ಬೆಂಗಳೂರು : ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿರುವ ಸುದೀಪ್ ವಿರುದ್ಧ ಚುನಾವಣಾ ಆಯೋಗಕ್ಕೆ ರಾಜ್ಯ ಜೆಡಿಎಸ್ ಹಾಗೂ ಶಿವಮೊಗ್ಗ ವಕೀಲ ಕೆ.ಪಿ.ಶ್ರೀಪಾಲ್ ದೂರು ನೀಡಿದ್ದಾರೆ.
ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದು, ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಚುನಾವಣೆ ಮುಗಿಯುವವರೆಗೂ ನಟನೆ, ಶೋ ಗಳ ಭಾವಚಿತ್ರವಿರುವ ಜಾಹೀರಾತು ಪ್ರಸಾರಕ್ಕೆ ತಡೆ ನೀಡುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಜೆಡಿಎಸ್ ಕಾನೂನು ವಿಭಾಗ ದೂರು ನೀಡಿದೆ
ಚುನಾವಣಾ ಸಂಬಂಧ ನಟ ಸುದೀಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಮಾಮ ಅಂತಲೇ ಸಿಎಂ ಅವ್ರನ್ನ ಕರೆಯುವೆ, ಬೊಮ್ಮಾಯಿ ಅವ್ರು ನನ್ನ ಅಂಕಲ್, ಅವ್ರ ಪರ ನಿಲ್ಲುವೆ. ಸಿಎಂ ಆಗಿ ಬೊಮ್ಮಾಯಿ ಅಂಕಲ್ ಉತ್ತಮ ಕೆಲ್ಸ ಮಾಡಿದ್ದಾರೆ, ಪಕ್ಷಕ್ಕಾಗಿ ಬೊಮ್ಮಾಯಿ ಅಂಕಲ್ ಪ್ರಚಾರಕ್ಕೆ ಕರೆದ್ರೆ ಹೋಗುವೆ. ಅವ್ರು ಎಲ್ಲಿ ಹೇಳ್ತಾರೋ ಅಲ್ಲಿ ಹೋಗುವೆ ಪ್ರಚಾರ ಮಾಡುವೆ.ನನ್ನ ಕಷ್ಟ ಕಾಲದಲ್ಲಿ ಕೆಲವರು ನೆರವಾಗಿದ್ದಾರೆ. ನನ್ನ ಕೆಲ ಹಿತೈಷಿಗಳ ಪರ ಪ್ರಚಾರ ಮಾಡುವೆ, ಬೇರೆ ಪಕ್ಷದ ಹಿತೈಷಿಗಳು ನನ್ನ ಕರೆದ್ರೂ ಹೋಗುವೆ. ನಾನು ಚುನಾವಣೆಗೆ ಯಾವುದೇ ಕಾರಣಕ್ಕೂ ನಿಲ್ಲಲ್ಲ, ಚುನಾವಣೆಗೆ ಸ್ಪರ್ಧಿಸೋ ಶಕ್ತಿಯೂ ನನ್ನಲ್ಲಿ ಇಲ್ಲ ಎಂದು ಹೇಳಿದ್ದರು. ಹಾಗಾಗಿ ಇದೀಗ ಸುದೀಪ್ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.
Related Posts
Add A Comment