ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ
– ಹೀರೋ ಆಗಲಿಲ್ಲ ಎಂದು ಹೊಳೆಗೆ ಹಾರಿದ..!
– ತೀರ್ಥಹಳ್ಳಿ ಯುವಕನ ಆತ್ಮಹತ್ಯೆ: ಮನೆಯಲ್ಲಿ ಶೋಕ
– ಭದ್ರಾವತಿ: ದೇವರ ದರ್ಶನ ಹೋಗಿದ್ದ ಮನೆಗೆ ಕನ್ನ
– ಶಿವಮೊಗ್ಗ: ನಟ ದರ್ಶನ್ ಕೇಸ್: ಜೈಲಿಂದ ಆರೋಪಿ ರಿಲೀಸ್!
– ಶಿವಮೊಗ್ಗ : ಲಾಡ್ಜ್ ಮೇಲೆ ಪೊಲೀಸರ ದಾಳಿ: ಕೇಸ್ ದಾಖಲು
– ಶಿವಮೊಗ್ಗ : ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಹೊಳೆಗೆ ಹಾರಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪದವಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಧ್ರುವ ಹೆಗ್ಡೆ (20) ಬುಧವಾರ ವಾರಳಿ ಸಮೀಪದಲ್ಲಿ ಮಾಲತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರತಿಭಾವಂತನ ಹುಡುಗನ ದುರಂತ ಅಂತ್ಯ!
ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ವಾರಳಿ ಗ್ರಾಮದ ದಿನೇಶ್ ಹೆಗ್ಡೆ ಎಂಬುವವರ ಪುತ್ರ ಈತ ಪ್ರತಿಭಾವಂತನಾಗಿದ್ದು, ಕ್ರೀಡೆ ಮತ್ತು ಓದಿನಲ್ಲಿ ಬುದ್ಧಿವಂತನಾಗಿದ್ದ. ನಾಲ್ಕು ದಿನಗಳಿಂದ ಕಾಲೇಜಿಗೆ ಬಂದಿರಲಿಲ್ಲ. ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಧ್ರುವ ಹೆಗ್ಡೆ, ಚಲನಚಿತ್ರದಲ್ಲಿ ಅಭಿನಯಿಸುವ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ. ಆದರೆ ಆತನಿಗೆ ತನಗೆ ಅವಕಾಶ ಸಿಗುತ್ತಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ. ಅಲ್ಲದೆ ಯಾವುದೋ ಸಿನಿಮಾ ಹೀರೋ ಆಗುವ ಹುಚ್ಚು ಯುವಕನನ್ನು ಬಲಿ ಪಡೆದಿದೆ. ಮನೆಯಲ್ಲಿ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳನ್ನು ನೋಡಿ ಯುವ ಜನತೆ ಹಾದಿ ತಪ್ಪುತ್ತಿರುವುದು
ಭದ್ರಾವತಿ : ಆಂಧ್ರದ ಶ್ರೀ ಶೈಲದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ನಿವೃತ್ತ ಪ್ರಾಂಶುಪಾಲರೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಭದ್ರಾವತಿ ಹೊಸಮನೆಯ ಕೇಶವಾಪುರ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಮನೆಯವರೆಲ್ಲ ಶೀಶೈಲಕ್ಕೆ ತೆರಳಿ ಹಿಂತಿರುಗಿದಾಗ ಮನೆಯ ಬಾಗಿಲಿನ ಇಂಟರ್ ಲಾಕ್ ಮುರಿದು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಕಬೋರ್ಡ್ ಮತ್ತು ಬೀರುವಿನಲ್ಲಿಟ್ಟಿದ್ದ 15 ಸಾವಿರ ರೂ. ನಗದು, 87 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟು 4.35 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಮನೆ ಮಾಲೀಕ ಗೋಪಾಲ ರಾವ್ ದೂರಿನಲ್ಲಿ ತಿಳಿಸಿದ್ದಾರೆ. ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ: ನಟ ದರ್ಶನ್ ಕೇಸ್ ಜೈಲಿನಿಂದ ಆರೋಪಿ ರಿಲೀಸ್
