ಮೋಸ ಆಗಿಲ್ಲ… ಸುಳ್ಳು ಹೇಳಿದ್ರೆ ರಾಮೇಶ್ವರ ನೋಡಿಕೊಳ್ತಾನೆ!
– ದಸರಾ ಸಮಿತಿಯಲ್ಲಿ ಯಾವುದೇ ವಂಚನೆ ನಡೆದಿಲ್ಲ: ಸಂದೇಶ್ ಜವಳಿ
– ಅಧಿಕಾರ ಸಿಗದೆ ಸುಳ್ಳು ಆರೋಪ: ನೀರಿನಿಂದ ಹೊರಗೆ ಎಸೆದ ಮೀನಿನ ರೀತಿ ವಿಶ್ವನಾಥ ಶೆಟ್ಟಿ ಆಗಿದ್ದಾರೆ
* ರಾಮೇಶ್ವರ ಜೀರ್ಣೋದ್ದಾರ ಸಮಿತಿ ಮೇಲಿನ ಆರೋಪ ಸುಳ್ಳು: ಸೊಪ್ಪುಗುಡ್ಡೆ ರಾಘವೇಂದ್ರ
NAMMUR EXPRESS NEWS
ತೀರ್ಥಹಳ್ಳಿ: ದಸರಾ ಸಮಿತಿಯ ಖರ್ಚು ವೆಚ್ಚದಲ್ಲಿ ಯಾವುದೇ ಮೋಸ ಆಗಿಲ್ಲ… ಸುಳ್ಳು ಹೇಳಿದ್ರೆ ರಾಮೇಶ್ವರ ನೋಡಿಕೊಳ್ತಾನೆ ಎಂದು ದಸರಾ ಉತ್ಸವ ಸಮಿತಿ ಸಂಚಾಲಕರಾದ ಸಂದೇಶ್ ಜವಳಿ ಹೇಳಿದ್ದಾರೆ.
ತೀರ್ಥಹಳ್ಳಿಯ ಮಯೂರ ಹೋಟೆಲ್ ಸಭಾಂಗಣದಲ್ಲಿ ಡಿ. 2ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವನಾಥ ಶೆಟ್ಟಿ ಅವರು ಅಧಿಕಾರ ಸಿಗದ ಕಾರಣಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನೀರಿನಿಂದ ಹೊರಗೆ ಎಸೆದೆ ಮೀನಿನ ರೀತಿ ವಿಶ್ವನಾಥ ಶೆಟ್ಟಿ ಆಗಿದ್ದಾರೆ ಎಂದರು.
ಖರ್ಚು ವೆಚ್ಚದ ಮಾಹಿತಿ ನೀಡಿದ ಸಮಿತಿ
ಶ್ರೀ ರಾಮೇಶ್ವರ ದಸರಾ ಉತ್ಸವ ಸಮಿತಿಯ ಖರ್ಚು ಜಮಾ ವಿವರಗಳ ಮಾಹಿತಿಯನ್ನು ನೀಡಿ ಮಾತನಾಡಿದ ಅವರು ದಸರಾ ಉತ್ಸವದಲ್ಲಿ ಧಾರ್ಮಿಕ ಸಮಿತಿಯ ಪರವಾಗಿ ಒಟ್ಟು 61,650ರೂ., ಸಾಂಸ್ಕೃತಿಕ ಸಮಿತಿ ಖರ್ಚು 1,52,965ರೂ. ಗಳು, ಮೆರವಣಿಗೆ ಸಮಿತಿಯ ಖರ್ಚು ಒಟ್ಟು 2,55,000ರೂ. ಗಳು, ಸ್ಥಬ್ಧ ಚಿತ್ರ ಸಮಿತಿ ಪರವಾಗಿ ಒಟ್ಟು 11,5000ರೂ. ಗಳು, ವಿಶಾಲವಾದ ವೇದಿಕೆಗೆ ಸಂಬಂಧಪಟ್ಟಂತೇ ಒಟ್ಟು 2,71,660ರೂ.ಖರ್ಚುಗಳು, ಊಟೋಪಚಾರ ಮತ್ತು ಉಪಹಾರದ ಒಟ್ಟು ಖರ್ಚು 89,500ರೂ. ಗಳು, ಪ್ರಚಾರ ಸಮಿತಿಗೆ ಒಟ್ಟು 87,372ರೂ. ಖರ್ಚು ಮತ್ತು ಇತರೆ 95,000 ಖರ್ಚುಗಳಾಗಿದೆ.
