ಮಲ್ನಾಡ್ ಟಾಪ್ ನ್ಯೂಸ್
– ಕರೆಂಟ್ ಕಂಬಕ್ಕೆಬೈಕ್ ಡಿಕ್ಕಿ: ಸಾವು!
– ಭದ್ರಾವತಿ: ಮೋರಿಗೆ ಬಿದ್ದ ಎಮ್ಮೆ: ರಕ್ಷಣೆ ಕಾರ್ಯ
– ಚಿಕ್ಕಮಗಳೂರು: ಸೇತುವೆ ಮೇಲೆ ಲಾರಿ, ಬಸ್ ನಡುವೆ ಡಿಕ್ಕಿ
– ಭದ್ರಾವತಿ: ರಾಜಾರೋಷವಾಗಿ ಕಬ್ಬಿಣದ ಅದಿರು ಕಳ್ಳತನ!
NAMMUR EXPRESS NEWS
ಭದ್ರಾವತಿ: ಭದ್ರಾವತಿ ನಗರದ ಜನ್ನಾಪುರದಲ್ಲಿ ಎರಡು ಮನೆಯಗೋಡೆ ಮಧ್ಯದಲ್ಲಿರುವ ಚರಂಡಿಗೆ ಎಮ್ಮೆಯೊಂದು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನ ಚರಂಡಿಯಿಂದ ಮೇಲಕ್ಕೆ ಎತ್ತಿದ್ದಾರೆ.
ಕರೆಂಟ್ ಕಂಬಕ್ಕೆಬೈಕ್ ಡಿಕ್ಕಿ: ಸಾವು!
ಶಿವಮೊಗ್ಗ: ಶಿವಮೊಗ್ಗದ ಕೊಮ್ಮನಾಳ್ ಬಳಿಯಲ್ಲಿ ವಿದ್ಯುತ್ ಕಂಬಕ್ಕೆ ಬೈಕ್ವೊಂದು ಡಿಕ್ಕಿಯಾದ ಪರಿಣಾಮ ಗೃಹರಕ್ಷಕ ದಳದ ಸಿಬ್ಬಂದಿ ಒಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಹರಮಘಟ್ಟದವರಾದ ಶಿವು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಭದ್ರಾವತಿ: ಮೋರಿಗೆ ಬಿದ್ದ ಎಮ್ಮೆಯ ರಕ್ಷಣೆ !
ಭದ್ರಾವತಿ ನಗರದ ಜನ್ನಾಪುರದಲ್ಲಿ ಎರಡು ಮನೆಯ ಗೋಡೆ ಮಧ್ಯದಲ್ಲಿರುವ ಚರಂಡಿಗೆ ಎಮ್ಮೆಯೊಂದು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಮ್ಮೆಯನ್ನ ಚರಂಡಿಯಿಂದ ಮೇಲಕ್ಕೆ ಎತ್ತಿದ್ದಾರೆ.
* ಚಿಕ್ಕಮಗಳೂರು: ಸೇತುವೆಯ ಮೇಲೆ ಲಾರಿ, ಬಸ್ ನಡುವೆ ಡಿಕ್ಕಿ!
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕಳಸ ತಾಲ್ಲೂಕಿನಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ.
ಚಿಕ್ಕಮಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಬಾಳೆಹೊನ್ನೂರಿನಿಂದ ಕಳಸಕ್ಕೆ ಬರುತ್ತಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಇಲ್ಲಿರುವ ಕಿರುಸೇತುವೆ ಬಳಿ ಎರಡು ವಾಹನಗಳು ಡಿಕ್ಕಿಗೆ ಎರಡು ವಾಹನಗಳ ಡ್ರೈವರ್ ಸೈಡ್ ಪೂರ್ಣ ಜಖಂಗೊಂಡಿದೆ. ಒಂದರ ಪಕ್ಕ ಇನ್ನೊಂದು ವಾಹನ ಪಾಸ್ ಆಗುವಾಗ ಸೇತುವೆಯ ಮೇಲೆ ಡಿಕ್ಕಿ ಸಂಭವಿಸಿದೆ.
* ಭದ್ರಾವತಿ: ರಾಜಾರೋಷವಾಗಿ ಕಬ್ಬಿಣದ ಅದಿರು ಕಳ್ಳತನ?
ಭದ್ರಾವತಿ: ಭದ್ರಾವತಿಯ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನರಸೀಪುರ ಗ್ರಾಮದಲ್ಲಿ ಅಕ್ರಮವಾಗಿ ಕಬ್ಬಿಣದ ಅದಿ ವರ್ಷದಿಂದ ವರ್ಷಕ್ಕೆ ಸೇರಿದೆ. ಇದಕ್ಕೆ ರಾಜಕೀಯ ಆಶ್ರಯವಿದೆ. ಸ್ಥಳೀಯರ ದೂರಿನ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಜೆಸಿಬಿ ಮತ್ತು ಲಾರಿ ಟ್ರಾಕ್ಟರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಶಿಕ್ಷಕರ ಸರಣಿಯಾಗಿ ಫೋನ್ ಕರೆ ಮಾಡಿದರೂ, ಎತ್ತಲಿಲ್ಲ.ಎತ್ತಿದ್ದರೂ, ನಾನೊಬ್ಬನೇ ಅಧಿಕಾರಿ ಏನು ಮಾಡಲು ಸಾಧ್ಯ ಎಂದು ಹೇಳಿ ಕೈತೊಳೆದುಕೊಂಡರು ಎನ್ನುತ್ತಾರೆ ಗ್ರಾಮಸ್ಥರು.
ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾಗಿರುವ ಹಿರಿಯ ಗಣಿ ರೋಗದ ಪಿ.ಕೆ ನಾಯಕ ರವರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಥಳೀಯರು ಎದುರು ನೋಡುತ್ತಿದ್ದಾರೆ. ನೆನ್ನೆ ಪ್ರಕರಣವು ಎಫ್.ಐ.. ಆರ್ ಆಗದೆ ಹೋದಾಗ ಲೋಕಾಯುಕ್ತ ಪೊಲೀಸ್ ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕಾಗಿದೆ.