- ಜೂ.14ರ ತನಕ ಉಚಿತವಾಗಿ ಅಪ್ ಡೇಟ್ ಮಾಡಲು ಅರ್ಜಿ
- ಏನೇನು ಬದಲಾವಣೆ ಮಾಡಬಹುದು? ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ಬೆಂಗಳೂರು: ಆನ್ಲೈನ್ನಲ್ಲಿ ಸಾರ್ವಜನಿಕರು ತಮ್ಮ ವಿಳಾಸವನ್ನು ಅಗತ್ಯ ಗುರುತಿನ ದಾಖಲೆಗಳನ್ನು ಒದಗಿಸಿ ಜೂ.14ರ ತನಕ ಉಚಿತವಾಗಿ ಅಪ್ ಡೇಟ್ ಮಾಡಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅವಕಾಶ ನೀಡಿದೆ.
ಆದರೆ, 10 ವರ್ಷಗಳಿಂದ ವಿಳಾಸ ಮತ್ತು ಗುರುತಿನ ದಾಖಲೆಗಳನ್ನು ಅಪ್ಡೇಟ್ ಮಾಡದವರಿಗಷ್ಟೇ, ಜೂ.14ರ ತನಕ ಆನ್ ಲೈನ್ನಲ್ಲಿ ಉಚಿತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಏನೇನು ಅವಕಾಶ?: ಹೆಸರು, ಲಿಂಗ, ಜನ್ಮ ದಿನಾಂಕ, ಪೋಟೊ, ಮೊಬೈಲ್ ನಂಬರ್ ಮತ್ತು ಬಯೋಮೆಟ್ರಿಕ್ ಗಳನ್ನು ಪರಿಷ್ಕರಿಸಲು ಸಾರ್ವಜನಿಕರು ಸಮೀಪದ ಆಧಾರ್ ಕೇಂದ್ರಕ್ಕೆ ತೆರಳಬೇಕು. ಇವುಗಳನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಲು ಸಾಧ್ಯವಿಲ್ಲ. ಆಧಾರ್ ಕೇಂದ್ರಕ್ಕೆ ತೆರಳಿ ಅಪ್ ಡೇಟ್ ಮಾಡಿಸಿದರೆ 50 ರೂ. ಶುಲ್ಕವನ್ನು ತೆರಬೇಕಾಗುತ್ತದೆ. ಎಂದು ಯುಐಡಿಎಐ ಸ್ಪಷ್ಟಿಕರಣ ನೀಡಿದೆ.