ಒಟ್ಟು 12,90,736.65 ಜಮಾ ಆಗಿರುವ ಮೊತ್ತ ಮತ್ತು 1,62,589.65 ರೂ ಉಳಿತಾಯವಾಗಿದ್ದು ಕರ್ನಾಟಕ ಗ್ರಾಮೀಣ ಬ್ಯಾಂಕ್ ದಸರಾ ಉತ್ಸವ ಸಮಿತಿ ತಹಶೀಲ್ದಾರ್ ಖಾತೆಯಲ್ಲಿ ಇರಿಸಲಾಗಿದೆ ಎಂದು ದಾಖಲೆಗಳನ್ನು ನೀಡುವ ಮೂಲಕ ಮಾಹಿತಿ ನೀಡಿದರು.
ಆರ್ಥಿಕ ಸಮಿತಿ ಸಂಚಾಲಕರು, ಮತ್ತು ಸಂಚಾಲಕರ ಜಂಟಿ ನಿರ್ವಹಣೆಯಲ್ಲಿ ಖಾತೆ ಬಳಕೆ!
ಪಾರದರ್ಶಕವಾಗಿ ಕಳೆದ ಐದಾರು ವರ್ಷಗಳಿಂದ ದಸರಾ ಉತ್ಸವ ಸಮಿತಿ ವಹಿವಾಟು ನಿರ್ವಹಿಸುತ್ತಾ ಬಂದಿದ್ದು, ಉಳಿದಿರುವ ಹಣವನ್ನು ಗ್ರಾಮೀಣ ಬ್ಯಾಂಕ್ ಖಾತೆ ದಸರಾ ಉತ್ಸವ ಸಮಿತಿ ತಹಶೀಲ್ದಾರರ ಖಾತೆಯಲ್ಲಿ ಇರಿಸಲಾಗಿದೆ.
ವಿಶ್ವನಾಥ ಶೆಟ್ಟಿ ಅವರು ಸಂದೇಶ್ ಜವಳಿ ಮತ್ತು ಸೊಪ್ಪುಗುಡ್ಡೆ ರಾಘವೇಂದ್ರ ಅವರು ತಮ್ಮ ವೈಯಕ್ತಿಕ ಖಾತೆಗಳಿಗೆ ಹಣವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪಗಳನ್ನು ನೀಡಿದ್ದಾರೆ ಇದರ ಬಗ್ಗೆ ಮಾತಾನಾಡಿದ ಅವರು ಯಾವುದೇ ಕಾರಣಗಳಿಗೂ ವೈಯಕ್ತಿಕ ಖಾತೆಗಳಿಗೆ ಹಣವನ್ನು ಜಮಾ ಮಾಡಿಕೊಂಡಿಲ್ಲ ಎಂದು ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಿದ್ದೇವೆ. ಈಗಲೂ ಈ ಖಾತೆ ದಸರಾ ಉತ್ಸವ ಸಮಿತಿ ತಹಸಿಲ್ದಾರ್ ಎಂಬ ಹೆಸರಿನಲ್ಲಿದೆ. ಅದೇ ಖಾತೆಯಿಂದ ಹಣ ವರ್ಗಾವಣೆ ವ್ಯವಹಾರ ನಡೆದಿದೆ. ನಿಯಮ ಪ್ರಕಾರ ಆರ್ಥಿಕ ಸಮಿತಿ ಸಂಚಾಲಕರು, ಮತ್ತು ಸಂಚಾಲಕರ ಜಂಟಿ ನಿರ್ವಹಣೆಯಲ್ಲಿ ಆ ಖಾತೆ ಬಳಕೆಯಾಗಿದೆ. ಇದಿಷ್ಟು ಹೊರತುಪಡಿಸಿ ಯಾವುದೇ ರೀತಿಯಲ್ಲಿ ಹಣದ ದುರುಪಯೋಗ ಆಗಿಲ್ಲ. ಕೆಲವರು ಸುಳ್ಳು ಹರಡಿಸಿದ್ದಾರೆ ಎಂದು ಹೇಳಿದರು.
ನೀರಿನಿಂದ ಹೊರಗೆ ಎಸೆದ ಮೀನಿನ ರೀತಿ ವಿಶ್ವನಾಥ ಶೆಟ್ಟಿ ಚಡಪಡಿಸುತ್ತಿದ್ದಾರೆ!
