- ಅಂದೇ ಅಭ್ಯರ್ಥಿಗಳ ಘೋಷಣೆ: ಮಾಜಿ ಸಿಎಂ ಕುಮಾರಸ್ವಾಮಿ
- ಮೊದಲ ಹಂತದಲ್ಲಿ 120 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
- ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ಜನತಾ ಮಿತ್ರ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 1ರಂದು ಪಂಚರತ್ನ ರಥಯಾತ್ರೆ ಆರಂಭವಾಗಲಿದ್ದು, ಈ ವೇಳೆಯೇ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಗೊಂದಲವಿರುವ ಕ್ಷೇತ್ರಗಳ ಮುಖಂಡರನ್ನು ಕರೆದು ಸಭೆ ಮಾಡಿದ್ದಾರೆ. ಹೆಚ್.ಡಿ.ಕೋಟೆ, ಮಧುಗಿರಿ, ಶಿರಾ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ಮಾಡಲಾಗಿದೆ. ಆಕಾಂಕ್ಷಿಗಳ ಪರ ಲಾಬಿಗೆ ನೂರಾರು ಬೆಂಬಲಿಗರು ಬಂದಿದ್ದಾರೆ. ಮೊದಲ ಹಂತದಲ್ಲಿ 120 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ರಾಹುಲ್, ಸೋನಿಯಾ ಬಂದ್ರೂ ಪ್ರಯೋಜನ ಇಲ್ಲ!: ಮೈಸೂರು ಭಾಗದಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕಾ ರ್ಯಾಲಿ ಮಾಡಿದ್ದಾರೆ. ಅವರ ಕುಟುಂಬದ ಎಲ್ಲ ಸದಸ್ಯರು ಬಂದರೂ ಹಿನ್ನಡೆ ಆಗಲ್ಲ. ಕರ್ನಾಟಕದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ. ಪಾದಯಾತ್ರೆಯಿಂದ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮುಗಿಯಲಿ. ನಮ್ಮ ಪಂಚರತ್ನ ಯಾತ್ರೆ ಏನು ಎಂದುತೋರಿಸುತ್ತೇನೆ ಎಂದು ಹೆಚ್ .ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜನರ ಸಮಸ್ಯೆ ಆಲಿಸಲು ಜನತಾ ಮಿತ್ರ
ಜೆಡಿಎಸ್ನ ಜಲಧಾರೆ ಕಾರ್ಯಕ್ರಮ ಯಶ್ವಸಿಯಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಾಕಿದ್ದೇವೆ. ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ಜನತಾ ಮಿತ್ರ ಮಾಡಿದ್ದೇವೆ ಬೆಂಗಳೂರಿನಲ್ಲಿ ಜೆಡಿಎಸ್ ಉಪಾಧ್ಯಕ್ಷ ಟಿ.ಎ ಶರವಣ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ಸಮಾರಂಭ ನಡೆಯಲಿದ್ದು, ಲಕ್ಷಾಂತರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಜನರಿಗೋಸ್ಕರ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರ ಸಮಾರೋಪ ಕಾರ್ಯಕ್ರಮ ಅ.8ರಂದು ನಡೆಯುತ್ತದೆ ಎಂದು ಟಿ.ಎ ಶರವಣ ತಿಳಿಸಿದರು.
ಜೆಡಿಎಸ್ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ
ರಾಜ್ಯಸಭೆ ಚುನಾವಣೆ ವೇಳೆ ಅಡ್ಡ ಮತದಾನದ ಆರೋಪಿಸಿದ್ದು, ಜೆಡಿಎಸ್ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿರಿಂದ ನೋಟಿಸ್ ನೀಡಲಾಗಿದ್ದು, ಕಾರಣ ಕೇಳಿ ಕೋಲಾರ ಶಾಸಕ ಶ್ರೀನಿವಾಸ್ಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸ್ಪೀಕರ್ ಗೆ ಜೆಡಿಎಸ್ ಶಾಸಕ ವೆಂಕಟ್ರಾವ್ ನಾಡಗೌಡ ದೂರು ನೀಡಿದ್ದಾರೆ. ಈಗ ಕಾರಣ ಕೇಳಿ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.