ಜಪಾನ್ ಅಲ್ಲೂ ಆರ್. ಎಸ್.ಎಸ್ ಸಂಘಟಿಸಿದ ಆರಗ ಜ್ಞಾನೇಂದ್ರ
– ಟೋಕಿಯೋದಲ್ಲಿರುವ ಭಾರತೀಯರ ಜತೆ ಮಾತುಕತೆ
– ಸುಭಾಷ್ ಚಂದ್ರ ಬೋಸ್ ಅವರ ಪುತ್ತಳಿಗೆ ನಮನ
NAMMUR EXPRESS NEWS
ತೀರ್ಥಹಳ್ಳಿ: ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಜಪಾನ್ ತೆರಳಿದ್ದ ಮಾಜಿ ಗೃಹ ಸಚಿವರು ಬಿಜೆಪಿ ನಾಯಕರು, ತೀರ್ಥಹಳ್ಳಿ ಶಾಸಕರು ಆದ ಆರಗ ಜ್ಞಾನೇಂದ್ರ ಅವರು ಜಪಾನ್ ರಾಜಧಾನಿ ಟೋಕಿಯೋ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿತ್ಯ ಶಾಖೆಯಲ್ಲಿ ಪಾಲ್ಗೊಂಡು ವಿದೇಶದಲ್ಲೂ ಸಂಘಟನೆ ಮಾಡುವ ಮೂಲಕ ಈಗ ಸುದ್ದಿಯಾಗಿದ್ದಾರೆ. ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅಲ್ಲಿಯ ಕನ್ನಡಿಗರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಟೋಕಿಯೋ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿತ್ಯ ಶಾಖೆಯಲ್ಲಿ ಪಾಲ್ಗೊಂಡು ಅಲ್ಲಿನ ಸಂಘದ ಸ್ವಯಂ ಸೇವಕರ ಪರಿಚಯ ಮಾಡಿಕೊಂಡು ಸಂಘದ ಕಾರ್ಯದಲ್ಲಿ ಭಾಗಿಯಾಗಿದ್ದರು. ನಂತರ ಅಲ್ಲಿದ್ದ ಬಿಜೆಪಿ ಬೆಂಬಲಿಗರ ದೊಡ್ಡ ಪಡೆಯೊಂದಿಗೆ ಸೌಹಾರ್ದ ಮಾತುಕತೆ ನಡೆಸಿದರು. ಅಲ್ಲದೆ ಜಪಾನ್ ಪ್ರವಾಸದ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸರ ಚಿತಾ ಭಸ್ಮ ಸಂಗ್ರಹಿಸಿ ಇಟ್ಟಿರುವ ಸ್ಥಳಕ್ಕೆ ಮತ್ತು ಬೋಸರ ಪುತ್ತಳಿ ಇರುವ ಸ್ಥಳಕ್ಕೆ ಬೇಟಿ ನೀಡಿ ಗೌರವ ನಮನ ಸಲ್ಲಿಸಿದರು. ರಾಜ್ಯದ ಮುಂಚೂಣಿ ಬಿಜೆಪಿ ನಾಯಕರಾಗಿರುವ ಜ್ಞಾನೇಂದ್ರ ಅವರ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಊರಿಗೆ ಆಗಮಿಸಿದ ಜ್ಞಾನೇಂದ್ರ
ಒಂದು ವಾರಗಳ ಪ್ರವಾಸದ ಬಳಿಕ ಆರಗ ಜ್ಞಾನೇಂದ್ರ ಅವರು ತವರಿಗೆ ಮರಳಿದ್ದಾರೆ. ಎಂದಿನಂತೆ ಜನರ ಅಹವಾಲು ಮತ್ತು ಸಭೆ, ಕಾರ್ಯಕ್ರಮಗಳಿಗೆ ಭಾಗಿಯಾಗಲಿದ್ದಾರೆ.