ಎಬಿವಿಪಿ ಅಧ್ಯಕ್ಷನ ಕಾಮ ಕೇಸ್: ಯುವ ಕಾಂಗ್ರೆಸ್ ಪ್ರತಿಭಟನೆ!
– ತೀರ್ಥಹಳ್ಳಿಯಲ್ಲಿ ಎನ್ ಎಸ್ ಯು ಐ, ಯುವ ಕಾಂಗ್ರೆಸ್ ಪ್ರತಿಭಟನೆ
– ನೂರಾರು ವಿದ್ಯಾರ್ಥಿಗಳಿಂದ ಮೆರವಣಿಗೆ
– ಶಾಸಕ ಆರಗ ಜ್ಞಾನೇಂದ್ರ ಉತ್ತರಿಸಲು ಅಗ್ರಹ
– ಕಿಮ್ಮನೆ, ಆರ್ ಎಂ ಸೇರಿ ಅನೇಕರು ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಎಬಿವಿಪಿ ಅಧ್ಯಕ್ಷ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯು ಐ ಹಾಗೂ ವಿದ್ಯಾರ್ಥಿಗಳು ತೀರ್ಥಹಳ್ಳಿಯ ಬಾಳೇಬೈಲು ಡಿಗ್ರಿ ಕಾಲೇಜಿನಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಆರೋಪಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಜೊತೆಗೆ ಸಹಕಾರ ನೀಡಿದ ಸಂಘಟನೆ ಮತ್ತು ಇನ್ನಿತರ ವಿರುದ್ಧ ತನಿಖೆ ಆಗಬೇಕು.
ಪೋಕ್ಸೋ ಕಾಯ್ದೆ ಅಡಿ ಆತನನ್ನು ಬಂಧಿಸಿ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಬೇಕು ಹಾಗೂ ಇವರಿಗೆ ಸಹಕರಿಸಿದ ಎಬಿವಿಪಿ ಮುಖಂಡರು ಪ್ರಮುಖ ಪ್ರಭಾವಿ ನಾಯಕರನ್ನು ಕೂಡ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಡಾ. ಆರ್ ಎಂ ಮಂಜುನಾಥಗೌಡ, ಮುಡುಬ ರಾಘವೇಂದ್ರ, ಕೆಸ್ತುರು ಮಂಜುನಾಥ್, ಯುವ ಘಟಕದ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಸುಶೀಲಾ ಶೆಟ್ಟಿ, ಅಶ್ವಲ್ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.
ಎನ್ ಎಸ್ ಯು ಐ ತೀರ್ಥಹಳ್ಳಿ ಅಧ್ಯಕ್ಷ ಸುಜಿತ್,ಎನ್ ಎಸ್ ಯು ಐ ಪ್ರಮುಖರಾದ ಮೌಸಂ,ಪ್ರತಾಪ್, ಸುಜಿತ್, ಸಾತ್ವಿಕ್ ಹೊಸ ಅಗ್ರಹಾರ, ನಿಖಿಲ್ ಸೇರಿದಂತೆ ಕಾಲೇಜಿನ ಅನೇಕ ಸಂಘಟನೆಗಳ ಪ್ರಮುಖರು ಇದ್ದರು.
ತೀರ್ಥಹಳ್ಳಿಯ ಬಾಳೆಬೈಲು ಕಾಲೇಜಿನ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಸಭೆ ನಡೆಸಿದರು
HOW TO APPLY : NEET-UG COUNSELLING 2023