ವಿದೇಶದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಅಕ್ಷ್ಯಮ್ಯ ಕಿರುಚಿತ್ರ
– ಟೆಕ್ಸಾಸ್ ಕನ್ನಡಿಗರ ನೆರವಿನಲ್ಲಿ ಯುವ ಪ್ರತಿಭೆಗಳ ಹೊಸ ಸಾಹಸ
– ಥಿಯೇಟರ್ ನಲ್ಲಿ ಪ್ರೀಮಿಯರ್ ಬಿಡುಗಡೆಗೆ ಸಜ್ಜು
– ವೆಂಕಿ ಗೌಡ ನಿರ್ದೇಶನದಲ್ಲಿ ಉತ್ತಮ ಕಿರುಚಿತ್ರ
NAMMUR EXPRESS NEWS
ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆಯುವ ಕನ್ನಡ ಕಿರು ಚಿತ್ರೋತ್ಸವಕ್ಕೆ ಭಾರಿ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಕನ್ನಡದ ಅಕ್ಷಮ್ಯ ಎಂಬ ಚಿತ್ರ ಸುಮಾರು 50 ಕಿರು ಚಿತ್ರಗಳೊಂದಿಗೆ ಸ್ಪರ್ಧಿಯಾಗಿ ಪ್ರವೇಶ ಪಡೆದಿದೆ. ತನ್ನ ವಿಭಿನ್ನ ಕಥೆಯ ಮೂಲಕವೇ ಇದೀಗ ಬಹಳಷ್ಟು ಸದ್ದು ಮಾಡುತ್ತಿದ್ದು, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ನೋಡುಗರನ್ನು ಅಕ್ಷಮ್ಯ ಚಿತ್ರ ಪಡೆದಿದೆ. ಯುನೈಟೆಡ್ ಸ್ಟೇಟ್ಸ್ ನ ಹೂಸ್ಟನ್ ನ ಕೆಲವು ಯುವ ಪ್ರತಿಭೆಗಳ ಕನ್ನಡ ತಂಡವೊಂದು ಒಗ್ಗೂಡಿ, ಯಾವುದೇ ಅನುಭವವಿಲ್ಲದೆ , ಪ್ರಥಮ ಬಾರಿ ಅಕ್ಷಮ್ಯ ಎಂಬ ಒಳ್ಳೆಯ ಕಿರುಚಿತ್ರವನ್ನು ರಚಿಸಿರುವುದು ನಿಜಕ್ಕೂ ಹೆಮ್ಮೆಯೇ ಸರಿ. ಅಕ್ಷಮ್ಯ ಚಿತ್ರವನ್ನು ನಿರ್ದೇಶನ ಮಾಡಿದವರು ವೆಂಕಿ ಗೌಡ. ಮೂಲತಃ ಬೆಂಗಳೂರಿನವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿ, ಯುಎಸ್ ನಲ್ಲಿ 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಚಿತ್ರದ ನಿರ್ದೇಶನದ ಜೊತೆಗೆ ಸ್ಕ್ರಿಪ್ಟ್ ,ಡೈಲಾಗ್ ಬರವಣಿಗೆ, ಶೂಟಿಂಗ್ ಸ್ಥಳಗಳನ್ನ ಆಯ್ಕೆ ಮಾಡುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಪ್ರಶಾಂತ್ ರಾವ್ ಮತ್ತು ರಾಮು ಭಾರದ್ವಾಜ ರವರು ಕ್ಯಾಮರಾ ನಿರ್ವಹಣೆ ಮಾಡಿದ್ದಾರೆ.
ಮಲೆನಾಡ ನಾಯಕ, ನಾಯಕಿ
ಅಕ್ಷಮ್ಯ ಚಿತ್ರದ ನಾಯಕ ನಟ ಮತ್ತು ನಟಿ ಮಲೆನಾಡು ಭಾಗದವರಾಗಿದ್ದು, ಚರಣ್ ಗೌಡ ನಟರಾಗಿ , ಅನುಪಮ ಗೋವಿಂದರಾಜ್ ನಟಿಯಾಗಿ, ರವಿ , ಡಾ. ಸುಪ್ರಭ ಭಟ್, ಅರುಣ್ ಆಂಥೋನಿ, ಬಸವರಾಜ್ ಎ. ಜೆ.,ಅವಿನಾಶ್ ಬಸಪ್ಪ, ರತ್ನಾ ಬಸವರಾಜ್, ಡಾ.ಸತೀಶ್ , ಡಾಕ್ಟರ್ ಸಂಚಿತ ಕನಕನ್ನಾವರ್,ಮಿಸ್ ಶ್ರೀ , ಯಶ್ ಹವಳಿಮನೆ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ.
