ಎಲೆ ಚುಕ್ಕಿ ರೋಗ: ರೈತರಿಗೆ ಪರಿಹಾರಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್
-ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ: ಸಚಿವರ ಸಭೆಯಲ್ಲಿ ಒಪ್ಪಿಗೆ
- ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಅನೇಕರ ಚರ್ಚೆ
- ಶಾಂತವೇರಿ ಗೋಪಾಲಗೌಡ ಶತಮಾನೋತ್ಸವಕ್ಕೆ 1 ಕೋಟಿ
NAMMUR EXPRESS NEWS
ಬೆಂಗಳೂರು: ಮಲೆನಾಡಿನಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ತೋಟಗಾರಿಕಾ ಸಚಿವರಾದ ಮುನಿರತ್ನ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
ಹಾನಿಗೊಳಗಾದ ರೈತರಿಗೆ ಆರ್ಥಿಕ ಪರಿಹಾರ, ರೋಗದ ಹತೋಟಿ, ಸುಧಾರಿತ ಧೋಟಿ ಪೂರೈಕೆ ಬಗ್ಗೆ ಚರ್ಚೆಯಾಯಿತು. ಬೆಳೆ ಹಾನಿ ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಈ ಸಮಸ್ಯೆ ಹತೋಟಿಗೆ ತರಲು ರೈತರಿಗೆ ಉಚಿತ ಔಷಧಿ ಹಾಗೂ ಇತರ ಸಹಾಯವನ್ನು ಸರ್ಕಾರದಿಂದ ನೀಡಲು ತೀರ್ಮಾನಿಸಲಾಗಿದೆ.
ಮೀನುಗಾರಿಕಾ ಸಚಿವರಾದ ಅಂಗಾರ, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿರಾಜೇಂದ್ರ ಕುಮಾರ್ ಕಟಾರಿಯ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದ ಬಗ್ಗೆ ಹೋರಾಟದ ಎಚ್ಚರಿಕೆ ಕೇಳಿ ಬಂದಿತ್ತು. ಜತೆಗೆ ರೈತರಲ್ಲಿ ಆತಂಕ ಎದುರಾಗಿತ್ತು. ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು ಆಗಿರುವ ಜ್ಞಾನೇಂದ್ರ ಅವರು ಈಗ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಅಡಕೆ ಬೆಳೆಯ ಎಲೆಚುಕ್ಕೆ ರೋಗ ಭಾದೆ ನಿಯಂತ್ರಿಸಲು ರೈತರಿಗೆ ಉಚಿತ ಔಷಧಿ ಪೂರೈಕೆ ಹಾಗೂ ಸಲಕರಣೆ ಪಡೆಯಲು ಸಹಾಯಧನ: ಮಲೆನಾಡಿನ ಕೆಲವು ಭಾಗ ಗಳಲ್ಲಿ, ರೈತರ ಬೆನ್ನೆಲುಬಾಗಿರುವ, ಅಡಿಕೆ ಬೆಳೆಗೆ, ಎಲೆ ಚುಕ್ಕೆ ರೋಗ ಭಾಧೆ ಕಾಣಿಸಿಕೊಂಡಿದ್ದು, ರೈತ ಸಮುದಾಯದಲ್ಲಿ ಆತಂಕದ ಛಾಯೆ ಮೂಡಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ತೋಟಗಾರಿಕಾ ಸಚಿವ ಶ್ರೀ ಮುನಿರತ್ನ ರವರು, ಇಂದು ತೋಟಗಾರಿಕಾ ಹಿರಿಯ ಅಧಿಕಾರಿಗಳೊಂದಿಗೆ, ಸಭೆ ನಡೆಸಿದರು, ರೋಗ ನಿಯಂತ್ರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ರೋಗ ಬಾಧೆಯಿಂದ ಹಾನಿ ಅನುಭವಿಸಿದ ರೈತರಿಗೆ, ಆರ್ಥಿಕ ಪರಿಹಾರ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಎಲೆ ಚುಕ್ಕೆ ರೋಗವನ್ನು ಹತೋಟಿಗೆ ತರುವ ಬಗ್ಗೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಸುಧಾರಿತ ಧೋಟಿಯನ್ನು ಒದಗಿಸುವ ಬಗ್ಗೆ, ಅಧಿಕಾರಿಗಳಿಗೆ, ನಿರ್ದೇಶನ ನೀಡುವುದಾಗಿ, ಸಚಿವ ಶ್ರಿ ಮುನಿರತ್ನ ತಿಳಿಸಿದರು.
ಎಷ್ಟು ಪ್ರಮಾಣದಲ್ಲಿ ಅಡಕೆ ಬೆಳೆ, ಎಲೇಚುಕ್ಕೆ ರೋಗ ದಿಂದಾಗಿ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷಾ ಕಾರ್ಯ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.
ಎಲೆಚುಕ್ಕೆ ರೋಗ ಬಾಧೆಯ ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ, ಗೃಹ ಸಚಿವರು, ತಕ್ಷಣವೇ ರೋಗವನ್ನು ಹತೋಟಿಗೆ ತರಲು ಅನುಕೂಲವಾಗುವಂತೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಇತರ ಸಹಾಯವನ್ನು ಸರಕಾರದಿಂದ ನೀಡಲಾಗುವುದು, ಎಂದು ಸಚಿವರು ತಿಳಿಸಿದರು.
ಶಾಂತವೇರಿ ಗೋಪಾಲಗೌಡ ಶತಮಾನೋತ್ಸವಕ್ಕೆ 1 ಕೋಟಿ!: ಶ್ರೀ ಶಾಂತವೇರಿ ಗೌಪಾಲ ಗೌಡರ ಜನ್ಮ ಶತಮಾನೋತ್ಸವ ಆಚರಿಸುವ ಬಗ್ಗೆ, ರಾಜ್ಯ ಸರಕಾರ ಒಂದು ಕೋಟಿ ರೂಪಾಯಿ, ಅನುದಾನ ಬಿಡುಗಡೆ ಮಾಡಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಅವರನ್ನು, ಇದಕ್ಕಾಗಿ ಅಭಿನಂದಿಸಿದ್ದಾರೆ.
ಅನುದಾನವನ್ನು ಶ್ರೀ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಆಚರಿಸುವ ಹಾಗೂ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು, ಅನುಕೂಲ ವಾಗುವಂತೆ ಬಿಡುಗಡೆ ಮಾಡಲಾಗಿದೆ ಎಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.