ತೀರ್ಥಹಳ್ಳಿ ನೂತನ ರಿಂಗ್ ರಸ್ತೆ ಮತ್ತೆ ಸಂಚಾರ ಮುಕ್ತ!
– ಭಾರೀ ಮಳೆ ಕಾರಣ 5 ತಿಂಗಳ ಬಳಿಕ ಕಾಮಗಾರಿ ಪೂರ್ಣ
– ಕುರುವಳ್ಳಿ – ಬಾಳೆಬೈಲು ಸಂಪರ್ಕ ರಸ್ತೆ ಈಗ ಸಂಚಾರಕ್ಕೆ
– ತೀರ್ಥಹಳ್ಳಿಯಲ್ಲಿ ದೊಡ್ಡ ಹೈವೇ ಮಾಹಿತಿ ಫಲಕ ಜೋಡಣೆ
NAMMUR EXPRESS NEWS
ತೀರ್ಥಹಳ್ಳಿ: ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಬಾಳೇಬೈಲು ಕುರುವಳ್ಳಿ ನಡುವಿನ ರಸ್ತೆಯಲ್ಲಿ ವಾಹನ ಸಂಚಾರ ನವೆಂಬರ್ 25 ರಿಂದ ಪ್ರಾರಂಭವಾಗಿದೆ. ಸುಮಾರು ಐವತ್ತಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿ ಕಳೆದ ಮಳೆಗಾಲದಲ್ಲಿ ಗುಡ್ಡದ ಕುಸಿತದಿಂದ ವಾಹನ ಸಂಚಾರ ಐದಾರು ತಿಂಗಳು ಸಂಚಾರ ನಿಂತಿತ್ತು. ಇದೀಗ ಕಾಮಗಾರಿ ಸಂಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತವಾಗಿದೆ.
ಎರಡು ರಾಷ್ಟ್ರೀಯ ಹೆದ್ದಾರಿಯನ್ನ ಸಂಪರ್ಕಿಸುವ ತೀರ್ಥಹಳ್ಳಿಯ ಬಾಳೇಬೈಲು – ಕುರುವಳ್ಳಿ ನಡುವಿನ ನಿರ್ಮಾಣವಾದಂತ ಸೇತುವೆ ಕಳೆದ ವರ್ಷ ಸಂಚಾರಕ್ಕೆ ಮುಕ್ತವಾಗಿತ್ತು. ನ್ಯಾಷನಲ್ ಸಂಸ್ಥೆ ಈ ಸೇತುವೆ ಮತ್ತು ರಸ್ತೆಯನ್ನು ನಿರ್ಮಾಣ ಮಾಡಿದ್ದರು. ಈ ಭಾರಿ ದಾಖಲೆಯ ಮಳೆ ಆಗಿರುವುದರಿಂದ ಸಕಾಲದಲ್ಲಿ ಈ ಸೇತುವೆಯ ಕೆಲಸವನ್ನ ಪೂರ್ಣ ಮಾಡಲು ಸಾಧ್ಯವಾಗಲಿಲ್ಲ. ಇದೀಗ 5 ತಿಂಗಳ ಸತತ ಶ್ರಮದಿಂದ ಎಲ್ಲಾ ಕಾಮಗಾರಿ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ತೀರ್ಥಹಳ್ಳಿಯಲ್ಲಿ ದೊಡ್ಡ ಹೈವೇ ಮಾಹಿತಿ ಫಲಕ ಜೋಡಣೆ
ತೀರ್ಥಹಳ್ಳಿಯಲ್ಲಿ ದೊಡ್ಡ ಬೋರ್ಡ್ ಅಳವಡಿಕೆ ಹೆದ್ದಾರಿ ಇಲಾಖೆಯಿಂದ ತೀರ್ಥಹಳ್ಳಿ ಕೊಪ್ಪ ಸರ್ಕಲ್ ಅಲ್ಲಿ ವಿವಿಧ ಊರಿಗೆ ಸಂಪರ್ಕ ರಸ್ತೆ ತೋರಿಸುವ ಮಾಹಿತಿ ಫಲಕ ಅಳವಡಿಸಲಾಗಿದೆ.
ತೀರ್ಥಹಳ್ಳಿ ಲೋಕೋಪಯೋಗಿ ಇಲಾಖೆ ಪ್ರವಾಸಿ ತಾಣ ಮತ್ತು ಪ್ರಮುಖ ಊರುಗಳಿಗೆ ಹೋಗುವ ಮಾರ್ಗ ಬೋರ್ಡ್ ಹಾಕಬೇಕಿದೆ.