ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಜಾತ್ರೆ ಆರಂಭ!
– ಸುತ್ತು ಬಲಿ, ಪಾಲಕಿ ಉತ್ಸವ ಬೈದರ್ಕಳ ದರ್ಶನ
– ಬೈದರ್ಕಳ ಕಾಲಾವಧಿ ನೇಮೋತ್ಸವ: ಸರ್ವರಿಗೂ ಸ್ವಾಗತ
NAMMUR EXPRESS NEWS
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಅಥವಾ ಗರೋಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಂಗಳೂರಿನಲ್ಲಿ ತುಳುನಾಡು ಪ್ರದೇಶದ ಅವಳಿ ಸಾಂಸ್ಕೃತಿಕ ವೀರರಾದ ಕೋಟಿ ಮತ್ತು ಚೆನ್ನಯ್ಯ ಮಂಗಳೂರಿನ ಪ್ರಸಿದ್ಧ ದೇವಾಲಯವಾಗಿದೆ . ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಅದ್ದೂರಿ ಜಾತ್ರೆ ಆರಂಭವಾಗಿದೆ.
ಬೈದರ್ಕಳ ನೇಮೋತ್ಸವ!
ಉತ್ಸವ ಅದ್ದೂರಿಯಾಗಿ ಜರುಗಿದ್ದು, ಜಾತ್ರೆಯೊಂದಿಗೆ ಕಾಲಾವಧಿ ನೆಮೋತ್ಸವವೂ ನಡೆಯುತ್ತಿದೆ. ಬೈದರ್ಕಳರು ಬಾಲಪರಮೇಶ್ವರಿ ದೇವಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿ ಬಲಿ, ಶ್ರೀ ದೇಯಿ ಬೈದೆತಿ ನೇಮೋತ್ಸವ, ಕೋಟಿ ಚೆನ್ನಯ ಹಾಗೂ ದೇಯಿ ಬೈದೆತಿ ಭೇಟಿ, ಗಣಪತಿ ದೇವರ ಮತ್ತು ಬ್ರಹ್ಮರ ಪಾಲಕಿ ಬಲಿ, ಬೈದರ್ಕಳ ದರ್ಶನ ಆಗಿ ಸುರಿಯ ಹಾಕಲಿಕ್ಕೆ ಮತ್ತು ಅವಧೂತ ಕಟ್ಟೆಯಲ್ಲಿ ಮಹಾತ್ಮರಿಗೆ ಪೂಜೆ, ನಂತರ ಬೈದರ್ಕಳ ಜಾತ್ರೆ ಆರಂಭವಾಗಿದೆ.