- ಕ್ಷೇತ್ರಕ್ಕೆ ಹೆಚ್ಚು ಪರಿಹಾರ ನೀಡುವಂತೆ ಕೇಂದ್ರ, ರಾಜ್ಯ ಸರಕಾರಕ್ಕೆ ಪತ್ರ
- ಜನರ ನೋವಿಗೆ ದನಿಯಾದ ಸಿಂಪಲ್ ಶಾಸಕ ಟಿಡಿ ರಾಜೇಗೌಡ
NAMMUR EXPRESS NEWS
ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿನೀಡಲು ಆಗಮಿಸಿದ ಕೇಂದ್ರ ತಂಡದ ಸದಸ್ಯರನ್ನು
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಭೇಟಿ ಮಾಡಿ ಹೆಚ್ಚಿನ ಅನುದಾನ ನೀಡಲು ಶಿಫಾರಸು ಮಾಡುವಂತೆ ಮನವಿ ಮಾಡಿದರು.
ಮುಖ್ಯಸ್ಥರಾದ ಆಶೀಶ್ ಕುಮಾರ್, ಐ.ಎ.ಎಸ್, ಸರ್ಕಾರದ ಜಂಟಿ ಕಾರ್ಯದರ್ಶಿಗಳು ಶೃಂಗೇರಿ ಕ್ಷೇತ್ರದ ಅತಿವೃಷ್ಠಿಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮೀಣ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳು, ರಾಜ್ಯ ಮುಖ್ಯ ರಸ್ತೆಗಳು, ಕೆರೆಗಳು, ಕಟ್ಟಡಗಳನ್ನು ದುರಸ್ತಿ, ಪುನರ್ ನಿರ್ಮಾಣ ಮಾಡಲು ಕ್ಷೇತ್ರಕ್ಕೆ ಹೆಚ್ಚಿನ ಅನುದಾನದ ಅಗತ್ಯ ಇದೆ.
ಕ್ಷೇತ್ರದಲ್ಲಿ ಈ ಭಾರೀ ಸುರಿದ ಮಳೆಯಿಂದ ಮನೆಹಾನಿ, ಪ್ರಾಣ ಹಾನಿ, ಹಾಗೂ ಬೆಳೆ ಹಾನಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಫಿ, ಕಾಳು ಮೆಣಸು ಹಾಗೂ ಭತ್ತದ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಲು ಶಿಫಾರಸು ಮಾಡಬೇಕಾಗಿ ಕೇಂದ್ರ ತಂಡದವರಿಗೆ ರಾಜೇಗೌಡ ಮನವಿ ಪತ್ರ ನೀಡಿದರು.
ಕ್ಷೇತ್ರದಲ್ಲಿ ಸಂಚಾರ.. ಜನರ ನೋವಿಗೆ ದನಿ!
ಶೃಂಗೇರಿ ಶಾಸಕ ರಾಜೇಗೌಡ ಅವರು ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಕಳೆದ 3 ತಿಂಗಳಿಂದ ಭೇಟಿ ನೀಡಿ ನೊಂದ ಜನರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಬಾಳೆಹೊನ್ನೂರು ಹೋಬಳಿಯ ವಾಟುಕೊಡಿಗೆ ಸಿಕೆ ಮಧುಗುಣಿ ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದ್ದಾರೆ.