- ಎಸ್ಎಸ್ಎಲ್ಸಿ ಪಾಸ್ ಆದವರಿಗೆ ಉದ್ಯೋಗವಕಾಶ
- ಕರ್ನಾಟಕ ರಾಜ್ಯ ಸಾರಿಗೆ 2000 ಹುದ್ದೆಗಳಿಗೆ ಅರ್ಜಿ
NAMMUR EXPRESS NEWS
ಬೆಂಗಳೂರು: ಎಸ್ಎಸ್ಎಲ್ಸಿ ಪಾಸ್ ಆದವರಿಗೆ ಉದ್ಯೋಗವಕಾಶವಿದ್ದು ಕರ್ನಾಟಕ ರಾಜ್ಯ ಸಾರಿಗೆ 2000 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದೆ.
ಸಂಸ್ಥೆ – ಕೆಎಸ್ಆರ್ಟಿಸಿ
ಹುದ್ದೆಯ ಹೆಸರು – ಚಾಲಕ ಹುದ್ದೆಯ
ಸಂಖ್ಯೆ – 2000
ವಿದ್ಯಾರ್ಹತೆ – ಎಸ್ಎಸ್ಎಲ್ಸಿ
ಉದ್ಯೋಗದ ಸ್ಥಳ – ಕರ್ನಾಟಕ
ವೇತನ ತಿಂಗಳಿಗೆ – 10,000 ರಿಂದ 20,000 ವರೆಗೆ.
ಅರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಸಂಸ್ಥೆಯಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಎಸ್ ಆರ್ ಟಿಸಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
- ವಯೋಮಿತಿ ಸಡಿಲಿಕೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಮಯಗಳ ಅನುಸಾರವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.
- ಅರ್ಜಿಯ ಶುಲ್ಕ : ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ಅಪ್ಲಿಕೇಷನ್ ಫೀಸ್ ಅಥವಾ ಅರ್ಜಿ ಶುಲ್ಕ ಇರುವುದಿಲ್ಲ.
ನೇಮಕಾತಿ ಪ್ರಕ್ರಿಯೆ : ಡ್ರೈವಿಂಗ್ ಟೆಸ್ಟ್ ಟ್ರೈನಿಂಗ್
ಅರ್ಜಿ ಸಲ್ಲಿಕೆ : - ಮೊದಲನೆಯದಾಗಿ ಕೆಎಸ್ ಆರ್ ಟಿಸಿ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಅದರಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ನೀವು ಪಡೆದಿದ್ದೀರಾ ಎಂದು ಖಚಿತಪಡಿಸಿಕೊಳ್ಳಬೇಕು.
- ಶೈಕ್ಷಣಿಕ ಅರ್ಹತೆ, ಐಡಿ ಪ್ರೊಫ್, ವಯಸ್ಸು, ರೆಸೂಮ್ ಯಾವುದೇ ಕೆಲಸದ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
- ಕೆಎಸ್ ಆರ್ ಟಿಸಿ ಡ್ರೈವರ್ ಹುದ್ದೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಇದನ್ನು ಸೇರಿಸಿಕೊಳ್ಳಿ. ಆನ್ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಅದರ ಮೂಲಕ ಸಂವಹನ ನಡೆಸಲು ಆ ಸಂಖ್ಯೆ ಮತ್ತು ಐಡಿ ಲಭ್ಯವಿರಬೇಕು.
- ಕೆಎಸ್ ಆರ್ ಟಿಸಿ ಆನ್ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಪೇಟ್ ಮಾಡಿಕೊಳ್ಳಿ. ನಿಮ್ಮ ಇತ್ತೀಚಿನ ಫೋಟೋ ಅಟೆಸ್ಟ್ ಮಾಡಿ ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕ ಇದ್ದರೆ ಅದನ್ನು ಪಾವತಿಸಬೇಕು.