- ಜೂನ್ ನಿಂದ ಸೆ.6 ವರೆಗೆ 103 ಸೆಂ. ಮೀ. ಮಳೆ, 1998ರ ಈ ಅವಧಿಯ ದಾಖಲೆ ನಿರುಪಾಲು
- ಮಳೆಗಾಲ ಮುಗಿಯಲು ಇನ್ನೂ ಎರಡು ತಿಂಗಳು
NAMMUR EXPRESS NEWS
ಬೆಂಗಳೂರು : ದೇಶದ ಐಟಿ ಕಾರಿಡಾರ್ ಎಂದು ಖ್ಯಾತಿವೆತ್ತ ಪ್ರದೇಶಗಳನ್ನು ಮುಳುಗಿಸಿ ಬಾರಿ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರಿನ ಮುಂಗಾರು ಮಳೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಸಾಗಿದೆ. ಜೂನ್ ನಿಂದ ಸೆಪ್ಟೆಂಬರ್ 7 ರವರೆಗೆ ಬೆಂಗಳೂರಿನಲ್ಲಿ 103 ಸೆಂ. ಮೀ. ಮಳೆಯಾಗಿದ್ದು ಇದು ಈ ಅವಧಿಯಲ್ಲಿ ರಾಜ್ಯ ರಾಜಧಾನಿಯ ಇತಿಹಾಸದಲ್ಲೇ ಗರಿಷ್ಠ ಅಲ್ಲದೆ, ಇಡೀ ಮುಂಗಾರು ಹಂಗಾಮಿನ ಸಾರ್ವಕಾಲಿಕ ದಾಖಲೆಯಾದ 144.93 ಸೆಂ. ಮೀ. ಕೂಡ ಈ ಬಾರಿ ಮುರಿದು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
1998ರಲ್ಲಿ ಜೂನ್ ನಿಂದ ಆಗಸ್ಟ್ವರೆಗೂ 91ಸೆಂ. ಮೀ ಮಳೆ ಆಗಿದ್ದು ಈವರೆಗಿನ ದಾಖಲೆ. ಈ ವರ್ಷ ಇದೆ ಅವಧಿಯಲ್ಲಿ 88 ಸೆಂ. ಮೀ ಮಳೆ ಆಗಿದೆ ಆದರೆ ನಂತರದ ಒಂದು ವಾರದಲ್ಲಿ ಈ ವರ್ಷದ ಸೆ.1 ರಿಂದ 6 ರ ವರೆಗೆ ಮತ್ತೆ 15 ಸೆಂ. ಮೀ. ಮಳೆಯಾಗಿದ್ದು ಇದು ಹಿಂದೆಂದಿಗಿಂತ ಹೆಚ್ಚು ಹಾಗಾಗಿ ಜೂನ್ ನಿಂದ ಸೆ.6 ಅವಧಿಯಲ್ಲಿ ಈ ಸಲ ಸಾರ್ವಕಾಲಿಕ ಮಳೆ ದಾಖಲಾಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.