ಕಾರ್ಕಳ: ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಅಗುಂಬೆ ಘಾಟಿ ವ್ಯಾಪ್ತಿಯಲ್ಲಿ ಸುರಂಗ ನಿರ್ಮಾಣ ಕಾರ್ಯ ವೊ ಅಥವಾ ಮುಖ್ಯ ರಸ್ತೆ ಅಗಲಿಕರಣವೊ ಎಂಬುದು ಇನ್ನೂ ಅಂತಿಮ ವಾಗಿಲ್ಲ. ಕೇಂದ್ರ ಸಾರಿಗೆ ಮಂತ್ರಾಲಯ ದಿಂದ ಅಧ್ಯಯನ ನಡೆಸಿದ ಬಳಿಕ ಸುರಂಗ ಮಾರ್ಗ ವೊ ರಸ್ತೆ ಅಗಲೀಕರಣ ವೊ ಎಂಬುದು ಅಂತಿಮ ವಾಗಲಿದೆ. ಪರಿಸರ ಹಾಗು ಭೂಸ್ವರೂಪದ ಅಧ್ಯಯನಕ್ಕಾಗಿ ಜನವರಿ ಫೆಬ್ರವರಿ ತಿಂಗಳಿನಲ್ಲಿ ಉನ್ನತಮಟ್ಟದ ತಾಂತ್ರಿಕ ಅಧ್ಯಯನ ತಂಡವು ಬೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕಳೆದ ವರ್ಷ 2024ರಲ್ಲಿ ರಸ್ತೆ ಅಗಲೀಕರಣ ಕ್ಕಾಗಿ ಪೂರ್ವ ಸಿದ್ದತ ಯೋಜನಾ ವರದಿ ತಯಾರಿಗಾಗಿ ಟೆಂಡರ್ ಕರೆದಿದ್ದರು ಏಜೆನ್ಸಿ ಗಳು ಸ್ಪರ್ಧಿಸಿದ್ದರೂ ಫಲಿತಾಂಶ ನೀಡುವಲ್ಲಿ ಯು ವಿಫಲವಾಗಿದೆ ಎನ್ನಲಾಗಿದೆ. ಪೂರ್ವ ಸಿದ್ದತ ಯೋಜನಾ ವರದಿ ತಯಾರಿಗಾಗಿ ಸುಮಾರು 2 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಸುರಂಗ ವೋ /ಹೆದ್ದಾರಿ ಅಗಲೀಕರಣವೋ| ;;
ಆಗುಂಬೆ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 169 ಎ ಯು ಪ್ರಸ್ತುತ ಹೆದ್ದಾರಿಯು 3.5 ಮೀಟರ್ ಅಗಲವಿದೆ. ಬೃಹತ್ ಪ್ರಮಾಣದ ವಾಹನಗಳು ಸಂಚರಿಸಬೇಕಾದರೆ ಒಟ್ಟು 10 ಮೀಟರ್ ಅಗಲೀಕರಣ ವಾಗಬೇಕು ಸೋಮೇಶ್ವರ ಪೇಟೆಯಿಂದ ಆಗುಂಬೆ ವರೆಗೆ ಹದಿನಾಲ್ಕು ತಿರುವುಗಳಿದ್ದು ಸೋಮೇಶ್ವರ ದಿಂದ ಆಗುಂಬೆ ವರೆಗೆ ಸುಮಾರು ಹದಿನೈದು ಕಿಮೀ ದೂರವಿದೆ. ಅದರಲ್ಲೂ ಕಳೆದ ವರ್ಷ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗ ಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುರಂಗ ಮಾರ್ಗದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಮೇಗರವಳ್ಳಿಯಿಂದ ಉಡುಪಿ ಜಿಲ್ಲೆಯ ನಾಡ್ಪಾಲು ಗ್ರಾಮದ ಸೋಮೇಶ್ವರ ವರೆಗೆ ಸುಮಾರು12 ಕಿಮೀ ಸುರಂಗ ಮಾರ್ಗ ನಿರ್ಮಾಣ ಬಗ್ಗೆ ಪ್ರಸ್ತಾವನೆಯು ಸಲ್ಲಿಸಲಾಗಿತ್ತು. ಆದರೆ ಸೂಕ್ಷ್ಮ ಪರಿಸರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಯಾವುದು ಅಂತಿಮ ಗೊಂಡಿಲ್ಲ.ಹೆಬ್ರಿ .ಆಗುಂಬೆ ಘಾಟಿ ಅಗಲೀಕರಣದ ಸೇರಿದಂತೆ ಒಟ್ಟು 21 ಕಿಮೀ ಉದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ನಡೆಯಲಿದೆ. ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ಎನ್ ಎಚ್ 66 ರಾಷ್ಟ್ರೀಯ ಹೆದ್ದಾರಿಯು ಮಲ್ಪೆ, ಉಡುಪಿ ಮಣಿಪಾಲ, ಹಿರಿಯಡ್ಕ ಪೆರ್ಡೂರು , ಹೆಬ್ರಿ ಸೋಮೇಶ್ವರ ಅಗುಂಬೆ ಮಾರ್ಗವಾಗಿ ಶಿವಮೊಗ್ಗ ಮೂಲಕ ಮೊಣಕಾಲ್ಮೂರು ಸಂಪರ್ಕಿಸುತ್ತದೆ.. .