ಶಿವಮೊಗ್ಗ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಜಗದೀಶ್ ಅಲಿಯಾಸ್ ಜಗ್ಗು ಇವತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ. ಶೂರಿಟಿ ಸಿಗುವುದು ವಿಳಂಬವಾದ ಹಿನ್ನೆಲೆ ಒಂದು ದಿನ ತಡವಾಗಿ ಜೈಲಿನಿಂದ ಹೊರ ಬಂದಿದ್ದಾನೆ. ಆತನನ್ನು ಕರೆದೊಯ್ಯಲು ಕುಟುಂಬದವರು ಜೈಲು ಬಳಿ ಆಗಮಿಸಿದ್ದರು. ಜಗದೀಶ ಚಿತ್ರದುರ್ಗದಲ್ಲಿ ಆಟೋ ಚಾಲಕನಾಗಿದ್ದ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದ ತಂಡದಲ್ಲಿದ್ದ. ಹಾಗಾಗಿ ಪ್ರಕರಣದಲ್ಲಿ ಜಗದೀಶ್ 6ನೇ ಆರೋಪಿಯಾಗಿದ್ದ ಪರಪ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ಆರೋಪದ ಹಿನ್ನೆಲೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿತ್ತು. ಆಗಸ್ಟ್ 29ರಂದು ಆರೋಪಿಗಳಾದ ಜಗದೀಶ ಮತ್ತು ಲಕ್ಷ್ಮಣನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ನ್ಯಾಯಾಲಯ ಜಾಮೀನು ಪ್ರಕಟಿಸಿದ ಹಿನ್ನೆಲೆ ಡಿ.17ರಂದು ಲಕ್ಷ್ಮಣ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದ. ಶೂರಿಟಿ ಸಿಗುವುದು ತಡವಾದ ಹಿನ್ನೆಲೆ ಜಗದೀಶ್ ಇವತ್ತು ರಿಲೀಸ್ ಆಗಿದ್ದಾನೆ.
– ಶಿವಮೊಗ್ಗ : ಲಾಡ್ಜ್ ಮೇಲೆ ಪೊಲೀಸರ ದಾಳಿ ಅನೇಕ ವಿರುದ್ದ ಕೇಸ್ ದಾಖಲು
ಶಿವಮೊಗ್ಗ : ಲಾಡ್ಜ್ವೊಂದ ಮೇಲೆ ಪೊಲೀಸರು ದಾಳಿ ನಡೆಸಿ ಅಂದರ್ ಬಾಹರ್ ಆಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್ನ ಕೊಠಡಿ ಸಂಖ್ಯೆ 303ರಲ್ಲಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹನ್ನೊಂದು ಮಂದಿಯನ್ನು ವಶಕ್ಕೆ ಪಡೆದು ಕೇಸ್ ದಾಖಲೊಸಿದ್ದಾರೆ. ದೊಡ್ಡಪೇಟೆ ಠಾಣೆ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಗಳ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
– ಶಿವಮೊಗ್ಗ : ಕಾಲೇಜಿನಲ್ಲಿ ದಿಡೀರ್ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
ಶಿವಮೊಗ್ಗ : ಕಾಲೇಜಿನಲ್ಲಿಯೇ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ನಂಜಪ್ಪ ಲೇ ಔಟ್ ನಲ್ಲಿರುವ ಖಾಸಗಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಮೂರ್ಛೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಕಾಲೇಜಿನಲ್ಲಿ ಇದ್ದಕ್ಕಿದ್ದ ಹಾಗೆ ಅಸ್ವಸ್ಥಗೊಂಡು ಪ್ರಿನ್ಸಿಫಾಲರ ರೂಮ್ನ ಬಾಗಿಲಲ್ಲಿಯೇ ವಿದ್ಯಾರ್ಥಿನಿ ಕುಸಿದುಬಿದ್ದಿದ್ದಳು. ತಕ್ಷಣವೇ ಅಲ್ಲಿಂದ ಕಾರೊಂದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿನಿ ಓದಿದ್ದ ಹೈಸ್ಕೂಲಿನ ಶಿಕ್ಷಕರು ಕಾಲೇಜಿಗೆ ಬಂದಿದ್ದರು. ಅವರನ್ನು ಮಾತನಾಡಿಸಲು ತೆರಳುತ್ತಿದ್ದ ವೇಳೆ ಲೋ ಬಿಪಿಯಿಂದ ಕುಸಿದು ಬಿದ್ದಿದ್ದಾಳೆ. ಈ ದೃಶ್ಯ ಕಾಲೇಜಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.