ರಾಜ್ಯದಲ್ಲೇ ಗಮನ ಸೆಳೆದ ವೆನ್ಲಾಕ್ ಆಸ್ಪತ್ರೆ!
– ಅಂಗಾಂಗ ಕಸಿ ಪ್ರಥಮ ಪ್ರಯೋಗ ಯಶಸ್ವಿ
– ಮಂಗಳೂರಿನ 176 ವರ್ಷಗಳ ಇತಿಹಾಸದಲ್ಲೇ ಮೊದಲು
– ಇಬ್ಬರಿಗೆ ಕಣ್ಣು, ಒಬ್ಬರಿಗೆ ಲಿವರ್ ದಾನ ನೀಡಿದ ಮಹಿಳೆ
– ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದ ವೈದ್ಯರು
NAMMUR EXPRESS NEWS
ಮಂಗಳೂರು: ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಇದೀಗ ತನ್ನ ಸೇವೆ ಮೂಲಕ ರಾಜ್ಯದಲ್ಲೆ ಗಮನ ಸೆಳೆದಿದೆ. ಈ ನಡುವೆ 176 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಮೆದುಳಿನ ರಕ್ತಸ್ರಾವದಿಂದ ಮೆದುಳು ನಿಷ್ಕ್ರಿಯಗೊಂಡಿರುವ ಮಹಿಳೆಯ ಲಿವರ್, ಕಣ್ಣಿನ ಕಾರ್ನಿಯಾವನ್ನು ಮೂವರಿಗೆ ದಾನ ಮಾಡಿದ್ದು, ವೆನ್ಲಾಕ್ ಕಾರ್ಯವೈಖರಿಯನ್ನು ವೈದ್ಯರು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಮೆಚ್ಚುಗೆ: ಹಾಸನ ಮೆಡಿಕಲ್ ಕಾಲೇಜು, ಮಂಡ್ಯ ಸರಕಾರಿ ಆಸ್ಪತ್ರೆ, ಬಳ್ಳಾರಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದೇನೆ. ಅದಕ್ಕೆಲ್ಲ ಹೋಲಿಸಿದರೆ ವೆನ್ಲಾಕ್ ಸರಕಾರಿ ಆಸ್ಪತ್ರೆ ಸೂಪರ್. ಇಲ್ಲಿ ಚಿಕಿತ್ಸೆ ಪಡೆಯುವವರು ಆದೃಷ್ಟವಂತರು,” ಎಂದು ಅಂಗಾಂಗ ಕಸಿ ಮಾಡಲು ಬಂದಿದ್ದ ಬೆಂಗಳೂರು ಬಿಜಿಎಸ್ ಅಪೋಲೊ ಆಸ್ಪತ್ರೆಯ ಸಿ ಕಂಸಲ್ಟೆಂಟ್ ಸರ್ಜಿಕಲ್ ಗ್ಯಾಸ್ಟ್ರೋನ್ಟೆರೊಲಜಿಸ್ಟ್ ಲಿವರ್ ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ.ರಾಜೇಗೌಡ ಎ.ಎಸ್ ಸೇವೆಯನ್ನು ಹೊಗಳಿದ್ದಾರೆ.
ಏನಿದು ಪ್ರಕರಣ?
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಶಿವಮೊಗ್ಗ ಶಾಂತಿನಗರ ನಿವಾಸಿ ರೇಖಾ ಪಿ. ಅವರ ಲಿವರನ್ನು ಮೈಸೂರಿನ ಆಸ್ಪತ್ರೆಯಲ್ಲಿ ಬೆಂಗಳೂರಿನ ರೋಗಿಗೆ ಕಸಿ ಮಾಡಿದ್ದು ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ. ವೆಂಟಿಲೇಟರ್, ಟ್ಯೂಬ್ ತೆಗೆದಿದ್ದು, ರೋಗಿ ಬೆಳಗ್ಗೆ ಕಾಫಿ, ತಿಂಡಿ ಸೇವಿಸಿದರು.ವಾರ್ಡ್ಗೆ ಶಿಫ್ಟ್ ಮಾಡಿ, ಒಂದು ವಾರದಲ್ಲಿ ಮನೆಗೆ ಕಳುಹಿಸುತ್ತೇವೆ ಎಂದಿದ್ದಾರೆ. ಅವರ ಹೊಸ ಬದುಕಿಗೆ ರೇಖಾ ಅವರ ಕುಟುಂಬದ ಮಹಾದಾನದ ಜೊತೆ ನೆರವಾದುದು ವೆನ್ಲಾಕ್ ಆಸ್ಪತ್ರೆ ಎಂದು ಡಾ.ರಾಜೇಗೌಡ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು. ಇಲ್ಲಿನ ಇಲ್ಲಾ ವೈದ್ಯರ ಸೇವೆ ಮತ್ತು ಕಾಳಜಿ ಇದೀಗ ಮತ್ತಷ್ಟು ಸುದ್ದಿ ಮಾಡಿದೆ. ಬಡವರಿಗೆ ಉತ್ತಮ ಅರೋಗ್ಯ ಸೇವೆ ನೀಡುವ ವೆನ್ಲಾಕ್ ಆಸ್ಪತ್ರೆಗೆ ಸರ್ಕಾರ, ದಾನಿಗಳು, ಎನ್ ಜಿ ಓಗಳು, ಕಾರ್ಪೋರೇಟ್ ಸಂಸ್ಥೆಗಳು ಅಭಿವೃದ್ಧಿಗೆ ಕೈಜೋಡಿಸಬೇಕಿದೆ.