ಪರಿಸರ ಸೂಕ್ಷ್ಮವಲಯ ಕ್ಕೆ ಧಕ್ಕೆ :
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಸೋಮೇಶ್ವರ ಅಭಯಾರಣ್ಯ ವು ಪರಿಸರ ಸೂಕ್ಷ್ಮವಲಯವಾಗಿದೆ.ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶವು ಆಗುಂಬೆ ಗುರುತಿಸಿಕೊಂಡಿದೆ. ರಸ್ತೆ ಅಗಲೀಕರಣ ವಾದರೆ ಅಥವಾ ಸುರಂಗ ಮಾರ್ಗ ನಿರ್ಮಾಣ ವಾದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜೀವಜಂತುಗಳಿಗೆ ಅಪಾಯವು ಕಟ್ಟಿಟ್ಟ ಬುತ್ತಿ ಯಾಗಿದೆ,ಅದರಲ್ಲೂ ಭಾರಿ ಅಪರೂಪದ ಪಾರಂಪರಿಕ ಮರಗಳ ಮಾರಣಹೋಮ ವಾಗಬಹುದು.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಅಂಡ್ ನ್ಯಾಚುರಲ್ ರಿಸೋರ್ಸಸ್ (IUCN) ಮಾಹಿತಿ ಪ್ರಕಾರಅಗುಂಬೆಯ ಸೋಮೇಶ್ವರ ಅಭಯಾರಣ್ಯ ದಲ್ಲಿಪ್ಯಾಂಥೆರಾ ಟೈಗ್ರಿಸ್ (ಹುಲಿ), ಪ್ಯಾಂಥೆರಾ ಪಾರ್ಡಸ್ (ಸಾಮಾನ್ಯ ಚಿರತೆ), ಪ್ರಿಯೊನೈಲುರಸ್ ರುಬಿಗಿನೋಸಸ್ (ತುಕ್ಕು ಹಿಡಿದ ಚುಕ್ಕೆ ಬೆಕ್ಕು), ವಿವರ್ರಾ ಸಿವೆಟಿನಾ (ಮಲಬಾರ್ ಸಿವೆಟ್) ಸೇರಿದಂತೆ ಸಸ್ತನಿಗಳನ್ನು ಒಳಗೊಂಡಿದೆ. ಮೆಲುರ್ಸಸ್ ಉರ್ಸಿನಸ್ (ಸೋಮಾರಿತನ ಕರಡಿ). ಎಲಿಫಾಸ್ ಮ್ಯಾಕ್ಸಿಮಸ್ (ಏಷ್ಯನ್ ಆನೆ), ಬಾಸ್ ಗೌರಸ್ (ಗೌರ್), ಸೆರ್ವಸ್ ಯುನಿಕಲರ್ (ಸಾಂಬಾರ್), ಪೆಟಿನೊಮಿಸ್ ಉಸ್ಕೊಕಾಪಿಲಸ್ (ಸಣ್ಣ ಟ್ರಾವಂಕೂರ್ ಫ್ಲೈಯಿಂಗ್ ಅಳಿಲು), ರಟುಫಾ ಇಂಡಿಕಾ (ಭಾರತೀಯ ದೈತ್ಯ ಅಳಿಲು), ಮನಿಸ್ ಕ್ರಾಸಿಕೌಡಾಟಾ (ಭಾರತೀಯ ಲಾಲಾಟಾಕ್ಪಾಂಗೊಲಿನ್ಸ್ಯಾಲಾಟಾಕ್ಪಾಂಗೊಲಿನ್), , ಲುಟ್ರಾ ಲುಟ್ರಾ (ಸಾಮಾನ್ಯ ನೀರುನಾಯಿ), ಅನಾಕ್ಸಿ ಸಿನೆರಿಯಾ (ಕ್ಲಾ ಲೆಸ್ ಓಟರ್), ಇತ ಆಂಥ್ರಾಕೊಸೆರೋಸ್ ಕರೋನಾಟಸ್ (ಮಲಬಾರ್ ಪೈಡ್ ಹಾರ್ನ್ಬಿಲ್), ಬುಸೆರೋಸ್ ಬೈಕಾರ್ನಿಸ್ (ಗ್ರೇಟ್ ಹಾರ್ನ್ಬಿಲ್), ಇಚ್ಥಿಯೋಫಗಾ ಇಚ್ಥಿಯೇಟಸ್ (ಗ್ರೇ ಹೆಡೆಡ್ ಫಿಶ್ ಕ್ಯಾಗಲ್), ಅನ್ಹಿಂಗಾ ಮೆಲನೋಗಾಸ್ಟರ್ (ಡಾರ್ಟರ್), ಸಿಕೋನಿಯಾ ಎಪಿಸ್ಕೋಪಸ್ (ವೂಲಿ-ನೆಕ್ಡ್ ಕೊಕ್ಕರೆ) ಅಲ್ಬಿಕೌಡಾಟಾ (ನೀಲಗಿರಿ ಫ್ಲೈಕ್ಯಾಚರ್), ಇತ್ಯಾದಿ. ಮತ್ತು ಸರೀಸೃಪಗಳಾದ ಇಂಡೋಟೆಸ್ಟುಡೋ ಫಾರೆಸ್ಟೆನಿ (ಆಮೆ), ಜಿಯೋಚೆಲೋನ್ ಎಲಿಗಾನ್ಸ್ (ಇಂಡಿಯನ್ ಫ್ಲಾಪ್ ಶೆಲ್ ಟರ್ಟಲ್), ಕ್ರೊಕೊಡೈಲಸ್ ಪಲುಸ್ಟ್ರಿಸ್ (ಮೊಸಳೆಗಳು). ನಜಾ ನಜಾ (ಕನ್ನಡಕ ನಾಗರ). ಓಫಿಯೋಫಾಗಸ್ ಹನ್ನಾ (ಕಿಂಗ್ ಕೋಬ್ರಾ), ಮತ್ತು ಉಭಯಚರಗಳ ಆವಾಸಸ್ಥಾನವಾಗಿದೆ, ಅವುಗಳೆಂದರೆ, ಅನ್ಸೋನಿಯಾ ಅಲಂಕೃತ (ಮಲಬಾರ್ ಟೊರೆಂಟ್ ಟೋಡ್), ಬುಫೊ ಬೆಡ್ಡೋಮಿ (ಬೆಡ್ಡೋಮಿಸ್ ಟೋಡ್), ರಾಮನೆಲ್ಲಾ ಮೊಂಟಾನಾ (ಜೆರ್ಡಾನ್ನ ಕಿರಿದಾದ ಬಾಯಿಯ ಕಪ್ಪೆ), ಇಂದಿರಾನಾ ಫ್ರಾಗ್ಸ್ . ಲಿಮ್ನೊನೆಕ್ಟೆಸ್ ಲಿಮೋಚಾಲರ್ಸ್ (ಭಾರತೀಯ ಕ್ರಿಕೆಟ್ ಕಪ್ಪೆ), ಮೈಕ್ರಿಕ್ಸಾಲಸ್ ಸ್ಯಾಕ್ಸಿಕೋಲಸ್ (ಮಲಬಾರ್ ಟ್ರಾಪಿಕಲ್ ಫ್ರಾಗ್). Nyctibatrachus deccanensis (ಡೆಕ್ಕನ್ ರಾತ್ರಿ ಕಪ್ಪೆ, ಡೆಕ್ಕನ್ ಸುಕ್ಕುಗಟ್ಟಿದ ಕಪ್ಪೆ). Nyctibatrachus ಮೇಜರ್ (ಮಲಬಾರ್ ರಾತ್ರಿ ಕಪ್ಪೆ), Nyctibatrachus Santi palustris (ಕೂರ್ಗ್ ರಾತ್ರಿ ಕಪ್ಪೆ ಅಥವಾ ಪವಿತ್ರ ಜೌಗು ಸುಕ್ಕುಗಟ್ಟಿದ ಕಪ್ಪೆ). ರಾನಾ ಔರಾಂಟಿಯಾಕಾ (ತ್ರಿವೇಂಡ್ರಮ್ ಕಪ್ಪೆ, ಸಾಮಾನ್ಯ ಮರದ ಕಪ್ಪೆ), ರಾಣಾ ಟೆಂಪೊರಾಲಿಸ್ (ಕಂಚಿನ ಕಪ್ಪೆ ಅಥವಾ ಗುಂಥರ್ನ ಚಿನ್ನದ ಬೆನ್ನಿನ ಕಪ್ಪೆ), ಟೊಮೊಪ್ಟೆಮಾ ರುಫೆಸೆನ್ಸ್ (ರುಫೆಸೆಂಟ್ ಬರ್ರೋಯಿಂಗ್ ಕಪ್ಪೆ), ವಾಸಸ್ಥಾನ ವಾಗಿದೆ. ಇಲ್ಲಿ ಬಲು ಅಪರೂಪದ ಮರಗಳಾದ ಕ್ಯಾಲೋಫಿಲಮ್ ಅಪೆಟಲಮ್ (ಹೋಳಿ ಹೊನ್ನೆ), ಸಿನಮೋಮಮ್ ಸಲ್ಫುರಮ್ (ಡಾಲ್ಚಿನಿ), ಡಯೋಸ್ಪೈರೋಸ್ ಕ್ಯಾಂಡೋಲೆನಾ (ಕರಿ ಮರ), ಹೋಪಿಯಾ ಕ್ಯಾನರೆನ್ಸಿಸ್ (ಮಲೈ ಹೈಗಾ), ಹೋಪಿಯಾ ಪರ್ವಿಪ್ಲೋರಾ (ಹೋಪಿಯಾ ಪರ್ವಿಫ್ಲೋರಾ), ದೊಡ್ಡಲೆ ಬೋಗಿ). ವಂದ ಸ್ಪಾತುಲಾಟ (ಆರ್ಕಿಡ್), ಗಾರ್ಸಿನಿಯಾ ಇಂಡಿಕಾ (ಕೋಕಂ), ಹೈಡ್ನೋಕಾರ್ಪಸ್ ಪೆಂಟಂಡ್ರಾ (ಚಾಲ್ಮೊಗ್ರಾ ಯೆನ್ನೆ ಮಾರಾ, ಮಿರೊಲ್ಹಕೈ, ಸೂರ್ತಿ), ಕ್ನೆಮಾ ಅಟೆನ್ಯೂಯೇಟ್ (ರಕ್ತಮಾರಾ), ಇಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
ಕೋಟ್:
ಸುರಂಗ ಮಾರ್ಗ ವೊ ರಸ್ತೆ ಅಗಲೀಕರಣ ವೊ ಎಂಬುದು ಯಾವುದು ಅಂತಿಮವಾಗಿ ವಾಗಿಲ್ಲ.ಪೂರ್ವ ಸಿದ್ದತ ಯೋಜನಾ ವರದಿ ತಯಾರಿಗಾಗಿ ಟೆಂಡರ್ ಕರೆದಿದ್ದರು ಫಲಿತಾಂಶ ದಲ್ಲಿ ವಿಫಲತೆ ಕಂಡುಬಂದಿದೆ. ಈಗ ರಾಷ್ಟ್ರೀಯ ಕೇಂದ್ರ ಸಾರಿಗೆ ಮಂತ್ರಾಲಯ ದಿಂದ ಅಧ್ಯಯನ ನಡೆಸಿದ ಬಳಿಕ ಸುರಂಗ ಮಾರ್ಗ ವೊ ರಸ್ತೆ ಅಗಲೀಕರಣ ವೊ ಎಂಬುದು ಅಂತಿಮ ವಾಗಲಿದ್ದು ಮಂಜುನಾಥ್ ಎಂ ವಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತರರು ಸರಕಾರದ ಹಸಿರು ನಿಯಮದ ಪ್ರಕಾರ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಆಗಲಿ ಕರಣ ಮಾಡಿದರೆ ಇಂತಹ ಪರಿಸರ ನಾಶವಾಗುವುದನ್ನು ತಡೆಯುತ್ತದೆ. ಪರಿಸರ ಹಾಗೂ ಅಭಿವೃದ್ಧಿ ಸಮತೋಲನದಲ್ಲಿ ಕಾಪಾಡುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ.