ರಾಷ್ಟ್ರಮಟ್ಟದಲ್ಲಿ ಹೆಬ್ರಿ ವಿದ್ಯಾಭಾರತಿ ಸಂಸ್ಥೆ ಮಕ್ಕಳ ಸಾಧನೆ
– ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಸನ್ಮಾನ
– ಆಡಳಿತ ಮಂಡಳಿಯಿಂದ ಸಾಧಕರಿಗೆ ಅಭಿನಂದನೆಗಳು
NAMMUR EXPRESS NEWS
ಹೆಬ್ರಿ: ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲೆ ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ವಿವಿಧ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಇತ್ತೀಚಿಗೆ ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಮೃತ ಭಾರತಿ ವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರು ಶೈಲೇಶ್ ಕಿಣಿ ಅಧ್ಯಕ್ಷತೆಯಲ್ಲಿ ಸನ್ಮಾನ ಮಾಡಿ ಶುಭ ಹಾರೈಸಲಾಯಿತು.
ಅಮೃತ ಭಾರತಿ ವಿದ್ಯಾಕೇಂದ್ರದ ಹೈಸ್ಕೂಲ್ ವಿಭಾಗದ ಹತ್ತನೇ ತರಗತಿ ವಿದ್ಯಾರ್ಥಿ ,ಶ್ರೀರಾಮ್ ಬಡಾಜೆ , ಇನೋವೇಟಿವ್ ಇನ್ ಮ್ಯಾಸ್ ಮಾಡೆಲ್ ರಾಷ್ಟ್ರಮಟ್ಟದ ಗಣಿತ ಮೇಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು , ವಿದ್ಯಾಲಯದ ವಿದ್ಯಾರ್ಥಿಗಳಾದ ಪ್ರೀತಮ್ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಸೈನ್ಸ್ ಮಾಡೆಲ್ ಬೆಸ್ಡ್ ಆನ್ ಸೆನ್ಸರ್ ವಿಷಯದಲ್ಲಿ ಸ್ಪರ್ಧಿಸಿ ದ್ವಿತೀಯ ಬಹುಮಾನವನ್ನು ಮತ್ತು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ನಿತೀಶ್ ಕುಮಾರ್ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿದನು . ಇವರಿಗೆ ಅಮೃತ ಭಾರತಿ ಟ್ರಸ್ಟ್ ಅನ್ನಪೂರ್ಣ ಸಭಾಗೃಹದಲ್ಲಿ ಸನ್ಮಾನಿಸಿದೆ. ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಆಯೋಜಿಸಿದ ರಾಷ್ಟ್ರಮಟ್ಟದ ಸ್ಪರ್ಧೆ ಇದಾಗಿದೆ. ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಾಸ್ತಾವಿಕ ಮಾತುಗಳ ನ್ನಾಡಿ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು . ಸಂಸ್ಥೆಯ ಪ್ರಾಂಶುಪಾಲರು ಶ್ರೀ ಅರುಣ್ ಎಚ್ . ವೈ . ವಿದ್ಯಾಕೇಂದ್ರದ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಕುಮಾರಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ಉಪಸ್ಥಿತರಿದ್ದರು .
ಅಭಿನಂದನಾ ಪತ್ರವನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಸಂಸ್ಕೃತ ಪ್ರಮುಖ್ ವೇದವ್ಯಾಸ ತಂತ್ರಿ ವಾಚಿಸಿದರು ಸ್ವಾಗತ ಶ್ರೀಮತಿ ಪ್ರೀತಿ ಶೆಟ್ಟಿ ನಿರೂಪಣೆ ಶ್ರೀಮತಿ ಪ್ರೀತಿ ಬಿ.ಕೆ ನಿರೂಪಿಸಿ ಶ್ರೀಮತಿ ಜ್ಯೋತಿ ವಂದಿಸಿದರು.ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರೀತಮ್ ದ್ವಿತೀಯ ಸ್ಥಾನ
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ನವೆಂಬರ್ ತಿಂಗಳಿನಲ್ಲಿ ಜಯಪುರದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲ್ ವಿಭಾಗದ ಹತ್ತನೇ ತರಗತಿ ವಿದ್ಯಾರ್ಥಿ ಪ್ರೀತಮ್ ದ್ವಿತೀಯ ಬಹುಮಾನವನ್ನು ಪಡೆದು ಸಂಸ್ಥೆಗೆ , ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾನೆ. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ವಿಜ್ಞಾನ ಮೇಳ ವೇದಗಣಿತ ಗಣಿತ ಸಂಸ್ಕೃತಿ ಜ್ಞಾನ ಮಹೋತ್ಸವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಸೈನ್ಸ್ ಮಾಡೆಲ್ ಬೆಸ್ಡ್ ಆನ್ ಸೆನ್ಸರ್ ವಿಷಯದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಮಂಗಳೂರು ಶಾರದಾ ವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಅಲ್ಲಿಯೇ ನಡೆದ ವಿದ್ಯಾಭಾರತಿ ಕ್ಷೇತ್ರ ಮಟ್ಟದ ಮೂರು ರಾಜ್ಯಗಳ ವಿದ್ಯಾಭಾರತಿ ಸಂಸ್ಥೆಗಳ ವಿದ್ಯಾರ್ಥಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ಅಖಿಲ ಭಾರತೀಯ ವಿದ್ಯಾಭಾರತಿ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ . ಪ್ರಕಾಶ್ ಶೆಟ್ಟಿ ಮತ್ತು ಶ್ರೀಮತಿ ಸುಮಾ ಶೆಟ್ಟಿ ಹಾನೆಗೋಡು ಮನೆ ಕುಚ್ಚೂರು ಇವರ ಮಗನಾಗಿದ್ದಾನೆ. ಇವರಿಗೆ ಟ್ರಸ್ಟ್ ಮತ್ತು ಬೋಧಕ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.