- ರಾಜ್ಯ ಚುನಾವಣೆ ಅಖಾಡಕ್ಕೆ ಕೆ. ಆರ್. ಎಸ್ ಪಕ್ಷ!
- ಪ್ರತಿ ವಿಧಾನ ಸಭೆಯಲ್ಲೂ ಸ್ಪರ್ಧೆ ಮಾಡಲು ಸಿದ್ಧತೆ
- ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೋರಾಟ
NAMMUR EXPRESS NEWS
ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಪಕ್ಷಗಳ ಬಲಾಬಲ ಶುರುವಾಗಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳ ಎಲ್ಲಾ ಸರ್ಕಸ್ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ಪಕ್ಷ ಕೆ ಆರ್ ಎಸ್( ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ).
ಹೋರಾಟಗಾರ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಕೆ. ಆರ್. ಎಸ್ ಪಕ್ಷ ತಮ್ಮ ಹೋರಾಟದ ಮೂಲಕವೇ ಜನರ ಮನ ಗೆದ್ದಿದೆ.
ಅದರಲ್ಲೂ ಸರ್ಕಾರಿ ಕಚೇರಿ, ತಾಲೂಕು ಕಚೇರಿ, ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿರುವ ಬಡವರ ಶೋಷಣೆ, ಭ್ರಷ್ಟಾಚಾರ, ನಿರ್ಲಕ್ಷ್ಯದ ವಿರುದ್ಧ ದೊಡ್ಡ ಹೋರಾಟ ಮಾಡಿ ಈ ಪಕ್ಷದ ಅನೇಕರು ಜೈಲು ಸೇರಿದರೂ ಹೋರಾಟ ಕೈ ಬಿಡಲಿಲ್ಲ. ಈ ಕಾರಣ ರಾಜ್ಯದಲ್ಲಿ ಈ ಪಕ್ಷವನ್ನು ಜನ ನಿಧಾನಕ್ಕೆ ಒಪ್ಪುತ್ತಿದ್ದಾರೆ.
ಪ್ರತಿ ತಾಲೂಕಿಗೂ ನಾಡು ನುಡಿ ಜಾಗೃತಿ ಯಾತ್ರೆ ಮೂಲಕ ಒಮ್ಮೆ ರವಿಕೃಷ್ಣಾ ರೆಡ್ಡಿ ಇಡೀ ಕರ್ನಾಟಕ ಸುತ್ತಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದಿಂದ ಕೆ.ಆರ್.ಎಸ್ ಪಕ್ಷ ಕಣಕ್ಕೆ..!
- ಅರುಣ್ ಕಾನಹಳ್ಳಿ ಎಂಬ ಯುವ ಹೋರಾಟಗಾರ ಸ್ಪರ್ಧೆ
ತೀರ್ಥಹಳ್ಳಿ ಕ್ಷೇತ್ರದಿಂದ ಅರುಣ್ ಕಾನಹಳ್ಳಿ ಎಂಬ ಯುವ ಹೋರಾಟಗಾರ ಕಣಕ್ಕೆ ಇಳಿಯಲಿದ್ದಾರೆ. ಈಗಾಗಲೇ ಗ್ರಾಮ ಮಟ್ಟದಲ್ಲಿ ಜನಪರ ಹೋರಾಟದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಎಲ್ಲಾ ಸರ್ಕಾರಿ ಕಚೇರಿಗಳಿಗೂ ತೆರಳಿ ಅನ್ಯಾಯ ಖಂಡಿಸುತ್ತಿದ್ದಾರೆ. ತಮ್ಮ ವಿಶಿಷ್ಟ ಪ್ರಚಾರದ ಶೈಲಿ ಮೂಲಕ ಗಮನ ಸೆಳೆದಿದ್ದಾರೆ.
ಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಇವರ ಹೋರಾಟ ಶುರುವಾಗಿದ್ದು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್ ಕಚೇರಿ ಅವ್ಯವಸ್ಥೆ ವಿರುದ್ಧ ದನಿ ಎತ್ತುತ್ತಿದ್ದಾರೆ. ಅರುಣ್ ಕಾನಹಳ್ಳಿ ತೀರ್ಥಹಳ್ಳಿ ತಾಲೂಕಿನವರಾಗಿದ್ದು ಪಕ್ಷದ ಶಿವಮೊಗ್ಗ ಜಿಲ್ಲಾ ಸಂಚಾಲಕರೂ ಆಗಿದ್ದಾರೆ.
ಹೆಚ್ಚಿನ ಮಾಹಿತಿಗೆ ಅರುಣ್ ಕಾನಹಳ್ಳಿ ಫೇಸ್ಬುಕ್ ಪೇಜ್ ವೀಕ್ಷಿಸಬಹುದು.