ಟಾಪ್ 4 ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಹುಡುಗಿ ನೋಡಲು ಬಂದ ಇಂಜಿನಿಯರ್ ಗೆ ಖಾಸಗಿ ಬಸ್ ಡಿಕ್ಕಿ !
– ತೀರ್ಥಹಳ್ಳಿ : ನಾಲೂರು ಬಳಿ ಕೋಳಿ ಲಾರಿಯೊಂದು ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು
– ಹೊಸನಗರ : ಬೀದಿ ನಾಯಿ ಕೊಂದ ವ್ಯಕ್ತಿ ಬಂಧನ
– ಶಿವಮೊಗ್ಗ : ಮದುವೆ ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳವು
NAMMUR EXPRESS NEWS
ಶಿವಮೊಗ್ಗ : ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಚಿನ್ನಮನೆ ಗ್ರಾಮದ ಬಳಿಯಲ್ಲಿ ನಡೆದಿದೆ. ರಿಪ್ಪನ್ಪೇಟೆ ಕಡೆಯಿಂದ ತೆರಳುತಿದ್ದ ಗಜಾನನ (ಚಕ್ರಾ) ಬಸ್ ಹಾಗೂ ಆಯನೂರು ಕಡೆಯಿಂದ ರಿಪ್ಪನ್ಪೇಟೆ ಕಡೆಗೆ ತೆರಳುತಿದ್ದ ಬೈಕ್ (KA 14 EG 6503) ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಂಜಿನಿಯರ್ ಮುಗಿಸಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹುಡುಗಿ ನೋಡಲು ಊರಿಗೆ ಬಂದಿದ್ದರು. ಊರಿಗೆ ಬಂದವನಿಗೆ ದುರ್ಘಟನೆ ಸಂಭವಿಸಿದೆ.
– ತೀರ್ಥಹಳ್ಳಿ : ನಾಲೂರು ಬಳಿ ಕೋಳಿ ಲಾರಿಯೊಂದು ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು
ತೀರ್ಥಹಳ್ಳಿ : ತಾಲೂಕಿನ ನಾಲೂರು ಮುಖ್ಯರಸ್ತೆಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಬೈಕ್ ಸವಾರ ಗಣೇಶ್ ನಾಯ್ಕ್ (24) ಎಂಬಾತನಿಗೆ ಕೋಳಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಣೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬೈಕ್ ಸವಾರನು ಹಗರಿಬೊಮ್ಮನಹಳ್ಳಿಯವನು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮೃತದೇಹವನ್ನು ಜೆಸಿ ಆಸ್ಪತ್ರೆಗೆ ರವಾನಿಸಲಾಗಿದ್ದು,ಕುಟುಂಬದವರು ಮೃತದೇಹವನ್ನು ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಆಗುಂಬೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಫಾರೆನ್ಸಿಕ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅನುಮಾನಾಸ್ಪದ ಕೋಳಿ ಲಾರಿಯ ಚಹರೆ ಕಂಡು ಹಿಡಿಯುವಲ್ಲಿ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಕ್ಕಿ ಹೊಡೆದ ವಾಹನ ಯಾವುದು ಎಂಬ ಮಾಹಿತಿ ಬರಬೇಕಿದೆ.
