜರಂಗದಳದ ಮುಖಂಡರಾದ ಗಣೇಶ್ ಪ್ರಸಾದ್ ದೇವಾಡಿಗ, ಆಗುಂಬೆ ಭಜರಂಗದಳ ಘಟಕದ ಪ್ರಮುಖರಾದ ಅಶ್ವಥ್ ಆಗುಂಬೆ, ಶಿವಕುಮಾರ್ ಹಂದಲಸು ಮತ್ತಿತರ ಕಾರ್ಯಕರ್ತರು ಕಾರ್ಯಾಚರಣೆ ವೇಳೆ ಸಹಕಾರ ನೀಡಿದ್ದಾರೆ. ತಪಾಸಣಾ ಕೇಂದ್ರದ ಸಿಬ್ಬಂದಿ ಪ್ರವೀಣ್ ಹಾಗೂ ಅರಣ್ಯ ತನಿಖಾ ಠಾಣೆಯ ಜಗದೀಶ್ ವಾಹನ ಅಡ್ಡಗಟ್ಟಿ ಗೋ ಮಾಂಸ ಸಾಗಿಸುತ್ತಿದ್ದವರನ್ನು ಬಂಧಿಸಿದ್ದಾರೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದೂರು ಬಳಿಯೂ ದಾಳಿ: ಇತ್ತೀಚಿಗೆ ಕಟ್ಟಹಕ್ಕಲು ಬಳಿ ವಾಹನ ದಾಳಿ ಮಾಡಿ ಗೋವು ರಕ್ಷಣೆ ಮಾಡಲಾಗಿತ್ತು. ಹಿಂದೂ ಸಂಘಟನೆಗಳು ಗೋ ರಕ್ಷಣೆ ಕೆಲಸ ಮಾಡುತ್ತಿದ್ದಾರೆ.
ರೈತ ಆತ್ಮಹತ್ಯೆ!: ಕೋಣಂದೂರು ಸಮೀಪದ ಹಾದಿಗಲ್ ಬಳಿ ರೈತನೊಬ್ಬ ತೋಟದ ಬಳಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದ್ದು, ಕೋಣಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಬಾಬಣ್ಣ(71) ಎಂದು ಗುರುತಿಸಲಾಗಿದೆ.
ಜಮೀನು ಒತ್ತುವರಿ ಸಮಸ್ಯೆ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಹಾದಿಗಲ್ ದೇವಸ್ಥಾನ ಬಳಿ ಈ ಘಟನೆ ನಡೆದಿದೆ.