ಸಕಲೇಶಪುರದಿಂದ ಕರಾವಳಿಗೆ ಸುರಂಗ ಮಾರ್ಗ!
– ಧರ್ಮಸ್ಥಳ, ಕುಕ್ಕೆ, ಕರಾವಳಿ, ಬೆಂಗಳೂರು ಪ್ರಯಾಣ ಸಲೀಸು
– ಶಿರಾಡಿ ಘಾಟ್ನಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ?
NAMMUR EXPRESS NEWS
ಹಾಸನ: ಶಿರಾಡಿ ಘಾಟ್ನಲ್ಲಿನ ಟ್ರಾಫಿಕ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದೀಗ ಸುರಂಗ ಮಾರ್ಗ ಮಾಡಲಾಗುತ್ತಿದೆ. ಕರಾವಳಿ ಹಾಗೂ ಹಾಸನ ಬೆಂಗಳೂರು ಪ್ರಯಾಣಿಕರಿಗೆ ಇದು ಅನುಕೂಲ ಆಗಲಿದೆ. ಜೊತೆಗೆ ಧರ್ಮಸ್ಥಳ, ಕುಕ್ಕೆ ಪ್ರವಾಸಿಗರಿಗೆ ಹೆಚ್ಚು ಅನುಕೂಲ ಆಗಲಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆಯವರಗೆ 30 ಕಿ.ಮಿ ಸುರಂಗ ರಸ್ತೆ ನಿರ್ಮಿಸಲಾಗಿದ್ದು ಇದರಲ್ಲಿ ಮೂರು ಬೆಟ್ಟಗಳಲ್ಲಿ 3.8 ಕಿ.ಮಿ. ಸುರಂಗ ಹಾಗೂ ಪಶ್ಚಿಮಘಟ್ಟದ ಪ್ರಪಾತದಲ್ಲಿ ನಾಲ್ಕು ಕಿ.ಮಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಶಿರಾಡಿಘಾಟ್ನಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಒದಗಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹಾಸನದಿಂದ ಸಕಲೇಶಪುರದ ಹೆಗದ್ದೆ ಗ್ರಾಮದವರಗೆ ನಡೆಯುತ್ತಿರುವ 45 ಕಿ.ಮಿ ಚುತುಷ್ಪಥ ರಸ್ತೆಯಲ್ಲಿ ಸಾಕಷ್ಟು ಅವೈಜ್ಞಾನಿಕ ಕಾಮಗಾರಿ ನಡೆದಿರುವುದು ಗಮನಕ್ಕೆ ಬಂದಿದೆ. ಶೀಘ್ರ ಇಂತಹ ಸ್ಥಳಗಳಲ್ಲಿ ಅಗತ್ಯ ಕಾಮಗಾರಿ ನಡೆಸುವ ಮೂಲಕ ಮಾನವ ಪ್ರಾಣಹಾನಿ ತಡೆಒಡ್ಡಬೇಕು. ಮಲೆನಾಡಿನ ಪ್ರದೇಶದಲ್ಲಿ ಹಾದುಹೋಗಿರುವ ಹೆದ್ದಾರಿಯ ಕಣಿವೆ ಪ್ರದೇಶದಲ್ಲಿ ಹೆದ್ದಾರಿ ಇಲಾಖೆ ನಿರ್ಮಾಣ ಮಾಡುತ್ತಿರುವ ಗ್ಯಾಬ್ರೀಯನ್ ವಾಲ್ ಬದಲಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಸೀಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಲೋಕೋಪಯೋಗಿ ಕಾರ್ಯದರ್ಶಿ ಸತ್ಯನಾರಾಯಣ ಸೇರಿ ಹಲವರು ಇದ್ದರು.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023