ನೀರಿನಲ್ಲಿರುವ ಮೀನ ಹೊರಗೆ ಎಸದರೆ ಯಾವ ರೀತಿ ಚಡಪಡಿಸುತ್ತದೆಯೋ ಅದೇ ರೀತಿ ಅವರು ಚಡಪಡಿಸುತ್ತಿದ್ದಾರೆ. ಯಾವುದೇ ಸಮಿತಿಯಲ್ಲಿ ಅಧಿಕಾರ ಸಿಗುತ್ತಿಲ್ಲ, ಇಷ್ಟು ಸಮಯ ದಸರಾ ಸಮಿತಿ ಅಧಿಕಾರ ಮಾಡಿದ್ದಾರೆ.. ಆದರೆ ಈ ಬಾರಿ ಸಂಚಾಲಕರಾಗಿ ವಿಶ್ವನಾಥ ಶೆಟ್ಟಿಯವರಾಗಲಿ ಎಂದು ಅವರ ಹೆಸರನ್ನು ಯಾರೂ ನಮೂದಿಸಿಲ್ಲ. ಅವರಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೂರು ದಿನವು ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಎಲ್ಲೆಡೆ ಜನ ಸೇರಿದ್ದರು ಎಂದರು.
ಸಮನ್ವಯತೆಗೆ ಸಮಸ್ಯೆ ಇರುವುದು ವಿಶ್ವನಾಥ ಶೆಟ್ಟಿಯವರದ್ದು ಮಾತ್ರ!
ದಸರಾ ಉತ್ಸವ ಸಮಿತಿಯಲ್ಲಿ ಸಮನ್ವಯತೆಗೆ ಸಮಸ್ಯೆ ಇರುವುದು ವಿಶ್ವನಾಥ ಶೆಟ್ಟಿಯವರದ್ದು ಮಾತ್ರ. ನಾವೂ ಪ್ರತಿಯೊಂದು ವರ್ಷ ಅನ್ಯೋನ್ಯತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ ಇದು ಒಂದು ಪಕ್ಷದ ವೇದಿಕೆ ಎಂದು ಟೀಕೆ ಮಾಡುವುದೂ ಸರಿಯಲ್ಲ. ತೆಪ್ಪೋತ್ಸವ ಸಂಭ್ರಮದಲ್ಲೂ ಸಮನ್ವಯತೆಗೆ ನಮ್ಮಲ್ಲಿ ಕಡಿಮೆಯಿಲ್ಲ ನಮ್ಮ ಜೊತೆಗೆ ಎಲ್ಲಾ ಪಕ್ಷದವರು ಕೆಲಸ ಮಾಡಿದ್ದಾರೆ. ಸಮಸ್ಯೆ ಪಕ್ಷದಲ್ಲ ಅಲ್ಲವೇ ಅಲ್ಲ.. ಸಮಸ್ಯೆ ವಿಶ್ವನಾಥ ಶೆಟ್ಟಿ ಅಷ್ಟೇ ಎಂದು ವಿಶ್ವನಾಥ ಶೆಟ್ಟಿಯವರ ಟೀಕೆಗೆ ಉತ್ತರಿಸಿದರು.
ಲೆಕ್ಕಾಚಾರದಲ್ಲಿ ಮೋಸವಿದ್ದರೆ ರಾಮೇಶ್ವರ ಸ್ವಾಮಿಯೇ ನೋಡಿಕೊಳ್ಳುತ್ತಾರೆ!
