ಡಿ. 5ಕ್ಕೆ ಇಡೂರು ಕುಂಜ್ಞಾಡಿಯ ಸಾಂಪ್ರದಾಯಿಕ ಕಂಬಳ!
– ಕೋಣಗಳೊಂದಿಗೆ ಮನರಂಜನೆ ಕ್ರೀಡೆಯಾಗಿ ಕಂಬಳವನ್ನು ಆಚರಿಸುವ ಪದ್ದತಿ!
– ದೇವರ ಹೆಸರಿನೊಂದಿಗೆ ಆಚರಿಸುತ್ತಾ ಬಂದಿರುವ ಕ್ರೀಡೆ!
NAMMUR EXPRESS NEWS
ಕುಂದಾಪುರ: ಕರ್ನಾಟಕದ ಕರಾವಳಿಯಲ್ಲಿ ಕಂಬಳವು ದೈವಿಕ ಮತ್ತು ಐತಿಹಾಸಿಕ ಕ್ರೀಡೆ.ರೈತಾಪಿ ಜನರು ತಮ್ಮ ತಮ್ಮ ಗದ್ದೆಯ ಭತ್ತ ಕಟಾವು ನಂತರ ತಮ್ಮ ಕೋಣಗಳೊಂದಿಗೆ ಮನರಂಜನೆ ಕ್ರೀಡೆಯಾಗಿ ಕಂಬಳವನ್ನು ಆಚರಿಸುವ ಪದ್ದತಿಯನ್ನು ಪೂರ್ವಜರು ಶತಮಾನಗಳಿಂದ ಊರಿನ ದೇವರ ಹೆಸರಿನೊಂದಿಗೆ ಆಚರಿಸುತ್ತಾ ಬಂದಿರುತ್ತಾರೆ.
ಇಂತಹ ಒಂದು ಸಾಂಪ್ರದಾಯಿಕ ಕಂಬಳವು ಕುಂದಾಪುರ ತಾಲ್ಲೂಕಿನ ಇಡೂರು ಕುಂಜ್ಞಾಡಿ ಹಾಯ್ಗೂಳಿನಲ್ಲಿ ಮಧ್ಯಾಹ್ನ 12 ಗಂಟೆಗೆ ಕಂಬಳೋತ್ಸವವನ್ನು ಆಯೋಜಿಸಲಾಗಿದೆ. ಹಲವಾರು ವಿಭಾಗದ ಪ್ರಶಸ್ತಿಗಳು ಇದ್ದು,ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ಕೋಣಗಳೊಂದಿಗೆ ಆಗಮಿಸಿ ಈ ಕುಂಜ್ಞಾಡಿ ಕಂಬಳೋತ್ಸವವನ್ನು ವೈಭವಯುತವಾಗಿ ನಡೆಸಿಕೊಡಬೇಕೆಂದು ಇಡೂರು ಕುಂಜ್ಞಾಡಿ ಹಾಯ್ಗೂಳಿ ದೇವಸ್ಥಾನದ ಕಂಬಳ ಸಮಿತಿಯವರು,ಕಂಬಳಗದ್ದೆ ಮನೆಯವರು, ಕಂಬಳ ಪ್ರೋತ್ಸಾಹಕರು,ಇಡೂರು ಕುಂಜ್ಞಾಡಿ ಕಂಬಳ ಅಭಿಮಾನಿಗಳು ಈ ಮೂಲಕ ವಿನಂತಿಸಿಕೊಂಡಿದ್ದಾರೆ
ಉಚಿತ ಪ್ರವೇಶ ಇರುತ್ತದೆ.