ರಾಜ್ಯದಲ್ಲಿ ವಿಚಿತ್ರವಾಗಿ ಹರಡುತ್ತಿರುವ ವಖ್ಫ್ ಬೋರ್ಡ್ ವೈರಸ್!
– ಹಿಂದೂ ರಾಷ್ಟ್ರಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ
– ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ ನೆನಪಾಗುತ್ತೆ
– ನಂದಿತಾ ಅತ್ಯಾಚಾರ ಕೊಲೆ ಹಿಂದೆ ಭಯೋತ್ಪಾದಕರು!
NAMMUR EXPRESS NEWS
ತೀರ್ಥಹಳ್ಳಿ: ಚಿನ್ಮಯ ಕೃಷ್ಣದಾಸ್ ಸೇರಿ ಬಾಂಗ್ಲಾದಲ್ಲಿ ಪ್ರಮುಖರನ್ನು ಬಂಧನ ಮಾಡಿರುವುದನ್ನು ನಾವು ಖಂಡಿಸುತ್ತೇವೆ. ಇತ್ತೀಚಿಗೆ ನಡೆದ ಬಾಂಗ್ಲಾದೇಶದ ಗಲಭೆ ಹಿನ್ನಲೆಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಹಿಂದೂ ದೇವಸ್ಥಾನ, ಹಿಂದೂ ಹೆಣ್ಣು ಮಕ್ಕಳನ್ನು, ನಾಗರೀಕರನ್ನು ಕೊಲೆ, ಅತ್ಯಾಚಾರ ಜೊತೆಗೆ ದೇವಸ್ಥಾನಗಳನ್ನು ನಾಶ ಮಾಡಲಾಯಿತು.ಆ ಹಿನ್ನಲೆಯಲ್ಲಿ ಹಿಂದೂ ದೌರ್ಜನ್ಯ ತಡೆಯಲು ಶಾಂತಿ ರೀತಿಯಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಿನ್ಮಯ ಕೃಷ್ಣದಾಸ್ ಅವರನ್ನು ಬಂಧನ ಮಾಡಲಾಗಿದೆ.
ಇದು ಅಕ್ಷಮ್ಯ ಅಪರಾಧ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮತಾಲಿಕ್ ಹೇಳಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಒಂದು ಭಯೋತ್ಪಾದಕ ಕೇಂದ್ರವಾಗುತ್ತಿದೆ. ಇದನ್ನು ಕಡಿವಾಣ ಹಾಕುವ ದೃಷ್ಟಿಯಲ್ಲಿ ಜೊತೆಗೆ ದೇಶದಲ್ಲಿ ಹಿಂದೂಗಳಿಗೆ ದೌರ್ಜನ್ಯ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಿದೆ. ಹಿಂದೂ ರಾಷ್ಟ್ರಕ್ಕಾಗಿ ಶ್ರೀ ರಾಮ ಸೇನೆ ಯಾವುದೇ ಹೋರಾಟಕ್ಕೆ ಸಿದ್ಧ ಎಂದರು.
* ಬಾಂಗ್ಲಾದೇಶ ಪಾಕಿಸ್ತಾನದ ಜೊತೆಗೆ ಸೇರಿ ನರಳುತ್ತಿದ್ದ ದೇಶ!
ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಹಿಂದೂ ವಿರೋಧಿ ಚಟುವಟಿಕೆ ನಡೆಯುತ್ತಿರುವುದು ಗೋಚರವಾಗುತ್ತಿದೆ. ಬಾಂಗ್ಲಾದೇಶ ಹುಟ್ಟಿದ್ದೇ ಭಾರತದಿಂದ. ಭಾರತವೇ ಬಾಂಗ್ಲಾದೇಶಕ್ಕೆ ಜನ್ಮ ನೀಡಿರುವುದು. ಪಾಕಿಸ್ತಾನದ ಜೊತೆಗೆ ಸೇರಿ ನರಳುತ್ತಿದ್ದ ದೇಶ ಇದಾಗಿತ್ತು, ಆದರೆ ಉಪಕಾರ ಸ್ಮರಣೆಯೂ ಇಲ್ಲದೆ ಇಂದು ಭಾರತದ ವಿರುದ್ಧ ಹಿಂದೂಗಳ ವಿರುದ್ಧ ನಡೆಸುತ್ತಿರುವುದು ಅತ್ಯಂತ ಕ್ರೌರ್ಯ. ಇಸ್ಲಾಮಿನ ಮೂಲ ಇವರ ಗುಣವನ್ನು ಹೊರಗಡೆದಬ್ಬಿದ್ದಾರೆ ಎಂದು ಹೇಳಿದರು.
ಇವರಿಗೆ ಸಾಕಷ್ಟು ಗಲಭೆ ಗಳಲ್ಲಿ ಇಸ್ಕೊಂ ದೇವಸ್ಥಾನ ಸಹಾಯಕವಾಗಿ ನಿಂತಿದೆ. ಅಂತಹ ಇಸ್ಕೊಂ ದೇವಸ್ಥಾನದ ಮೇಲೆ ದಾಳಿಯನ್ನು ಮಾಡಿ ಊಟ ಹಾಕಿದ ಆಶ್ರಯ ಕೊಟ್ಟ ಸ್ಮರಣೆಯೇ ಇವರಿಗಿಲ್ಲ. ಇದು ಇವರ ಮೂಲ ಗುಣ, ಎಲ್ಲರನ್ನು ನುಂಗುವ ಗುಣ ಇದನ್ನು ಬಾಂಗ್ಲಾದೇಶ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಇವತ್ತಿನವರೆಗೂ ಊಟ ನೀಡಿರುವ ಈ ದೇವಾಲಯ, ಇಂದು ಕೃಷ್ಣದಾಸ್ ಅವರ ಬಂಧನಕ್ಕೆ ನೇರವಾಗಿ ಭಾರತೀಯರೇ ಗುರಿ ಇದು ಭಾರತವನ್ನು ಕೆಣಕುತ್ತಿದೆ. ಉಗ್ರರ ಬಗ್ಗೆ ನಕ್ಸಲರ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಪಕ್ಕದಲ್ಲೇ ಇರುವ ಬಾಂಗ್ಲಾರ ಬಗ್ಗೆ ಏಕೆ ನಿರ್ಲಕ್ಷ ಮಾಡುತ್ತಿದ್ದೀರಿ? ಅದರ ದುಷ್ಪರಿಣಾಮ ಈ ಭಾರತ ದೇಶದ ಮುಸ್ಲಿಂರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಪರಿಹಾರವಾಗಿ ಹಿಂದೂ ಬಾಂಗ್ಲಾ ನಿರ್ಮಾಣ ಮಾಡಬೇಕು. ಆಗ ಮಾತ್ರ ಶಾಂತಿ ನಿರ್ಮಾಣ ಸಾಧ್ಯ ಎಂದರು.
* ವಿಚಿತ್ರವಾಗಿ ಹರಡುತ್ತಿರುವ ವಕ್ಫು ಬೋರ್ಡ್ ವೈರಸ್!
ವಕ್ಫು ಬೋರ್ಡ್ ಬಗ್ಗೆ ಮಾತನಾಡಿ ಇವರು ವಕ್ಫು ಎನ್ನುವುದು ನೋಟಿಸಿನ ಪ್ರಶ್ನೆಯಲ್ಲ, ಬಹು ಅಪಾಯಕಾರಿ ಕಾನೂನು. ಇದಕ್ಕೆ ಮಹಾನ್ ಶಕ್ತಿ ನೀಡಿದವರು ಕಾಂಗ್ರೇಸ್ ವಕ್ಫು ಎಂದರೆ ಅಲ್ಲಾ ನಿಗೆ ದಾನ ನೀಡುವ ಭೂಮಿ ಕಟ್ಟಡ ಅಥವಾ ಯಾವುದೇ ಆಸ್ತಿ, ಆದರೆ ಇದರಲ್ಲಿ ಯಾವುದೇ ದಾಖಲೆಗಳಿಲ್ಲ ಮುಸ್ಲಿಂ ಮತಗಳಿಗೋಸ್ಕರ ಈ ರೀತಿಯ ಭಯಾನಕ ಗಂಡಾಂತರ ದೇಶಕ್ಕೆ ಬರುವುದೇ ವಕ್ಫು ಬೋರ್ಡ್ ಆಗಿದೆ ಎಂದರು. ಸಿ ಎಂ ಅವರು ಅದೇಶ ಮಾಡಿದ್ದೀನಿ ಎಂದರೂ ಕೂಡ ಈ ಕ್ರಿಯೆ ನಿರಂತರ ನಡೆಯುತ್ತಲೇ ಇದೆ ಹಾಗಾದ್ರೆ “ನಿಮ್ಮ ಅದೇಶಕ್ಕೆ ಬೆಲೆ ಇಲ್ಲವೇ”? ಎಂದು ಪ್ರಶ್ನಿಸಿದರು.
ಈ ವಕ್ಫು ಬೋರ್ಡ್ ದಲಿತರು, ದೇವಸ್ಥಾನ, ಗರಡಿ ಮನೆಗಳನ್ನೂ, ಸರ್ಕಾರ ಜಮೀನು ಸರ್ಕಾರ ಕಟ್ಟಡಗಳನ್ನು ಬಿಟ್ಟಿಲ್ಲ, ಕಚೇರಿ, ಸರ್ಕಾರ ಆಸ್ಪತ್ರೆಗಳನ್ನೂ ಬಿಟ್ಟಿಲ್ಲ ಹೀಗೆ ವಿಚಿತ್ರವಾಗಿ ವಕ್ಫು ಬೋರ್ಡ್ ವೈರಸ್ ಹರಡುತ್ತಿದೆ. ಕೇಂದ್ರ ಸರ್ಕಾರ ಇದನ್ನು ತಡಿಯಬೇಕು
ಇವತ್ತಿನ ರಾಜಕಾರಣಿಗಳು ಎರಡು ಲಕ್ಷ ಮೂವತ್ತು ಸಾವಿರ ಕೋಟಿ ಬೆಲೆಯ ವಕ್ಫು ಬೋರ್ಡ್ ಅಧೀಕೃತವಾದ ಜಮೀನು ಕಟ್ಟಡಗಳನ್ನು ನುಂಗಿದ್ದಾರೆ. ಕಬಳಿಸುವ ರಾಜಕಾರಣಿಗಳಿಗೆ ಯಾವುದೇ ನೋಟಿಸ್ ಹೋಗಿಲ್ಲ. ಹೀಗೆ ಇಡೀ ಸಮಾಜವನ್ನು ವ್ಯಾಪಿಸಿರುವ ಇದಕ್ಕೆ ತಡೆ ಒಡ್ಡಲೇಬೇಕು ಎಂದು ಹೇಳಿದರು.
* ನಂದಿತಾ ಅತ್ಯಾಚಾರ ಕೊಲೆ ಹಿಂದೆ ಭಯೋತ್ಪಾದಕರು ಇದ್ದಾರೆ!.
ಭಯೋತ್ಪಾದನೆಯ ಬಗ್ಗೆ ಮಾತನಾಡಿದ ಇವರು ಎರಡು ಭಯೋತ್ಪಾದನೆ ಘಟನೆಗಳು ವಿಶೇಷವಾಗಿ ಗಮನ ಸೆಳೆದಿರುವುದು ಒಂದು ಕುಕ್ಕರ್ ಬ್ಲಾಸ್ಟ್, ರಾಮೇಶ್ವರ್ ಕೆಫೆ ಈ ಎರಡು ಕೃತ್ಯಗಳ ಮೂಲ ವ್ಯಕ್ತಿ ತೀರ್ಥಹಳ್ಳಿಯವರು. ನಂದಿತಾ ಅತ್ಯಾಚಾರ ಕೊಲೆ ಹಿಂದೆ ಭಯೋತ್ಪಾದಕರು ಇದ್ದಾರೆ ಎಂದರು.
* ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ ನೆನಪಾಗುತ್ತೆ!
ಬಿಜೆಪಿಯವರು ಶೋಕಿಗಾಗಿ ಕೇಸರಿ ಶಾಲು ಧರಿಸಿ ಹಿಂದುತ್ವ ಮೆರೆಯುತ್ತಾರೆ. ಇವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಹಿಂದೂ ಪರ ಎಂದು ತೋರಿಸಿಕೊಳ್ಳುವುದು, ಹಿಂದೂಗಳಿಗೆ ಕಷ್ಟ ಬಂದಾಗ ಸ್ಪಂದಿಸಬೇಕು ಸೇವೆ ಮಾಡಬೇಕು, ಈ ರೀತಿ ಕಾರ್ಯಕ್ರಮಗಳು ನಡೆಯಬೇಕು ಆಗ ಮಾತ್ರ ಉಳಿವು ಸಾಧ್ಯ ಎಂದು ಹೇಳಿದರು. ರಾಜ್ಯ ದಕ್ಷಿಣ ಲವ್ ಜೀಹಾದ್ ಪ್ರಮುಖ್ ಹಾಗೂ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಸುಂದ್ರೇಶ್ ನರಗಲ್, ರಾಜ್ಯ ಪ್ರಮುಖರಾದ ಶಶಿಕಾಂತ್ ಅತ್ತಿಕೊಡಿಗೆ,ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ತೀರ್ಥಹಳ್ಳಿ ಕ್ಷೇತ್ರ ಯಶಸ್ವಿ ಕಡ್ತೂರು ಉಪಸ್ಥಿತರಿದ್ದರು.