ಪಾರದರ್ಶಕವಾಗಿ ಲೆಕ್ಕ ಕೊಡದಿದ್ದರೆ ಮಾತ್ರ ಸಮಸ್ಯೆ ಉಂಟಾಗುತ್ತದೆ.ಹತ್ತು ವರ್ಷ ವಿಶ್ವನಾಥ ಶೆಟ್ಟಿಯವರು ದಸರಾ ಸಮಿತಿಯಲ್ಲಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದೀರಿ ಎಷ್ಟು ವರ್ಷ ಪಾರದರ್ಶಕವಾಗಿ ಲೆಕ್ಕ ಕೊಟ್ಟಿದ್ದೀರಾ?? ಎಂದು ಪ್ರಶ್ನಿಸಿದರು. ಒಂದು ವರ್ಷವಾದರೂ ನಯಪೈಸೆ ಉಳಿಸಿದ್ದೀರಾ? ಸರಿಯಾದ ವ್ಯವಸ್ಥೆಯಾದರೂ ಮಾಡಿದ್ದೀರಾ? ಕಾರ್ಯಕ್ರಮ ಮಾಡಿದವರಿಗೆ ಸರಿಯಾದ ರೀತಿಯಲ್ಲಿ ಹಣ ಜಮಾ ಮಾಡಿದ್ದೀರಾ?ನೀವೂ ದಾಖಲೆಯನ್ನು ನೀಡಿ!. ಯಾವ ದಿನ ಎಷ್ಟು ಹೇಗೆ ಸಂಗ್ರಹಣೆ ಮಾಡಿದ್ದೀವಿ ಎಂಬ ದಿನ ಲೆಕ್ಕದ ಮಾಹಿತಿ ದಾಖಲೆಗಳು ನನ್ನಲ್ಲಿದೆ.
ವಿಶ್ವನಾಥ ಶೆಟ್ಟಿಯವರು ಮಾಡಿರುವ ಆಪಾಧನೆಯನ್ನು ಸಾಬೀತುಪಡಿಸಬೇಕು ಇದು ಸಾಮಾನ್ಯ ಉತ್ಸವವಲ್ಲ ರಾಮೇಶ್ವರ ದೇವರ ಉತ್ಸವ ಇದರಲ್ಲಿ ಏನಾದರೂ ಮೋಸವಿದ್ದರೆ ರಾಮೇಶ್ವರ ಸ್ವಾಮಿಯೇ ನೋಡಿಕೊಳ್ಳುತ್ತಾರೆ.ವಿಶ್ವನಾಥ ಶೆಟ್ಟಿಯವರು ಇದನ್ನು ಸಾಬೀತುಪಡಿಸಿದರೆ ನಾನು ಈ ಪ್ರಪಂಚದಲ್ಲೇ ಇರುವುದಿಲ್ಲ ಎಂದು ಸವಾಲು ಹಾಕಿದರು.
ಮುಖವಾಡ ಮೋಸ ಆಗಿಲ್ಲ!
ರಾಮೇಶ್ವರ ದೇವರ ಜೀರ್ಣೋದ್ದಾರ ವೇಳೆ ದಾನಿಗಳು ಮುಖವಾಡಕ್ಕಾಗಿ 5 ಲಕ್ಷ ನೀಡಿದ್ದರು. ಆ ಹಣವನ್ನು ದೇವಸ್ಥಾನ ಅಭಿವೃದ್ಧಿಗೆ ಬಳಕೆ ಮಾಡಿದ್ದೇವೆ. ಅಂದಿನ ತಹಸೀಲ್ದಾರ್ ನೇತೃತ್ವದಲ್ಲಿ ಈ ನಿರ್ಧಾರ ಮಾಡಲಾಗಿದೆ. ಸರ್ಕಾರದ ಹಣ ಬಿಡುಗಡೆ ಆಗಿಲ್ಲ. ಹಾಗಾಗಿ ಆ ಹಣವನ್ನು ಅಭಿವೃದ್ಧಿಗೆ ಬಳಸಿದ್ದೇವೆ. ಸರ್ಕಾರದ ಹಣ ಬಿಡುಗಡೆ ಬಳಿಕ ಮುಖವಾಡವನ್ನು ದಾನಿಗಳ ಕೈಯಲ್ಲೇ ಅರ್ಪಣೆ ಮಾಡಿಸಲಾಗುವುದು ಎಂದು ಸೊಪ್ಪುಗುಡ್ಡೆ ರಾಘವೇಂದ್ರ ಇದೇ ವೇಳೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಸರಾ ಆರ್ಥಿಕ ಸಮಿತಿಯ ಸಂಚಾಲಕರು ಸೊಪ್ಪುಗುಡ್ಡೆ ರಾಘವೇಂದ್ರ, ಡಾನ್ ರಾಮಣ್ಣ, ಜಯಪ್ರಕಾಶ್ ಶೆಟ್ಟಿ, ಜಯರಾಮ್ ಶೆಟ್ಟಿ, ಸುರಭಿ ಕಿಶೋರ್, ನಯನ ಜಯಪ್ರಕಾಶ್,ಜ್ಯೋತಿ ಗಣೇಶ್, ಜ್ಯೋತಿ ದಿಲೀಪ್, ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.