- ಮೋಡ ಕವಿದ ವಾತಾವರಣ: ಮಳೆ ಸಾಧ್ಯತೆ
- ಅಡಿಕೆ, ಇತರೆ ಬೆಳೆಗಳಿಗೆ ನೀರಿಲ್ಲದೆ ರೈತರ ಪರದಾಟ
NAMMUR EXPRESS NEWS
ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿರುವ ನಡುವೆ ಮುಂದಿನ ಐದು ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ.
ಶುಕ್ರವಾರ ರಾಜ್ಯದ ಕೆಲವೆಡೆ ಮೂಡ ಕವಿದ ವಾತಾವರಣ ಕಂಡು ಬಂದಿರುವ ಜೊತೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,ಕೋಲಾರ,ಮಂಡ್ಯ, ಮೈಸೂರು,ತುಮಕೂರು ಮತ್ತು ವಿಜಯನಗರದಲ್ಲಿ ಏ.22 – 26ರವರೆಗೆ ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಮುಂದಿನ ನಾಲ್ಕು ದಿನ ಮಳೆ ಬೀಳಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಎ.22,23 ರಂದು ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಲಬುರಗಿಯಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾದರೆ, ರಾಯಚೂರು 40.2 ವಿಜಯಪುರ 39.4 ಮತ್ತು ಬಳ್ಳಾರಿ 39.1 ಉಷ್ಣಾಂಶ ವರದಿಯಾಗಿದೆ.
ಅಡಿಕೆ, ಇತರೆ ಗಿಡ ಮರಗಳಿಗಿಲ್ಲ ನೀರು!
ಮಲೆನಾಡು, ಕರಾವಳಿ ಭಾಗದಲ್ಲಿ ನೀರಿಲ್ಲದ ಕಾರಣ ಅಡಿಕೆ, ಇತರೆ ಮರ ಗಿಡಗಳು ಸಂಪೂರ್ಣ ಒಣಗಿ ಬೆಳೆ ಇಲ್ಲದಂತಾಗಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ.
ಕುಡಿಯಲು ನೀರಿಲ್ಲ.. ಬರಗಾಲವಾಗುತ್ತಾ?
ರಾಜ್ಯದ ಅನೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನದಿ, ಬಾವಿ, ನೀರಿನ ಮೂಲಗಳು ಬತ್ತಿ ಹೋಗಿವೆ.