ಕನ್ನಡ ಮೂಲದವರಿಂದಲೇ ಚಿತ್ರ ನಿರ್ಮಾಣ
ಶೈಲಜಾ ಗೌಡ ಅನುಪಮ ಗೋವಿಂದರಾಜ್ ಮತ್ತು ರತ್ನ ಬಸವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಬೆಂಗಳೂರಿನ ಕೆ. ಏಸು, ಚಿತ್ರದ ಎಡಿಟಿಂಗ್ ಮಾಡಿದ್ದಾರೆ. ಪ್ರಸನ್ನ ಕೇಶವ ಕೆ ಎಸ್ ರವರಿಂದ ಈ ಚಿತ್ರದ ಸಂಗೀತ ಮೂಡಿಬಂದಿದ್ದು , ಕೆ ಯೇಸು ಮತ್ತು ಪ್ರಸನ್ನ ಕೇಶವ ಸ್ಯಾಂಡಲ್ವುಡ್ ನಲ್ಲಿ ಪ್ರಮುಖರಾಗಿದ್ದು, ಇವರು ಮುಂಬರುವ ಎಲ್ಟು ಮುತ್ತ ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರದ ರೂಪರೇಶೆಯನ್ನು ಧ್ವನಿಯ ಮೂಲಕ ರಾ. ಸೂರ್ಯ ನಿರೂಪಣೆಯನ್ನು ಮಾಡಿದ್ದಾರೆ.
ಥಿಯೇಟರ್ ನಲ್ಲಿ ಪ್ರೀಮಿಯರ್ ಬಿಡುಗಡೆ
ನವೆಂಬರ್ 8 ರಂದು ಅಕ್ಷಮ್ಯ ಚಿತ್ರವು ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ , 17 ರಂದು ಹೂಸ್ಟನ್ ನಲ್ಲಿ , ಡಿಸೆಂಬರ್ 7 ರಂದು ಡಲ್ಲಾಸ್ ಮತ್ತು ಡಿಸೆಂಬರ್ 8 ರಂದು ಮಯಾಮಿ ಸಿಟಿ ಥಿಯೇಟರ್ ನಲ್ಲಿ ಪ್ರೀಮಿಯರ್ ಬಿಡುಗಡೆಗೊಳ್ಳಲಿದೆ. ಈಗಾಗಲೇ ವೀಕ್ಷಕರಿಂದ ಉತ್ತಮ ಅಭಿಪ್ರಾಯ ಪಡೆದಿದೆ.
ಚಿತ್ರ ಕಥೆ ಏನು?
ಅಕ್ಷಮ್ಯ ಒಂದು ರೀತಿಯ ರಹಸ್ಯಮಯ ಚಿತ್ರವಾಗಿದ್ದು,ಒಬ್ಬ ತಪ್ಪು ಮಾಡಿದ ಕಾರಣಕ್ಕಾಗಿ ಅವನ ಸುತ್ತ ಮುತ್ತಲು ಇರುವ ಜನರು ತಪ್ಪು ಮಾಡುವಂತಹ ಸನ್ನಿವೇಶ ಎದುರಾಗುತ್ತದೆ. ಆದುದರಿಂದ ಈ ಕಿರು ಚಿತ್ರದ ಕಥೆಯು ಜನರಲ್ಲಿ ತಪ್ಪು ಮಾಡಿದ್ದೂ ಯಾರು? ಯಾರ ತಪ್ಪು ದೊಡ್ಡದ್ದು ? ಎಂಬ ಪ್ರಶ್ನೆ ಯನ್ನು ಜನರಲ್ಲಿ ಮೂಡಿಸುತ್ತದೆ. ಈ ಚಿತ್ರದಲ್ಲಿ ಉತ್ತಮ ಬರವಣಿಗೆಯ ಜೊತೆಗೆ ಅದ್ಭುತವಾದ ಹಿನ್ನೆಲೆ ಸಂಗೀತವನ್ನೂ ಕೇಳಬಹುದಾಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಇದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮೂವಿಯಾಗಿ ಹೊರಹೊಮ್ಮಿದೆ.
ಹೂಸ್ಟನ್ ನಲ್ಲಿ ಗ್ರಾಂಡ್ ರೆಡ್ ಕಾರ್ಪೆಟ್
ಫೆಬ್ರವರಿ 28 ಮತ್ತು ಮಾರ್ಚ್ 1, 2025 ರಂದು ಹೂಸ್ಟನ್ನಲ್ಲಿ ಗ್ರಾಂಡ್ ರೆಡ್ ಕಾರ್ಪೆಟ್ ನಿಗದಿಪಡಿಸಲಾಗಿದೆ. ಈ ಬಹು ನಿರೀಕ್ಷಿತ ಕಾರ್ಯಕ್ರಮದಲ್ಲಿ ಎಲ್ಲಾ ಕಿರುಚಿತ್ರ ನಿರ್ಮಾಣದ ಹಿಂದೆ ಚಲನಚಿತ್ರ ನಿರ್ಮಾಪಕರ ಶ್ರಮಕ್ಕೆ ತಕ್ಕ ಪುರಸ್ಕಾರಗಳು ನೀಡಿ, ವಿವಿಧ ಕಿರುಚಿತ್ರ ವಿಭಾಗಗಳಲ್ಲಿ ವಿಜೇತರನ್ನು ಗುರುತಿಸಲಾಗುತ್ತದೆ.