ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ತೀರ್ಥಹಳ್ಳಿ ಮಕ್ಕಳು ಆಯ್ಕೆ!
– ತೀರ್ಥಹಳ್ಳಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪ್ರಾಮಾಣಿಕ ಪ್ರಯತ್ನದ ಫಲ
– ಕವನ ಗೋಷ್ಠಿ,,ಕಥಾಗೋಷ್ಠಿ, ಮತ್ತು ಪ್ರಬಂಧ ಗೋಷ್ಠಿಯಲ್ಲಿ , ರಾಜ್ಯಮಟ್ಟಕ್ಕೆ ಆಯ್ಕೆ
– ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆಗಳು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪ್ರಾಮಾಣಿಕ ಪ್ರಯತ್ನದ ಫಲವಾಗಿ 8 ಮಕ್ಕಳು ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾಗಿರುತ್ತಾರೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 2024 ನವೆಂಬರ್ ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ ಮಂಜುನಾಥ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಟಿ ರಮೇಶ ಶೆಟ್ಟಿ ಇವರ ನೇತೃತ್ವದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯನ್ನು ರಚಿಸಲಾಗಿದ್ದು , ರೇಣುಕಾ ಹೆಗಡೆ.(ಅಧ್ಯಕ್ಷರು) ಮತ್ತು ಲೀಲಾವತಿ ಎಸ್ (ಕಾರ್ಯದರ್ಶಿಗಳು) ಇವರ ಮುಂದಾಳತ್ವದಲ್ಲಿ ಸುಮಾರು 50 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಈ ಸಂಘಟನೆಯ ಅಡಿಯಲ್ಲಿ ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಡಿಯಲ್ಲಿ ಈವರೆಗೆ ಎರಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆಯೋಜಿಸಿ ಮಕ್ಕಳಲ್ಲಿ ಅಡಗಿರುವ ಕಾವ್ಯ ರಚನೆ, ಕಥೆ ಹೇಳುವ ಸಾಮರ್ಥ್ಯ ಹಾಗೂ ಪ್ರಬಂಧ ರಚನೆ ಮತ್ತು ಮಂಡನೆಗೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ಆಯೋಜಿಸಿ, ತಾಲೂಕು ಮಟ್ಟದ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸಿ ಇಲ್ಲಿ ಆಯ್ಕೆಯಾದ ಮಕ್ಕಳನ್ನು ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಕಳುಹಿಸಲಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕಳೆದ ಬಾರಿ ತಾಲೂಕಿನ ನಾಲ್ಕು ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಬಾರಿ ಜ. 13ರಂದು ಶಿವಮೊಗ್ಗದ ರಾಮಕೃಷ್ಣ ಆಶ್ರಮ ಶಾಲೆ ಅನುಪಿನ ಕಟ್ಟೆ ಇಲ್ಲಿ ನಡೆದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು ಎಂಟು ಮಕ್ಕಳು ಕವನ ಗೋಷ್ಠಿ,,ಕಥಾಗೋಷ್ಠಿ, ಮತ್ತು ಪ್ರಬಂಧ ಗೋಷ್ಠಿಯಲ್ಲಿ , ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ತಾಲೂಕಿನ ಸಾಹಿತ್ಯ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ಈ ಬಾರಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವು ಜನವರಿ 16ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಡೆಯಲಿದ್ದು ಅದರಲ್ಲಿ ಭಾಗವಹಿಸುವ ತೀರ್ಥಹಳ್ಳಿ ತಾಲೂಕಿನ ಮಕ್ಕಳ ವಿವರ ಈ ಕೆಳಗಿನಂತಿದೆ. ಈ ಎಲ್ಲ ಮಕ್ಕಳಿಗೂ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಶುಭ ಹಾರೈಸುತ್ತದೆ.
* ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆಗಳು!
ಕವನ ಗೋಷ್ಠಿ
ಸೃಷ್ಟಿ ಎಂ. ಎನ್
ಸ. ಹಿ. ಪ್ರಾ. ಶಾಲೆ ಹೆದ್ದೂರ್ ತೀರ್ಥಹಳ್ಳಿ (ತಾ )
*ಆತ್ಮಿ ಎ.ಪೈ
6 ನೇ ತರಗತಿ
ಸ. ಹಿ. ಪ್ರಾ. ಶಾಲೆ ಬೆಜ್ಜವಳ್ಳಿ
ಸಾನಿಕಾ ಕೆ. ವಿ
ರಾಷ್ಟೀಯ ಪ್ರೌಢ ಶಾಲೆ ಕೋಣಂದೂರು
ಕಥಾಗೋಷ್ಠಿ
ಅಮೂಲ್ಯ ಎಂ. ಯು
ದ್ವಿತೀಯ ಪಿಯುಸಿ
ವಾಗ್ದೇವಿ ಪಿ. ಯು ಕಾಲೇಜು ತೀರ್ಥಹಳ್ಳಿ
ಜನ್ಯಾ ಡಿ. ಎಂ
8 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಆರಗ
ಪ್ರಬಂಧ ಗೋಷ್ಠಿ
ವಂಶಿಕ್ ಪ್ರಭು
7 ನೇ ತರಗತಿ
ಸ. ಹಿ. ಪ್ರಾ. ಶಾಲೆ ಹೊದಲ
ಶ್ರೇಯ
6ನೇ ತರಗತಿ
ಸ. ಹಿ. ಪ್ರಾ. ಶಾಲೆ ಹಾರೋಗೊಳಿಗೆ
ಅನಿತಾ
ಕುವೆಂಪು ಮಾ. ಹಿ. ಪ್ರಾ. ಶಾಲೆ ತೀರ್ಥಹಳ್ಳಿ
ಈ ಎಲ್ಲಾ ಮಕ್ಕಳಿಗೂ ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಭ ಆರೈಕೆಗಳು