ಕರ್ನಾಟಕ ಟಾಪ್ ನ್ಯೂಸ್
– ಬೆಳ್ಳಿ ದರ ಕೆ.ಜಿಗೆ ₹5,200 ಏರಿಕೆ: ಚಿನ್ನ ಕಡಿಮೆ!
– ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಮೂಲ ವೇತನ ಹೆಚ್ಚಳ
– ನಿರುದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಐಟಿ ಕ್ಷೇತ್ರದಲ್ಲಿ ಉದ್ಯೋಗ
NAMMUR EXPRESS NEWS
ನವದೆಹಲಿ: ಕೆಲವು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ದರ ಮತ್ತೆ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನ. 27ರಂದು ಕೆ.ಜಿ ಬೆಳ್ಳಿಯ ಬೆಲೆ ಒಂದೇ ದಿನದಲ್ಲಿ 5,200 ರೂ. ಏರಿಕೆ ಕಂಡು, 95,800 ರೂ.ಗೆ ತಲುಪಿದೆ.
ನ.26ರಂದು ಬೆಳ್ಳಿಯ ಬೆಲೆ 1,100 ರೂ. ಕಡಿಮೆಯಾಗಿ ಕೆ.ಜಿಗೆ 90,600 ರೂ. ಇತ್ತು. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 650 ರೂ. ಏರಿಕೆಯಾಗಿ, 78,800 ರೂ.ಗೆ ತಲುಪಿದೆ. ನ. 26ರಂದು 1,250 ರೂ. ಇಳಿದು 10 ಗ್ರಾಂಗೆ 78,150 ರೂ.ಗೆ ತಲುಪಿತ್ತು. ಸ್ಟ್ಯಾಂಡರ್ಡ್ ಚಿನ್ನದ (ಶೇ.99.5 ಶುದ್ಧತೆ) ಬೆಲೆಯು 950 ರೂ. ಏರಿಕೆಯಾಗಿದ್ದು, 78,700 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
* ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನದ ಶೇ.2.25 ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ನ. 27 ರಂದು ಆದೇಶ ಹೊರಡಿಸಿದೆ. ಇದರಿಂದ ವಾರ್ಷಿಕ 1000 ಕೋಟಿ ರೂ. ಹೆಚ್ಚುವರಿ ಲಾಭ ನೌಕರರಿಗೆ ಸಿಗಲಿದೆ. 2024ರ ಆಗಸ್ಟ್ 1ರಿಂದಲೇ ಆರ್ಥಿಕ ಲಾಭ ನೌಕರರಿಗೆ ಪೂರ್ವಾನ್ವಯವಾಗಿ ಸಿಗಲಿದೆ. ನೌಕರರ ಮೂಲವೇತನದ ಶೇ.8.50ರಿಂದ ಶೇ.10.75ಕ್ಕೆ ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಹಾಲಿ ಹಾಗೂ ನಿವೃತ್ತ ನೌಕರರಿಗೆ ಇದರ ಲಾಭ ಲಭ್ಯವಾಗಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ನೌಕರರ ಡಿಎ ಹೆಚ್ಚಳ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
* ನಿರುದ್ಯೋಗಿಗಳಿಗೆ ಭರ್ಜರಿ ಗಿಫ್ಟ್!
ನವದೆಹಲಿ: ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ಆರು ತಿಂಗಳಲ್ಲಿ ತಂತ್ರಜ್ಞಾನ ವ್ಯಾಪಕವಾಗಿ ವೃದ್ಧಿಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳು ಶೇಕಡ 10ರಿಂದ 12ರಷ್ಟು ಹೆಚ್ಚಲಿವೆ ಎಂದು ಕ್ವೆಸ್ ಕ್ರಾಪ್ ಸಂಸ್ಥೆಯ ವರದಿ ತಿಳಿಸಿದೆ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಅನಾಲಿಟಿಕ್ಸ್, ಸೈಬರ್ ಸುರಕ್ಷತೆ, ಕೌಡ್ ಕ್ಷೇತ್ರದಲ್ಲಿ ಬೆಳವಣಿಗೆ ಆಗಲಿದ್ದು, ಉದ್ಯೋಗಾವಕಾಶ ಹೆಚ್ಚಲಿದೆ. ಅವುಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇರಲಿದ್ದು, ನಂತರದ ಸ್ಥಾನಗಳನ್ನು ಹೈದರಾಬಾದ್ ಮತ್ತು ಪುಣೆ ಪಡೆಯಲಿವೆ ಎಂದು ವರದಿ ಹೇಳಿದೆ. ಜನರೇಟಿವ್ ಎಐ, ಡೀಪ್ ಟೇಕ್ ಮತ್ತು ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಗಳು ವೃದ್ಧಿ ಕಾಣಲಿವೆ. ಇದರಿಂದಾಗಿ, 2030ರೊಳಗೆ 10 ಲಕ್ಷ ಉದ್ಯೋಗ ಸೃಜಿಸಲಿದೆ. ಭಾರತದಲ್ಲಿನ ಪ್ರತಿಭೆಗಳು ಹೆಚ್ಚಿನ ಅವಕಾಶ ಪಡೆದುಕೊಳ್ಳಲಿದ್ದು, ಮಾಹಿತಿ-ತಂತ್ರಜ್ಞಾನ ರಂಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ವರದಿ ವಿವರಿಸಿದೆ.