– ಹೊಸನಗರ : ಬೀದಿ ನಾಯಿ ಕೊಂದ ವ್ಯಕ್ತಿ ಬಂಧನ
ಹೊಸನಗರ : ಬೀದಿ ನಾಯಿಯನ್ನು ಅಮಾನುಷವಾಗಿ ಕೊಂದು, ಲಗೇಜ್ ಆಟೋದ ಹಿಂಬದಿ ಕಟ್ಟಿ ಕೊಂಡೊಯ್ದ ವ್ಯಕ್ತಿಯನ್ನು, ಹೊಸನಗರ ತಾಲೂಕು ರಿಪ್ಪನ್’ಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಆಟೋ ಚಾಲಕ ವಾಜೀದ್ (40) ಬಂಧಿತ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಆಪಾದಿತನ ವಿರುದ್ದ ಭಾರತೀಯ ನ್ಯಾಯ ಸಂಹಿತೆ (ಬಿ ಎನ್ ಎಸ್ ಕಾಯ್ದೆ) 325 ಕಲಂ ಅಡಿ ಪ್ರಕರಣ ದಾಖಲಿಸಿದ್ದಾರೆ. ತದನಂತರ ನಿಯಮಾನುಸಾರ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ. ರಿಪ್ಪನ್’ಪೇಟೆ ಠಾಣೆ ಸಬ್ ಇನ್ಸ್’ಪೆಕ್ಟರ್ ಪ್ರವೀಣ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
– ಶಿವಮೊಗ್ಗ : ಮದುವೆ ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳವು
ಶಿವಮೊಗ್ಗ : ಮದುವೆ ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಯಲ್ಲಿದ್ದ ಪೆಂಡೆಂಟ್ ಇರುವ 12 ಗ್ರಾಂ ಚಿನ್ನಾಭರಣಗಳನ್ನ ಕಳುವು ಮಾಡಿರುವ ಘಟನೆ ವರದಿಯಾಗಿದೆ. ಜ. 04 ರಂದು ಶಿವಮೊಗ್ಗ ಮುರಾದ್ ನಗರದ ಕಲ್ಯಾಣ ಮಂದಿರದಲ್ಲಿ ಸಂಬಂಧಿಕರ ಮದುವೆ ಇದ್ದುದರಿಂದ ಮಂಗಳೂರಿನಿಂದ ಮಹಿಳೆಯೊಬ್ಬರು ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಶಿವಮೊಗ್ಗಕ್ಕೆ ಬಂದು ಮದುವೆ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಊಟ ಮುಗಿಸಿಕೊಂಡು ಮದುವೆ ಮಂಟಪದ ಹತ್ತಿರ ಮಕ್ಕಳೊಂದಿಗೆ ಮಹಿಳೆಯ 7 ವರ್ಷದ ಮಗಳು ಆಟ ಆಡುತ್ತಿದ್ದರಿಂದ ಮಹಿಳೆ ಮದ್ಯಾಹ್ನ 01-30 ಗಂಟೆಗೆ ಊಟಕ್ಕೆ ಹೋಗಿದ್ದು, ಊಟ ಮುಗಿಸಿಕೊಂಡು ಮದ್ಯಾಹ್ನ 02-30 ಗಂಟೆಗೆ ಬಂದಾಗ ಮಗಳು ಕೂದಲ ಜುಟ್ಟು ಬಿಚ್ಚಿಕೊಂಡು ಆಟ ಆಡುತ್ತಿದ್ದನ್ನ ತಾಯಿ ಗಮನಿಸಿದ್ದಾಳೆ. ಮಗಳನ್ನು ಕರೆದು ನೋಡಿದಾಗ ಮಗಳ ಕೊರಳಿನಲ್ಲಿದ್ದ ಸುಮಾರು 90,000/-ರೂ ಬೆಲೆಬಾಳುವ 12 ಗ್ರಾಂ ತೂಕದ ಬಂಗಾರದ ಸರ & ಪೆಂಡೆಂಟ್ ಇರುವ ಸರ ಇರಲಿಲ್ಲ. ಈ ಬಗ್ಗೆ ಮಗಳಿಗೆ ಕೇಳಿದಾಗ ಯಾರೋ ಇಬ್ಬರು ಮಹಿಳೆಯವರು ಮಂಟಪದ ಡ್ರೆಸಿಂಗ್ ರೂಮ್ ಗೆ ಕರೆದುಕೊಂಡು ಹೋಗಿ ರೂಮ್ ನಲ್ಲಿ ಮಗಳ ಕೊರಳಿನಲ್ಲಿದ್ದ ಬಂಗಾರದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಗಂಡನಿಗೆ ಹಡಗಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದು, ತುರ್ತು ಕೆಲಸಕ್ಕೆ ಹೋಗಬೇಕಾಗಿದ್ದರಿಂದ ಮಂಗಳೂರಿಗೆ ಹೋಗಿದ್ದು, ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ. ಕ್ರೌನ್ ಪ್ಯಾಲೇಸ್ ನಲ್ಲಿ ಈ ಘಟನೆ ನಡೆದಿದ್ದು ನಹೀಲಾ ಬಾನು ದೂರು ನೀಡಿದ್ದಾರೆ.